Thursday, August 11, 2022

ಮಂಗಳೂರು:ರಾಷ್ಟ್ರಧ್ವಜಕ್ಕೆ ಅಗೌರವ ತೋರಿಸಿದಲ್ಲಿ ಜೈಲು ಶಿಕ್ಷೆ ಶತಸಿದ್ಧ

ಮಂಗಳೂರು: ರಾಷ್ಟ್ರಧ್ವಜವನ್ನು ಮನೆಗಳು, ಕಟ್ಟಡಗಳ ಮೇಲ್ಗಡೆ ಹಾರಾಟ ಮಾಡಲು ಯಾವುದೇ ತೊಂದರೆಯಿಲ್ಲ. ಆದರೆ ಧ್ವಜಸಂಹಿತೆಯನ್ನು ಪಾಲಿಸದಿದ್ದಲ್ಲಿ ಮಾತ್ರ ಪ್ರಕರಣ ದಾಖಲಿಸಲಾಗುತ್ತದೆ. ಅಲ್ಲದೆ ಜೈಲು ಶಿಕ್ಷೆ ಶತಸಿದ್ಧ ಎಂದು ದ.ಕ.ಜಿ.ಪಂ ಮುಖ್ಯ...
More

  Latest Posts

  ಉಡುಪಿ: ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ‘ಆಟಿಡೊಂಜಿ ದಿನ’

  ಉಡುಪಿ: ತುಳುನಾಡ ರಕ್ಷಣಾ ವೇದಿಕೆ ಉಡುಪಿ ಘಟಕ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಆಗಸ್ಟ್-14 ರಂದು ಉಡುಪಿ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ನಡೆಯಲಿದೆ.ಕಾರ್ಯಕ್ರಮದಲ್ಲಿ ಪ್ರತೀಕ್ಷಾ ರಿಧಮಿಕ್ ವಾಯ್ಸ್ ಆಫ್...

  ಕಾರ್ಕಳ: ಮಹಿಳೆಗೆ ಸಂಬಂಧಿಕರಿಂದ ಕೊಲೆ ಬೆದರಿಕೆ: ದೂರು ದಾಖಲು

  ಕಾರ್ಕಳ: ಕಾರ್ಕಳ ಗಾಂಧಿಮೈದಾನದ ಬಳಿಯ ನಿವಾಸಿ ನಜೀಮಾ ಅವರಿಗೆ ಎರಡು ತಿಂಗಳ ಹಿಂದೆ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಒಡ್ಡಿದ ಕುರಿತು ಮೂರು ಮಂದಿಯ ಮೇಲೆ ಕಾರ್ಕಳ ನಗರ...

  ಕೇರಳದ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ತೇರ್ಗಡೆಯಾದ ತಾಯಿ-ಮಗ!

  ಕೇರಳ: ಕೇರಳದ ಮಲಪ್ಪುರಂನ ಮಹಿಳೆಯೊಬ್ಬರು ತನ್ನ ಮಗ 10 ನೇ ತರಗತಿಯಲ್ಲಿದ್ದಾಗ ಓದಲು ಪ್ರಾರಂಭಿಸಿದ್ದರು. ಆದರೆ, ಇದು ಕೇರಳ PSC ಪರೀಕ್ಷೆಗಳಿಗೆ ತಯಾರಾಗಲು ಅವರನ್ನು ಪ್ರೇರೇಪಿಸಿತು. ಇವರ ಕಲಿಕೆಯು ಇದೀಗ...

  ಮಂಗಳೂರು: ವಿವಿ ಕಾಲೇಜಿನಲ್ಲಿ ‘ಭಾರತ ಮಾತಾ ಪೂಜಾ ದಿನ’ಕ್ಕೆ CFI ವಿರೋಧ: ಜಿಲ್ಲಾಧಿಕಾರಿಗೆ ಮನವಿ

  ಮಂಗಳೂರು: ನಗರದ ಹಂಪನಕಟ್ಟೆ ವಿವಿ ಕಾಲೇಜಿನಲ್ಲಿ ಆ.11 ರಂದು ಆಯೋಜಿಸಿರುವ ‘ಭಾರತ ಮಾತಾ ಪೂಜಾ ದಿನ’ ಕಾರ್ಯಕ್ರಮವನ್ನು ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ವಿರೋಧಿಸಿದೆ. ಈ...

