ಮಂಗಳೂರು: ತುಳುನಾಡಿನ ಕಾಂತಾರ ಸಿನಿಮಾ ಹಳ್ಳಿಯಿಂದ ದಿಲ್ಲಿಯವರೆಗೆ ಸದ್ದು ಮಾಡುತ್ತಿದೆ. ಇದರಿಂದಾಗಿ ಈ ಬಾರಿ ತುಳುನಾಡಿನ ಕಂಬಳ, ಕೋಲ, ನೇಮಗಳಿಗೆ ಇನ್ನಿಲ್ಲದ ಮಹತ್ವ ಬಂದಿದೆ. ಆದರೆ ಇಲ್ಲಿನ ಯಕ್ಷಗಾನ, ಕಂಬಳ ಕ್ರೀಡೆಗೆ ಸುಪ್ರೀಂಕೋರ್ಟ್‌ನ ಶಬ್ಧಮಾಲಿನ್ಯ ನಿಯಮ ನಿರ್ಬಂಧ ಆದೇಶದಿಂದ ಕರಿಛಾಯೆ ಆವರಿಸಿದೆ.
ಇದರಿಂದ ಮೇಳದ ಯಜಮಾನರು, ಕಂಬಳ ಸಂಘಟಕರು ಗೊಂದಲದಲ್ಲಿ ಸಿಲುಕಿದ್ದಾರೆ.
ಸುಪ್ರೀಂ ಕೋರ್ಟ್ ಶಬ್ಧಮಾಲಿನ್ಯ ನಿಯಮವನ್ನು ಎತ್ತಿಹಿಡಿದಿದ್ದು, 2005ರ ನಿಯಮವನ್ನು ಪಾಲಿಸುವಂತೆ ಖಡಕ್ ಆದೇಶ ನೀಡಿದೆ. ಈ ನಿಯಮದ ಪ್ರಕಾರ ರಾತ್ರಿ 10ರಿಂದ ಬೆಳಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕ ಬಳಕೆಗೆ ನಿರ್ಬಂಧವಿದ್ದು, ಇದು ಕರಾವಳಿ ಜಿಲ್ಲೆಯಲ್ಲಿ ಜಾತ್ರೆ, ಉತ್ಸವಗಳಿಗೆ ತೊಂದರೆಯಾಗಿದೆ.