ಕಾಸರಗೋಡು: ಕೆರೆಯಲ್ಲಿ ಮುಳುಗಿ ಯುವಕ ಮೃತಪಟ್ಟ ಘಟನೆ ಕುಂಬಳೆ ಠಾಣಾ ಬಂದ್ಯೋಡು ಸಮೀಪದ ಇಚ್ಲಂಗೋಡು ಎಂಬಲ್ಲಿ ನಡೆದಿದೆ.
ಜೈನುದ್ದಿನ್ ರವರ ಪುತ್ರ ಸಿನಾನ್ (20) ಮೃತ ಯುವಕ. ಇಚ್ಲಂಗೋಡು ಚಿನ್ನಮೊಗರ್ ಎಂಬಲ್ಲಿ ಸ್ನೇಹಿತರ ಜೊತೆ ಸ್ನಾನಕ್ಕಿಳಿದ ಸಿನಾನ್ ನೀರು ಪಾಲಾಗಿದ್ದಾನೆ.ತಕ್ಷಣ ಸಿನಾನ್ ಗೆ ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ವೇಳೆ ಸಿನಾನ್ ಮೃತಪಟ್ಟಿದ್ದಾರೆ. ಸಿನಾನ್ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.ಈ ಕುರಿತು ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
