Tuesday, May 24, 2022

ಬ್ರಹ್ಮಾವರ: ಬೆಂಕಿ ಕಾಣಿಸಿಕೊಂಡ ಸ್ಥಿತಿಯಲ್ಲಿ ಕಾರು ಪತ್ತೆ; ಸುಟ್ಟು ಕರಕಲಾದ ಯುವಕ – ಯುವತಿ

ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮಂದಾರ್ತಿ ಸಮೀಪ ಸುಟ್ಟು ಕರಕಲಾದ ಕಾರು ಮತ್ತು ಕಾರಿನೊಳಗೆ ಜೋಡಿ ಮೃತದೇಹ ನಿಗೂಢವಾಗಿ ಪತ್ತೆಯಾಗಿದೆ.ಮಂದರ್ತಿ ಸಮೀಪ ಹೆಗ್ಗುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊತ್ತೂರು...
More

    Latest Posts

    BIG NEWS: ರಾಸಾಯನಿಕ ಸೋರಿಕೆ; 6 ವಿದ್ಯಾರ್ಥಿಗಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು

    ಮಡಿಕೇರಿ: ಲಾರಿಯಿಂದ ರಾಸಾಯನಿಕ ದ್ರವ ಸೋರಿಕೆಯಾದ ಪರಿಣಾಮ 6 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ನೆಲ್ಯಾಹುದಿಕೇರಿಯಲ್ಲಿ ನಡೆದಿದೆ. ಮಾಕುಟ್ಟ ಚೆಕ್ ಪೋಸ್ಟ್ ನಲ್ಲಿ...

    ಬಂಟ್ವಾಳ: ಮನೆಯ ಮಾಡಿನ ಹಂಚು ತೆಗೆದು ಕಳ್ಳತನ

    ಬಂಟ್ವಾಳ: ಮನೆಯ ಮಾಡಿನ ಹಂಚು ತೆಗೆದು ಮನೆಗೆ ನುಗ್ಗಿದ ಕಳ್ಳರು ನಗದು, ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಕೊಳ್ನಾಡು ಗ್ರಾಮದ ಕಟ್ಟೆ ಮನೆ ಎಂಬಲ್ಲಿ ನಡೆದಿದೆ.ಕೊಳ್ನಾಡು ಗ್ರಾಮ ಕಟ್ಟೆ ಮನೆ...

    ರಸ್ತೆ ಕಾಮಗಾರಿ ವಿರೋಧಿಸಿ ರಸ್ತೆಗೆ ಅಡ್ಡಲಾಗಿ ಮಲಗಿ ಪ್ರತಿಭಟಿಸಿದ ವೃದ್ಧೆ..!

    ಮಂಗಳೂರು: ಮಹಾನಗರಪಾಲಿಕೆ ಕಾಂಕ್ರೀಟೀಕರಣ ಮಾಡುವ ವೇಳೆ ವೃದ್ದ ಮಹಿಳೆಯೊಬ್ಬರು ಈ ಸ್ಥಳ ಖಾಸಗಿಯಾಗಿದ್ದು ಜಾಗ ನನ್ನದು ಎಂದು ನಡು ರಸ್ತೆಯಲ್ಲೇ ಮಲಗಿ ಅಡ್ಡಿಪಡಿಸಿದ ಘಟನೆ ಮಣ್ಣಗುಡ್ಡ ಗುರ್ಜಿ ಬಳಿ ಇಂದು...

    ಕುಕ್ಕೆ ಸುಬ್ರಮಣ್ಯ ದೇವರ ಸೇವೆಗೆ ತಮ್ಮನ್ನು ಮರುನೇಮಕ ಮಾಡುವಂತೆ DC ಗೆ ಮನವಿ

    ಸುಬ್ರಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪಂಚಪರ್ವ ಸಿಬ್ಬಂದಿಗಳನ್ನು ಕೆಲಸದಿಂದ ವಜಾಗೊಳಿಸಿದ್ದನ್ನು ಖಂಡಿಸಿ ಮತ್ತು ತಮ್ಮನ್ನು ಮರುನೇಮಕ ಮಾಡುವಂತೆ ಒತ್ತಾಯಿಸಿ ಪಂಚಪರ್ವ ಸಿಬ್ಬಂದಿಗಳು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳನ್ನು ಭೇಟಿಮಾಡಿ ಮನವಿ ಸಲ್ಲಿಸಿದರು.

