Saturday, October 12, 2024
spot_img
More

    Latest Posts

    ಮಂಗಳೂರು:”ಕಂಬಳ ಸಮಿತಿ”ಯಿಂದಲೇ ಕಂಬಳಕ್ಕೆ ಅನ್ಯಾಯ;ಕೋರ್ಟ್ ಮೆಟ್ಟಿಲೇರಿದ ಸದಸ್ಯ

    ಮಂಗಳೂರು: ತುಳುನಾಡಿನ ಜಾನಪದ ಕ್ರೀಡೆ ಕಂಬಳಕ್ಕೆ ತಲೆ ತಲಾಂತರಗಳ ಇತಿಹಾಸವಿದ್ದು ಅದರ ರಕ್ಷಣೆಗಾಗಿ ರಾಜ್ಯ ಸರಕಾರ ರಚಿಸಿರುವ “ಕಂಬಳ ಸಮಿತಿ”ಯಿಂದಲೇ ಕಂಬಳಕ್ಕೆ ಅನ್ಯಾಯವಾಗುತ್ತಿದೆ ಎಂದು ಸಮಿತಿ ಸದಸ್ಯ ಕಳೆದೆರಡು ದಶಕಗಳಿಂದ ಕೋಣದ ಯಜಮಾನರಾಗಿರುವ ಲೋಕೇಶ್ ಶೆಟ್ಟಿ ಮುಚ್ಚೂರು, ಕಲ್ಕುಡೆ ಎಂಬವರು ಕೋರ್ಟ್ ಮೆಟ್ಟಿಲೇರಿದ್ದಾರೆ.

    ಉಭಯ ಜಿಲ್ಲೆಗಳ ಹಿರಿಯರು ಸೇರಿಕೊಂಡು 1999-2000ರಲ್ಲಿ “ಜಿಲ್ಲಾ ಕಂಬಳ ಸಮಿತಿ”ಯನ್ನು ಸ್ಥಾಪಿಸಿದ್ದು ಅದರದ್ದೇ ಆದ ಕಟ್ಟುಪಾಡುಗಳನ್ನು, ನಿಯಮಗಳನ್ನು ರೂಪಿಸಿರುತ್ತಾರೆ. ಆದರೆ 2021-2022ರಲ್ಲಿ ಈ ನಿಯಮಗಳನ್ನು ಗಾಳಿಗೆ ತೂರಿ ಒಂದಿಷ್ಟು ಜನರನ್ನು ಸೇರಿಸಿಕೊಂಡು ಹೊಸ ಸಮಿತಿ ರಚನೆ ಮಾಡಿರುತ್ತಾರೆ. ದ.ಕ ಜಿಲ್ಲಾ ಸಮಿತಿಯಲ್ಲಿ 90 ಅಜೀವ ಸದಸ್ಯರಿದ್ದು, 35 ಮಂದಿ ಸಾಮಾನ್ಯ ಸದಸ್ಯರಿದ್ದರೂ ಯಾವುದೇ ಸಭೆ ಕರೆದಿಲ್ಲ. ಈ ಬಗ್ಗೆ ಸಮಿತಿಯನ್ನು ಪ್ರಶ್ನಿಸಿ ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು ನ್ಯಾಯಾಲಯವು ಆದೇಶವನ್ನು ತಡೆಹಿಡಿದು ದಿನಾಂಕ 18-12-2021ರಂದು ಉಡುಪಿ ಜಿಲ್ಲಾ ನೊಂದಣಾಧಿಕಾರಿ ಇವರಿಗೆ ಜಿಲ್ಲಾ ಕಂಬಳ ಸಮಿತಿಯ ನಿಯಮದ ಪ್ರಕಾರ ಸಮಿತಿಯನ್ನು ರಚಿಸಲುಆದೇಶವನ್ನು ನೀಡಿತ್ತು.