  “ಕಲಾ ಸೌರಭದ ಕಲಾಸೇವೆ ಅನುಪಮ”: ಚಂದ್ರಶೇಖರ್ ಬೆಲ್ಚಡ

  ಮಂಗಳೂರು: ‘ದಕ್ಷಿಣ ಕನ್ನಡ ದ ಶಕ್ತಿನಗರದಲ್ಲಿರುವ ಸಾನಿಧ್ಯ ವಿಶೇಷ ಮಕ್ಕಳ ಶಾಲೆ ಮಾನವೀಯ ಸೇವೆಯಲ್ಲಿ ಜಗ ಮೆಚ್ಚುವ ಕೆಲಸ ಮಾಡುತ್ತಿದೆ. ಬುದ್ದಿ ವಿಕಸಿತದಲ್ಲಿರದ ಮನಸ್ಸುಗಳನ್ನು ಒಗ್ಗೂಡಿಸಿ ಅವರ ಮಾನಸಿಕ ವಿಕಾಸಕ್ಕೆ ಬೇಕಾದ ಎಲ್ಲ ಪ್ರಯತ್ನ ಇಲ್ಲಿ ಯಶಸ್ವಿಯಾಗಿ ನಡೆದಿದೆ‌. ಮುಂಬಯಿಯ ಹೆಸರಾಂತ ಸಾಂಸ್ಕೃತಿಕ ಹಾಗೂ ಸಮಾಜ ಸೇವಾ ಸಂಸ್ಥೆ ಕಲಾ ಸೌರಭದ ರೂವಾರಿ ಪದ್ಮನಾಭ ಸಸಿಹಿತ್ಲು ಅವರ ನೇತೃತ್ವದಲ್ಲಿ ಸಾನಿಧ್ಯದಲ್ಲಿ ಏರ್ಪಡಿಸಿದ ಸಾಂಸ್ಕೃತಿಕ ವೈವಿಧ್ಯ ಮುಗ್ಧ ಮಕ್ಕಳಿಗೆ ಮುದ ನೀಡುವ ಅರ್ಥಪೂರ್ಣ ಕಾರ್ಯಕ್ರಮ’ ಎಂದು ಮುಂಬೈ ಉದ್ಯಮಿ ಚಂದ್ರಶೇಖರ ಬೆಲ್ಚಡ ಹೇಳಿದ್ದಾರೆ.
  ಅವರು ಜೂನ್ 22ರಂದು ಮಂಗಳೂರು ಸಮೀಪ ಶಕ್ತಿನಗರದ ಸಾನಿಧ್ಯ ವಿಶೇಷ ಮಕ್ಕಳ ವಸತಿ ಶಾಲೆಯಲ್ಲಿ ಕಲಾ ಸೌರಭದ ಮೂವತ್ತನೇ ವರ್ಷಾಚರಣೆ ಮತ್ತು ಸ್ವಾತಂತ್ರ್ಯೋತ್ಸವದ ಅಮೃತ ವರ್ಷಾಚರಣೆಯ ಪ್ರಯುಕ್ತ ಆಯೋಜಿಸಲಾದ ‘ಅಮೃತ ಸೌರಭ’ ಸರಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

  ಅಮೃತ ಪುತ್ರರು: ಕುಕ್ಕುವಳ್ಳಿ
  ಕರ್ನಾಟಕ ಯಕ್ಷಗಾನ, ಜಾನಪದ ಹಾಗೂ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯಮತ್ತು ಕಲಾಸೌರಭದ ಸಲಹೆಗಾರ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರು ‘ಅಮೃತ ನುಡಿ’ ದಿಕ್ಸೂಚಿ ಭಾಷಣ ಮಾಡುತ್ತಾ ‘ ಸಮಾಜದ ಮುಖ್ಯ ವಾಹಿನಿಯಿಂದ ದೂರವಿರುವ ಭಿನ್ನ ಸಾಮರ್ಥ್ಯದ ಮಕ್ಕಳು ವಾಸ್ತವವಾಗಿ ಅಮೃತ ಪುತ್ರರು. ವಿಶೇಷ ಚೇತನ ಮಕ್ಕಳೂ ಸೇರಿದಂತೆ ಎಳೆಯರಲ್ಲಿ ರಾಷ್ಟ್ರ ಜಾಗೃತಿ ಮೂಡಿಸುವ ಕೆಲಸ ವಿದ್ಯಾ ಸಂಸ್ಥೆಗಳಲ್ಲಿ ನಿರಂತರ ನಡೆಯಬೇಕು. ಸ್ವಾತಂತ್ರ್ಯದ ಅಮೃತ ಮಹೋತ್ಸವ ಅದಕ್ಕೆ ಅವಕಾಶ ಮಾಡಿಕೊಟ್ಟಿದೆ. ದೇಶದ ಭವ್ಯ ಪರಂಪರೆ, ಇತಿಹಾಸ, ಸಾಂಸ್ಕೃತಿಕ ಸಿರಿವಂತಿಕೆಯನ್ನು ಅರಿತು ಭವಿಷ್ಯದ ಭಾರತವನ್ನು ಕಟ್ಟುವ ಸಂಕಲ್ಪಕ್ಕೆ ನಾವೆಲ್ಲ ಬದ್ಧರಾಗೋಣ’ ಎಂದು ಕರೆ ನೀಡಿದರು.
  ‘ರಾಷ್ಟ್ರ ಜೀವನದಲ್ಲಿ ಎಪ್ಪತ್ತೈದು ವರ್ಷ ಎಂಬುದು ದೊಡ್ಡದಲ್ಲ. ಆದರೆ ನಮ್ಮ ನೆಲ, ಜಲ, ಸಂಸ್ಕೃತಿ ಸಹಸ್ರಕಾಲ ಮತ್ತಷ್ಟು ಮೈದುಂಬಿ ಮೆರೆಯುವಂತೆ ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರೇರಣೆಯಾಗಲಿ’ ಎಂದವರು ನುಡಿದರು. ಸವಿತಾ ಸಮಾಜ ಮಂಗಳೂರು ಜಿಲ್ಲಾಧ್ಯಕ್ಷ ಆನಂದ ಭಂಡಾರಿ ಮತ್ತು ಮಧು ಸಮೂಹ ಸಂಸ್ಥೆಗಳ ಮಾಲಕ ಮಧುಸೂದನ್ ಅಯ್ಯರ್ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು.

  ವರ್ತನೆಗಳ‌ ಪರಿವರ್ತನೆ:
  ಸಾನ್ನಿಧ್ಯ ಶಾಲೆಯ ಆಡಳಿತಾಧಿಕಾರಿ ಡಾ. ವಸಂತ ಕುಮಾರ್ ಶೆಟ್ಟಿ ಮಾತನಾಡಿ ‘ ‘ ಮಕ್ಕಳಿಗೆ ಮನೋಲ್ಲಾಸ ನೀಡುವ ಸಂಗೀತ-ನೃತ್ಯ ಬೇಕಾಗಿದೆ. ಇದರಿಂದ ಮನಸ್ಸಿನ ಸ್ಥಿರತೆ ಸಾಧ್ಯ. ಸಾನಿಧ್ಯದ ಮುಗ್ಧ ಮಕ್ಕಳ ವಿಕಸನದ ಧ್ಯೇಯ ವಾಕ್ಯ “ವರ್ತನೆಗಳ ಪರಿವರ್ತನೆ” ; ಕಲಾಸೌರಭದ ಕಾರ್ಯಕ್ರಮ ಇದಕ್ಕೆ ಪೂರಕವಾದುದು’ ಎಂದು ನುಡಿದು ಕಲಾವಿದರನ್ನು ಗೌರವಿಸಿದರು. ವೇದಿಕೆಯಲ್ಲಿ ಸಾನಿಧ್ಯ ಸಂಸ್ಥೆಯ ಗೌ. ಪ್ರ. ಕಾರ್ಯದರ್ಶಿ, ಕಾರ್ಪೊರೇಟರ್ ಜಗದೀಶ ಶೆಟ್ಟಿ, ಉಡುಪಿ ವಲಯದ ಉದ್ಯಮಿ ಸಮಾಜ ಸೇವಕ ಉಮೇಶ್ ಕಲ್ಬಾವಿ, ಕಲಾ ಸೌರಭದ ನಿರ್ದೇಶಕ ಶೇಖರ್ ಸಸಿಹಿತ್ಲು ಉಪಸ್ಥಿತರಿದ್ದರು.
  ಪ್ರಾರಂಭದಲ್ಲಿ ಶಾಲಾ ಮಕ್ಕಳಿಂದ ಮತ್ತು ಶಿಕ್ಷಕರಿಂದ ಪ್ರಾರ್ಥನಾ ಗೀತೆ ಹಾಗೂ ಸ್ವಾಗತ ನೃತ್ಯ ಜರಗುತು. ಕಲಾಸೌರಭದ ರೂವಾರಿ ಪದ್ಮನಾಭ ಸಸಿಹಿತ್ಲು ಸ್ವಾಗತಿಸಿ ಅಮೃತ ಸೌರಭ ಸರಣಿ ಕಾರ್ಯಕ್ರಮದ ಬಗೆಗಿನ ಮಾಹಿತಿ ಯನ್ನು ನೀಡಿದರು. ನಾಟಕಕಾರ ಮತ್ತು ರಂಗ ನಿರ್ದೇಶಕ ಪರಮಾನಂದ ವಿ. ಸಾಲ್ಯಾನ್ ಸಸಿಹಿತ್ಲು ಪ್ರಸ್ತಾವನೆಗೈದರು.
  ಸಂಘಟಕ, ಗಾಯಕ ಪುಷ್ಕಳ್ ಕುಮಾರ್ ತೋನ್ಸೆ ಕಾರ್ಯಕ್ರಮ ನಿರೂಪಿಸಿದರು. ಸಂಗೀತಗಾರ ಸತೀಶ್ ಸುರತ್ಕಲ್ ವಂದಿಸಿದರು

  ಅಮೃತ ಸೌರಭ ಸಂಭ್ರಮದಲ್ಲಿ ಸಂಗೀತ ಸೌರಭ:

  ಶಿಸ್ತುಬದ್ಧ ಕಾರ್ಯಕ್ರಮದ ಅಂಗವಾಗಿ ಸಂಗೀತ ಕ್ಷೇತ್ರದ ಪ್ರಸಿದ್ದ ಕಲಾವಿದರಾದ ತೋನ್ಸೆ ಪುಷ್ಕಳ ಕುಮಾರ್, ರವೀಂದ್ರ ಪ್ರಭು, ಮಾಲಿನಿ ಕೇಶವಪ್ರಸಾದ್, ರಮೇಶ್ ಸಾಲಿಯಾನ್, ಜಗದೀಶ ಶೆಟ್ಟಿ ಮತ್ತು ಸಾನ್ನಿಧ್ಯದ ಮಕ್ಕಳು ಸಂಗೀತ ನೃತ್ಯ ಕಾರ್ಯಕ್ರಮ ನೀಡಿದರು. ಸತೀಶ್ ಸುರತ್ಕಲ್, ರಾಜೇಶ್ ಭಾಗವತ್, ನವಗಿರಿ ಗಣೇಶ್ ಹಿನ್ನೆಲೆ ವಾದ್ಯದಲಿ ಸಹಕರಿಸಿದರು.
  ಸಾನಿಧ್ಯದ ಸಮಾರೋಪ ಗೀತೆಯ ಪ್ರಸ್ತತಿಯೊಂದಿಗೆ ಕಲಾಸೌರಭದ ಅಮೃತ ಸೌರಭ ಸರಣಿಯ ಪ್ರಥಮ ಕಾರ್ಯಕ್ರಮ ಮುಕ್ತಾಯಗೊಂಡಿತು.
  ಸಾನಿಧ್ಯ ಮಕ್ಕಳೊಂದಿಗೆ ಸಹಭೋಜನ ವಿಶೇಷವಾಗಿ ನಡೆಯಿತು.

