ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರು ಇಂದು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದರು, ಜೀರ್ಣೋದ್ಧಾರ ಕಾರ್ಯಗಳನ್ನು ವೀಕ್ಷಿಸಿ ಸಮಿತಿಯವರೊಂದಿಗೆ ಮಾತನಾಡಿದ ಅವರು ಈ ಹಿಂದೆಯೂ ಅಮ್ಮನಿಗೆ ಮಹಾಸೇವೆಯನ್ನು ನೀಡಿದ್ದೇನೆ, ಮಾರಿಯಮ್ಮನ ದೇಗುಲ ದಕ್ಷಿಣ ಭಾರತದಲ್ಲಿಯೇ ವಿಶಿಷ್ಟ ಶೈಲಿಯಲ್ಲಿ ನಿರ್ಮಾಣವಾಗುತ್ತಿದೆ, ತುಳುನಾಡಿನಲ್ಲಿ ಎಲ್ಲಾ ಜಾತಿಯವರು ಒಟ್ಟಾಗಿ ಮಾಡುವ ಯಾವುದೇ ಕೆಲಸ ಕೂಡಾ ಜಯ ಸಾದಿಸುತ್ತದೆ, ಹಾಗಾಗಿ ಹೊಸ ಮಾರಿಗುಡಿಯ ಮಾರಿಯಮ್ಮನ ದೇಗುಲವು ಕೂಡಾ ಸರ್ವಜಾತಿಯವರ ಬೆಂಬಲದಿಂದ ಬಹಳ ಸುಂದರವಾಗಿ ಮೂಡಿಬರಲಿದೆ ಎಂದರು. ಜಾಗತಿಕ ಬಂಟರ ಸಂಘದ ಅಧ್ಯಕ್ಷನಾಗಿ ಬಂಟ ಸಮುದಾಯ ಮತ್ತು ಮುಂಬೈ ನಲ್ಲಿ ನೆಲೆಸಿರುವ ಎಲ್ಲರೂ ಅಮ್ಮನ ದೇಗುಲ ನಿರ್ಮಾಣಕ್ಕೆ ಶಿಲಾ ಸೇವೆ ನೀಡಬೇಕು ಎಂದು ಹೇಳಿದರು, ಶಿಲಾಸೇವೆ ಎನ್ನುವುದು ಅತ್ಯದ್ಭುತ ಕಲ್ಪನೆಯಾಗಿದ್ದು, ಇಷ್ಟು ದೊಡ್ಡ ಮಟ್ಟದ ದೇವಸ್ಥಾನ ದಕ್ಷಿಣ ಭಾರತದಲ್ಲಿ ಎಲ್ಲಿಯೂ ಕಾಣಸಿಗುವುದಿಲ್ಲ, ಸರ್ವರ ಸಹಕಾರದಿಂದ ಆದಷ್ಟು ಬೇಗ ದೇವಸ್ಥಾನದ ನಿರ್ಮಾಣ ಕಾರ್ಯ ಮುಗಿಯಲಿ ಎಂದು ಶುಭಹಾರೈಸಿದರು.

ಈ ಸಂದರ್ಭದಲ್ಲಿ ದೇವಳದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ಶ್ರೀನಿವಾಸ ತಂತ್ರಿ ಕಲ್ಯಾ ಶ್ರೀದೇವಿಯ ಸನ್ನಿಧಾನದಲ್ಲಿ ಪ್ರಾರ್ಥಿಸಿ, ದೇವಿಯ ಅನುಗ್ರಹ ಪ್ರಸಾದವನ್ನು ನೀಡಿದರು.

ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ರಮೇಶ್ ಹೆಗ್ಡೆ ಕಲ್ಯಾ, ಕಾರ್ಯನಿರ್ವಹಣಾಧಿಕಾರಿ ಶ್ರೀ ಪ್ರಶಾಂತ್ ಕುಮಾರ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾದ ಶ್ರೀ ದೇವಿಪ್ರಸಾದ್ ಶೆಟ್ಟಿ ಬೆಳಪು , ಶ್ರೀ ಗಂಗಾಧರ ಸುವರ್ಣ, ಶ್ರೀ ಮಾಧವ ಆರ್ ಪಾಲನ್, ವ್ಯವಸ್ಥಾಪನನಾ ಸಮಿತಿಯ ಮಾಜಿ ಅಧ್ಯಕ್ಷರಾದ ಶ್ರೀ ರತ್ನಾಕರ ಶೆಟ್ಟಿ ನಡಿಕೆರೆ, ಶ್ರೀ ಲೀಲಾಧರ ಜಿ. ಶೆಟ್ಟಿ, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕರಾದ ಶ್ರೀ ಯೋಗೀಶ್ ವಿ ಶೆಟ್ಟಿ ಬಾಲಾಜಿ,ಕಟ್ಟಡ ಸಮಿತಿಯ ಮುಖ್ಯ ಸಂಚಾಲಕರಾದ ಶ್ರೀ ಭಗವಾನ್ ದಾಸ್ ಶೆಟ್ಟಿಗಾರ್, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಶ್ರೀ ಜಗದೀಶ್ ಬಂಗೇರ, ಶ್ರೀ ರವೀಂದ್ರ ಎಂ, ಶ್ರೀ ಬಾಬು ಮಲ್ಲಾರ್, ಪಂಜಿತ್ತೂರು ಗುತ್ತು ಶ್ರೀ ರವಿರಾಜ್ ಶೆಟ್ಟಿ, ಶ್ರೀ ರಘುರಾಮ್ ಶೆಟ್ಟಿ ಕೊಪ್ಪಲಂಗಡಿ, ಶ್ರೀ ಕೃಷ್ಣ ಕುಮಾರ್ ಶೆಟ್ಟಿ, ದೇವಳದ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