    ಕನ್ನಡ ಕಲಿಕೆ ಕಡ್ಡಾಯ ಆದೇಶಕ್ಕೆ ತಡೆ ನೀಡಿದ ಹೈಕೋರ್ಟ್

    ಬೆಂಗಳೂರು: ರಾಜ್ಯದ ಪದವಿ ಕಾಲೇಜುಗಳಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಸರ್ಕಾರದ ಆದೇಶ ಪ್ರಶ್ನಿಸಿ ಸಂಸ್ಕೃತ ಭಾರತಿ ಟ್ರಸ್ಟ್ ಹಾಗೂ ಕೆಲ ವಿದ್ಯಾರ್ಥಿಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಎಸ್.ಆರ್ ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.

    ವಿಚಾರಣೆ ವೇಳೆ, ಸರ್ಕಾರದ ಪರ ವಕೀಲರು ವಾದ ಮಂಡನೆಗೆ ಮತ್ತಷ್ಟು ಕಾಲಾವಕಾಶ ಕೋರಿದರು. ಹಾಗೇಯೇ ಪ್ರಕರಣವನ್ನು ಬೇಸಿಗೆ ರಜೆ ನಂತರ ವಿಚಾರಣೆಗೆ ನಿಗದಿಪಡಿಸುವಂತೆ ಕೋರಿದರು. ಇದಕ್ಕೆ ಆಕ್ಷೇಪಿಸಿದ ವಿದ್ಯಾರ್ಥಿಗಳ ಪರ ವಕೀಲರು, ರಾಜ್ಯ ಸರ್ಕಾರ ಪ್ರಕರಣವನ್ನು ಪ್ರತಿ ಬಾರಿ ಮುಂದೂಡಿಕೊಂಡೇ ಬರುತ್ತಿದೆ. ವಿದ್ಯಾರ್ಥಿಗಳ ಭವಿಷ್ಯ ಅಡಕತ್ತರಿಗೆ ಸಿಲುಕುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ತಮಗಿಷ್ಟ ಬಂದ ಭಾಷೆ ಅಧ್ಯಯನ ಮಾಡಲು ಸ್ವತಂತ್ರರು ಎಂಬುದನ್ನು ನ್ಯಾಯಾಲಯ ಪರಿಗಣಿಸಬೇಕು. ಸರ್ಕಾರ ಬೇಸಿಗೆ ರಜೆಯೇನು, ಒಂದು ವರ್ಷದ ನಂತರವೇ ವಾದ ಮಂಡಿಸಲಿ ಎಂದರು.

    ವಾದ – ಪ್ರತಿವಾದ ಆಲಿಸಿದ ಪೀಠ, ಕೇಂದ್ರ ಸರ್ಕಾರ ಈಗಾಗಲೇ ತನ್ನ ನಿಲುವು ಸ್ಪಷ್ಟಪಡಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಯಾವುದೇ ಭಾಷೆಯ ಕಲಿಕೆ ಕಡ್ಡಾಯ ಅಲ್ಲವೆಂದು ಹೇಳಿದೆ. ಅದರಂತೆ, ರಾಜ್ಯದ ನಿಲುವು ಕೇಂದ್ರದ ನೀತಿಗೆ ವಿರುದ್ಧವಾಗಿದೆ. ಇನ್ನು ಕಡ್ಡಾಯ ಕಲಿಕೆ ವಿಚಾರವನ್ನು ಮರುಪರಿಶೀಲಿಸಿ ಸೂಕ್ತ ನಿರ್ಣಯ ಕೈಗೊಳ್ಳುವಂತೆ ಸರ್ಕಾರಕ್ಕೆ ನ್ಯಾಯಾಲಯವೂ ಮೊದಲಿನಿಂದ ಹೇಳುತ್ತಲೇ ಬಂದಿದೆ. ಆದ್ದರಿಂದ, ಸರ್ಕಾರದ ಆದೇಶಕ್ಕೆ ತಡೆ ನೀಡುತ್ತಿದ್ದೇವೆ ಎಂದು ಪೀಠ ಸ್ಪಷ್ಟಪಡಿಸಿತು.

    ರಾಜ್ಯದ ಕಾಲೇಜುಗಳಲ್ಲಿ ಕನ್ನಡ ಭಾಷೆಯನ್ನು ವ್ಯಾವಹಾರಿಕ ಮಟ್ಟದಲ್ಲಿ ಕಲಿಸಲು ರಾಜ್ಯ ಸರ್ಕಾರ 2021ರ ಆಗಸ್ಟ್ 7 ಮತ್ತು ಸೆಪ್ಟೆಂಬರ್ 15ರಂದು ಆದೇಶ ಹೊರಡಿಸಿತ್ತು. ಈ ಆದೇಶ ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ರಾಜ್ಯ ಸರ್ಕಾರ ಕನ್ನಡವನ್ನು ಸಮಾಜದೊಂದಿಗೆ ವ್ಯವಹರಿಸುವಷ್ಟಾದರೂ ಕಲಿಸುವ ಸದುದ್ದೇಶದಿಂದ ಇಂತಹ ಕನ್ನಡ ಕಲಿಕೆಯನ್ನು ಕಾಲೇಜು ಹಂತದಲ್ಲಿ ತಂದಿದ್ದೇವೆ ಎಂದು ಸಮರ್ಥಿಸಿಕೊಂಡಿತ್ತು.

    ಇದನ್ನು ಅಲ್ಲಗೆಳೆದಿದ್ದ ಹೈಕೋರ್ಟ್, ಹೊರ ರಾಜ್ಯಗಳ ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆಯಾಗಲಿದೆ. ಆದೇಶ ಮರುಪರಿಶೀಲಿಸಿ ಎಂದು ಸೂಚಿಸಿತ್ತು. ನಂತರ ಹೈಕೋರ್ಟ್ ಸೂಚನೆಯಂತೆ ಸ್ಪಷ್ಟನೆ ನೀಡಿದ್ದ ಕೇಂದ್ರ ಸರ್ಕಾರ, ಎನ್ಇಪಿಯಲ್ಲಿ ಯಾವುದೇ ಭಾಷೆಯ ಕಲಿಕೆ ಕಡ್ಡಾಯವಲ್ಲ ಎಂದಿತ್ತು.

    Latest Posts

    BIG NEWS: ರಾಸಾಯನಿಕ ಸೋರಿಕೆ; 6 ವಿದ್ಯಾರ್ಥಿಗಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು

    ಮಡಿಕೇರಿ: ಲಾರಿಯಿಂದ ರಾಸಾಯನಿಕ ದ್ರವ ಸೋರಿಕೆಯಾದ ಪರಿಣಾಮ 6 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ನೆಲ್ಯಾಹುದಿಕೇರಿಯಲ್ಲಿ ನಡೆದಿದೆ. ಮಾಕುಟ್ಟ ಚೆಕ್ ಪೋಸ್ಟ್ ನಲ್ಲಿ...

    ಬಂಟ್ವಾಳ: ಮನೆಯ ಮಾಡಿನ ಹಂಚು ತೆಗೆದು ಕಳ್ಳತನ

    ಬಂಟ್ವಾಳ: ಮನೆಯ ಮಾಡಿನ ಹಂಚು ತೆಗೆದು ಮನೆಗೆ ನುಗ್ಗಿದ ಕಳ್ಳರು ನಗದು, ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಕೊಳ್ನಾಡು ಗ್ರಾಮದ ಕಟ್ಟೆ ಮನೆ ಎಂಬಲ್ಲಿ ನಡೆದಿದೆ.ಕೊಳ್ನಾಡು ಗ್ರಾಮ ಕಟ್ಟೆ ಮನೆ...

    ರಸ್ತೆ ಕಾಮಗಾರಿ ವಿರೋಧಿಸಿ ರಸ್ತೆಗೆ ಅಡ್ಡಲಾಗಿ ಮಲಗಿ ಪ್ರತಿಭಟಿಸಿದ ವೃದ್ಧೆ..!

    ಮಂಗಳೂರು: ಮಹಾನಗರಪಾಲಿಕೆ ಕಾಂಕ್ರೀಟೀಕರಣ ಮಾಡುವ ವೇಳೆ ವೃದ್ದ ಮಹಿಳೆಯೊಬ್ಬರು ಈ ಸ್ಥಳ ಖಾಸಗಿಯಾಗಿದ್ದು ಜಾಗ ನನ್ನದು ಎಂದು ನಡು ರಸ್ತೆಯಲ್ಲೇ ಮಲಗಿ ಅಡ್ಡಿಪಡಿಸಿದ ಘಟನೆ ಮಣ್ಣಗುಡ್ಡ ಗುರ್ಜಿ ಬಳಿ ಇಂದು...