    ರಾಜ್ಯ ಸರಕಾರ “ರಾಜ್ಯ ಕಂಬಳ ಸಮಿತಿ” ರಚನೆಯ ಬಗ್ಗೆ ಸೂಚನೆ ನೀಡಿದ್ದು ಇದನ್ನು ತಿಳಿದ ಕೆ.ಗುಣಪಾಲ್ ಕಡಂಬ ಎಂಬವರು 09-09-2009ರಲ್ಲಿ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಡಾ. ಜೀವಂದರ್ ಬಳ್ಳಾಲ್ ಇವರಿಗೆ ಕಂಬಳ ಚಟುವಟಿಕೆ ಹಾಗೂ ಜವಬ್ದಾರಿಯಿಂದ ದೂರ ಉಳಿಯುವಂತೆ ಮಾಹಿತಿ ಪತ್ರ ಕೂಡ ನೀಡಿರುತ್ತಾರೆ. ಮಾತ್ರವಲ್ಲದೆ ಕಂಬಳದಿಂದ ದೂರ ಉಳಿದುಕೊಂಡು ಕಂಬಳ ನಿರ್ವಹಣೆ ಮತ್ತು ಸಂರಕ್ಷಣೆ ಎಂಬ ಅಕಾಡೆಮಿ ಸ್ಥಾಪಿಸಿ ಕೋಣದ ಯಜಮಾನರುಗಳಿಂದ ಹಾಗೂ ಕಂಬಳ ಅಭಿಮಾನಿಗಳಿಂದ ದೇಣಿಗೆ ಸ್ವೀಕರಿಸಿ ಕರ್ನಾಟಕ ಸರಕಾರದಿಂದ ಸಹಾಯ ಧನ ಪಡೆದು ಯಾವುದೇ ಲೆಕ್ಕ ಪತ್ರವನ್ನು ಸರ್ಕಾರಕ್ಕೆ ನೀಡದೆ ವಂಚಿಸಿರುತ್ತಾರೆ. ಅವರ ಅಕಾಡೆಮಿಯಲ್ಲಿ ತರಬೇತಿ ಪಡೆದಿರುತ್ತಾನೆ ಎಂಬ ಒಂದೇ ಕಾರಣಕ್ಕೆ ತನ್ನ ಅಕಾಡೆಮಿಗೆ ಇನ್ನಷ್ಟು ಸಹಾಯಧನ ಬರಬೇಕು ಎಂಬ ದುರಾಸೆಯಿಂದ ಶ್ರೀನಿವಾಸ ಗೌಡ ಎಂಬ ವ್ಯಕ್ತಿಯ ಕೆಲವು ಓಟದ ದಾಖಲೆಗಳನ್ನು ಕಂಬಳ ಸಮಿತಿಯ ಯಾವುದೇ ಒಂದು ಪ್ರಮಾಣ ಪತ್ರವಿರದೇ ಕೋಣದ ಓಟದ ಸಮಯವನ್ನು ನಿಗದಿ ಪಡಿಸುವ ರತ್ನಾಕರ ಎಂಬ ವ್ಯಕ್ತಿಗೆ ನಿರ್ದೆಶನವನ್ನು ನೀಡಿ ಶ್ರೀನಿವಾಸ ಗೌಡ ಎಂಬ ಓಟಗಾರನ ಹೆಸರಿನಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿರುತ್ತಾರೆ.

    ರತ್ನಾಕರ ಯಾವುದೇ ಸರಕಾರದ ಪರವಾನಿಗೆ ಪಡೆಯದೇ ಕಂಬಳಗಳಲ್ಲಿ ಕಾರ್ಯನಿರ್ವಹಿಸಿರುತ್ತಾರೆ. ಇದರಿಂದ ಯುವ ಓಟಗಾರರ

    ಮನೋಸ್ಥೈರ್ಯ ಕುಂದಿದ್ದು, ಕಂಬಳಗಳಲ್ಲಿ ಯಥೇಚ್ಪವಾಗಿ ನಡೆಯುವಂತ ಜೂಜಾಟಕ್ಕೆ ಪರೋಕ್ಷವಾಗಿ ಸಹಕರಿಸುತ್ತಿದ್ದಾರೆ ಎಂದು ಲೋಕೇಶ್ ಶೆಟ್ಟಿ ಆರೋಪಿಸಿದ್ದಾರೆ.

    ಇತ್ತಿಚೆಗೆ ಕರ್ನಾಟಕ ರಾಜ್ಯ ಸರಕಾರವು “ರಾಜ್ಯ ಕಂಬಳ ಸಮಿತಿ” ರಚನೆಯ ಬಗ್ಗೆ ಸುತ್ತೋಲೆ ಹೊರಡಿಸಿದ್ದು ಸಮಿತಿಯ ಅಜೀವ ಸದಸ್ಯರೊಡನೆ ಚರ್ಚಿಸದೆ ತನಗೆ ಬೇಕಾದವರ ಹೆಸರನ್ನು ಬರೆದು ಸರಕಾರಕ್ಕೆ ಕಳುಹಿಸಿದ್ದಲ್ಲದೆ ಗುಣಪಾಲ್ ಕಡಂಬ ತಾವೇ ಅಧ್ಯಕ್ಷ ಎಂದು ಘೋಷಿಸಿಕೊಂಡಿದ್ದಾಗಿ ದೂರಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳು, ಕ್ರೀಡಾ ಸಚಿವರ ಸಮೇತ ವಿವಿಧ ಇಲಾಖೆಗಳು, ಜಿಲ್ಲಾಡಳಿತಕ್ಕೂ ದೂರು ನೀಡಲಾಗಿದ್ದು ಕಂಬಳ ಸಮಿತಿಯಲ್ಲಿ ನಡೆಯುತ್ತಿರುವ ಅನ್ಯಾಯವನ್ನು ನಿಲ್ಲಿಸಬೇಕಾಗಿ ಸಮಿತಿ ಸದಸ್ಯ ಲೋಕೇಶ್ ಶೆಟ್ಟಿ ಮನವಿ ಮಾಡಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss