ಕಾಣಿಯೂರು: ಮಧ್ಯರಾತ್ರಿ ಭಾರೀ ವೇಗವಾಗಿ ಬಂದು ಉಕ್ಕಿಹರಿಯುವ ಹೊಳೆಗೆ ಬಿದ್ದ ಕಾರು ಘಟನೆ ಜು.10 ರಂದು ನಡೆದಿದ್ದು, ಸಿಸಿಟಿವಿಯಲ್ಲಿ ಅವಘಡದ ದೃಶ್ಯ ಸೆರೆಯಾಗಿದೆ. ಮಂಜೇಶ್ವರ -ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಾಣಿಯೂರು ಸಮೀಪದ ಬೈತ್ತಡ್ಕ ಮಸೀದಿಯ ಸಮೀಪದ ಗೌರಿಹೊಳೆಯಲ್ಲಿ ಮಧ್ಯರಾತ್ರಿ 12 ಗಂಟೆ ಸಮಯಕ್ಕೆ ಅವಘಡ ಸಂಭವಿಸಿದೆ. ಕಾರು ಪುತ್ತೂರಿನಿಂದ ಕಾಣಿಯೂರು ಕಡೆ ಸಂಚರಿಸುತಿತ್ತು. ಅಪಘಾತಗೊಂಡಲ್ಲಿ ಕಾರಿನ ಬೋನೆಟ್ ಒಂದು ಭಾಗ ಸಿಕ್ಕಿದ್ದು, ಅದು ಮಾರುತಿ 800 ಎಂಬದರದ್ದು ಆಗಿದೆ. ಅಪಘಾತದ ವೇಗಕ್ಕೆ ಸೇತುವೆಯ ತಡೆಭೇಲಿಯ ಮೂರು ಕಂಬಗಳು ಮುರಿದು ಕಬ್ಬಿಣ ನೇತಾಡುತ್ತಿದೆ.
ಬೆಳ್ಳಂಬೆಳಗ್ಗೆ ಅಪಾರ ಜನ ಸೇರಿ ನದಿಯ ಇಕ್ಕೆಲಗಳಲ್ಲಿ ಹುಡುಕಾಟ ನಡೆಸಿದರೂ ಕಾರು ಪತ್ತೆಯಾಗಿಲ್ಲ. ಕಾರಿನಲ್ಲಿ ಎಷ್ಟು ಜನ ಇದ್ದರೂ, ಕಾರು ಯಾರದ್ದು ಎನ್ನುವ ಮಾಹಿತಿ ಇನ್ನೂ ಗೊತ್ತಾಗಿಲ್ಲ. ಬೆಳ್ಳಾರೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.
©2021 Tulunada Surya | Developed by CuriousLabs