ಮೂಡಬಿದಿರೆ: ಜೈನ ಕಾಶಿ ಮೂಡಬಿದಿರೆಯಲ್ಲಿರುವ ವಿಶ್ವ ಪ್ರಸಿದ್ಧಿ ಪಡೆದ ಸಾವಿರ ಕಂಬದ ಬಸದಿ ಮತ್ತು ಜೈನಕಾಶಿಗೆ ಇಂದು CRPF ಇನ್ಸ್‌ಪೆಕ್ಟರ್ ಭಾಬುಲಾಲ್ ಜಾಟ, CRPF ನ ರವಿ ನಾಯಕ ರವರು ಇತರ ಸಹೋದ್ಯೋಗಿಗಳೊಂದಿಗೆ ಭೇಟಿ ನೀಡಿ ಪರಮ ಪೂಜ್ಯ ಭಾರತ ಭೂಷಣ ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರ ಆಶೀರ್ವಾದ ಪಡೆದರು.

ತುಳುನಾಡ ರಕ್ಷಣಾ ವೇದಿಕೆ ಮತ್ತು ಧವಲತ್ರಯ ಜೈನಕಾಶಿ ಟ್ರಸ್ಟ್ (ರಿ.) ಇದರ ಸಹಯೋಗದೊಂದಿಗೆ ಸಾವಿರ ಕಂಬ ಬಸದಿ ಮೂಡಬಿದಿರೆಯಲ್ಲಿ ಎಪ್ರಿಲ್ 22 ರಂದು ಸಂಜೆ 4.30 ಕ್ಕೆ ನಡೆಯಲಿರುವ ಮತದಾನ ಜಾಗೃತಿ ಕಾರ್ಯಕ್ರಮದ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪು, ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ ಮತ್ತಿತರರು ಉಪಸ್ಥಿತರಿದ್ದರು.