    ಕುಕ್ಕೆ ಸುಬ್ರಮಣ್ಯ ದೇವರ ಸೇವೆಗೆ ತಮ್ಮನ್ನು ಮರುನೇಮಕ ಮಾಡುವಂತೆ DC ಗೆ ಮನವಿ

    ಸುಬ್ರಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪಂಚಪರ್ವ ಸಿಬ್ಬಂದಿಗಳನ್ನು ಕೆಲಸದಿಂದ ವಜಾಗೊಳಿಸಿದ್ದನ್ನು ಖಂಡಿಸಿ ಮತ್ತು ತಮ್ಮನ್ನು ಮರುನೇಮಕ ಮಾಡುವಂತೆ ಒತ್ತಾಯಿಸಿ ಪಂಚಪರ್ವ ಸಿಬ್ಬಂದಿಗಳು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳನ್ನು ಭೇಟಿಮಾಡಿ ಮನವಿ ಸಲ್ಲಿಸಿದರು.

    Don't Miss

    ಕುಲಶೇಖರ ಕಲ್ಪನೆ ಬಳಿ ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಮರ

    ಮಂಗಳೂರು: ಎರಡು ಮೂರು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ಕಾರಣ ಮಂಗಳೂರು ಕುಲಶೇಖರ ಕಲ್ಪನೆ ಬಳಿ ಬೃಹತ್ ಮರವೊಂದು ಧರಾಶಾಹಿಯಾಗಿದೆ. ರಸ್ತೆ ಬದಿಯಲ್ಲಿದ್ದ ಮರವು ಬುಡಸಮೇತ ಕಿತ್ತು ರಸ್ತೆಗೆ ಅಡ್ಡಲಾಗಿ...

    SSLC Result 2022: ಒಟ್ಟಿಗೆ ಪರೀಕ್ಷೆ ಬರೆದ ತಾಯಿ,ಮಗಳು – ಪಾಸ್​

    ವಿಜಯನಗರ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಒಟ್ಟಿಗೆ ಬರೆದ ತಾಯಿ - ಮಗಳು ಉತ್ತೀರ್ಣರಾಗಿದ್ದಾರೆ. ವಿಜಯನಗರದ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ನಿವಾಸಿ, ಚಿಲುಗೋಡಿ ಹೈಸ್ಕೂಲ್‌ ಶಿಕ್ಷಕ ಬಿ.ರಾಮಜ್ಜರ ಪತ್ನಿ ಸವಿತಾ (37) ಹಾಗೂ...

    ಕೆನಡಾ ಸಂಸತ್ ನಲ್ಲಿ ಮೊಳಗಿದ ಕನ್ನಡದ ಕಂಪು…!!

    ಕೆನಡಾ : ಕೆನಡಾ ಸಂಸತ್ ನಲ್ಲಿ ಕನ್ನಡದಲ್ಲಿ ಭಾಷಣ ಮಾಡುವ ಮೂಲಕ ಕರ್ನಾಟಕ ಮೂಲದ ಕೆನಡಾ ಸಂಸದ ಚಂದ್ರ ಆರ್ಯ ಅವರು ಇತಿಹಾಸ ನಿರ್ಮಿಸಿದ್ದಾರೆ. ತುಮಕೂರು...

    ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಹೋಗಿ ಭೀಕರ ಅಪಘಾತ – ಇಬ್ಬರು ಯುವಕರು ಸ್ಥಳದಲ್ಲೇ ಸಾವು

    ಮೈಸೂರು : ಮೈಸೂರಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ನಂಜನಗೂಡು ಸಿಂಧುವಳ್ಳಿ ಬಳಿಯ ಹುಣಸನಾಳು...

    ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ : ಆರೋಪಿ ಬಂಧನ

    ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್​ ಇಟ್ಟು ಸ್ಫೊಟಿಸುವುದಾಗಿ ಇಂದು(ಶುಕ್ರವಾರ) ಮುಂಜಾನೆ ಬೆದರಿಕೆ ಹಾಕಿ ಕೆಲ ಕಾಲ ಆತಂಕ ಸೃಷ್ಟಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಾವನ ಮೇಲಿನ ಸೇಡಿಗಾಗಿ ಏರ್‌ಪೋರ್ಟ್‌ಗೆ...