ಮಂಗಳೂರು: ಕೋವಿಡ್ ನಿಯಮಾವಳಿಗಳ ಕಾರಣದಿಂದ ಅಲ್ಪ ಕಾಲ ಸ್ಥಗಿತವಾಗಿದ್ದ ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ಮತ್ತೆ ಚಾಲನೆ ಸಿಕ್ಕಿದೆ. ಸರ್ಕಾರ ಕೋವಿಡ್ ಕುರಿತ ನಿಯಮಗಳನ್ನು ಸಡಿಲಿಸಿದ ಕಾರಣದಿಂದ ಮತ್ತೆ ಕಂಬಳ ಕೂಟ ಆಯೋಜನೆಗೆ ಜಿಲ್ಲಾ ಕಂಬಳ ಸಮಿತಿ ಮುಂದಾಗಿದೆ.
ಇಂದು (ಜ.31) ನಡೆದ ಸಭೆಯಲ್ಲಿ ಜಿಲ್ಲಾ ಕಂಬಳ ಸಮಿತಿ ಸದಸ್ಯರು, ಕಂಬಳ ವ್ಯವಸ್ಥಾಪಕರು ಸೇರಿ ಹೊಸ ದಿನಾಂಕವನ್ನು ಪ್ರಕಟ ಮಾಡಲಾಗಿದೆ. ಫೆ.5ರಿಂದ ಬಾರಾಡಿ ಬೀಡು ಕಂಬಳದಿಂದ ಮತ್ತೆ ಚಾಲನೆ ಸಿಗಲಿದ್ದು, ಎ.16ರವರೆಗೆ ಈ ಋತುವಿನ ಕಂಬಳಗಳು ನಡೆಯಲಿದೆ.
ಕಂಬಳ ಕೂಟ-2021-22: ಪರಿಷ್ಕೃತ ವೇಳಾಪಟ್ಟಿ
05-02-2022 ಶನಿವಾರ: ಬಾರಾಡಿ ಬೀಡು ಕಂಬುಲ
13-02-2022 ರವಿವಾರ: ಅಡ್ವೆ ನಂದಿಕೂರ್
19-02-2022 ಶನಿವಾರ: ವಾಮಂಜೂರು ಕಂಬುಲ
26-02-2022 ಶನಿವಾರ: ಐಕಳ ಬಾವ ಕಂಬುಲ
05-03-2022 ಶನಿವಾರ: ಪೈವಳಿಕೆ ಕಂಬುಲ
12-03-2022 ಶನಿವಾರ: ಕಟಪಾಡಿ ಕಂಬುಲ
19-03-2022 ಶನಿವಾರ: ಪುತ್ತೂರು ಕಂಬುಲ
26-03-2022 ಶನಿವಾರ: ಬಂಗ್ರಕೂಳೂರು, ಮಂಗಳೂರು ಕಂಬುಲ
2-04-2022: ಉಪ್ಪಿನಂಗಡಿ
9-04-2022: ಬಂಗಾಡಿ
16-04-2022: ವೇಣೂರು