  Latest Posts

  ಉಡುಪಿ: ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ‘ಆಟಿಡೊಂಜಿ ದಿನ’

  ಉಡುಪಿ: ತುಳುನಾಡ ರಕ್ಷಣಾ ವೇದಿಕೆ ಉಡುಪಿ ಘಟಕ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಆಗಸ್ಟ್-14 ರಂದು ಉಡುಪಿ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ನಡೆಯಲಿದೆ.ಕಾರ್ಯಕ್ರಮದಲ್ಲಿ ಪ್ರತೀಕ್ಷಾ ರಿಧಮಿಕ್ ವಾಯ್ಸ್ ಆಫ್...

  ಕಾರ್ಕಳ: ಮಹಿಳೆಗೆ ಸಂಬಂಧಿಕರಿಂದ ಕೊಲೆ ಬೆದರಿಕೆ: ದೂರು ದಾಖಲು

  ಕಾರ್ಕಳ: ಕಾರ್ಕಳ ಗಾಂಧಿಮೈದಾನದ ಬಳಿಯ ನಿವಾಸಿ ನಜೀಮಾ ಅವರಿಗೆ ಎರಡು ತಿಂಗಳ ಹಿಂದೆ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಒಡ್ಡಿದ ಕುರಿತು ಮೂರು ಮಂದಿಯ ಮೇಲೆ ಕಾರ್ಕಳ ನಗರ...

  ಕೇರಳದ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ತೇರ್ಗಡೆಯಾದ ತಾಯಿ-ಮಗ!

  ಕೇರಳ: ಕೇರಳದ ಮಲಪ್ಪುರಂನ ಮಹಿಳೆಯೊಬ್ಬರು ತನ್ನ ಮಗ 10 ನೇ ತರಗತಿಯಲ್ಲಿದ್ದಾಗ ಓದಲು ಪ್ರಾರಂಭಿಸಿದ್ದರು. ಆದರೆ, ಇದು ಕೇರಳ PSC ಪರೀಕ್ಷೆಗಳಿಗೆ ತಯಾರಾಗಲು ಅವರನ್ನು ಪ್ರೇರೇಪಿಸಿತು. ಇವರ ಕಲಿಕೆಯು ಇದೀಗ...

  ಮಂಗಳೂರು: ವಿವಿ ಕಾಲೇಜಿನಲ್ಲಿ ‘ಭಾರತ ಮಾತಾ ಪೂಜಾ ದಿನ’ಕ್ಕೆ CFI ವಿರೋಧ: ಜಿಲ್ಲಾಧಿಕಾರಿಗೆ ಮನವಿ

  ಮಂಗಳೂರು: ನಗರದ ಹಂಪನಕಟ್ಟೆ ವಿವಿ ಕಾಲೇಜಿನಲ್ಲಿ ಆ.11 ರಂದು ಆಯೋಜಿಸಿರುವ ‘ಭಾರತ ಮಾತಾ ಪೂಜಾ ದಿನ’ ಕಾರ್ಯಕ್ರಮವನ್ನು ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ವಿರೋಧಿಸಿದೆ. ಈ...

  Don't Miss

  ಇಸ್ರೋ ಐತಿಹಾಸಿಕ ಸಾಧನೆ: ವಿದ್ಯಾರ್ಥಿಗಳೇ ತಯಾರಿಸಿದ ‘ಆಜಾದಿ ಸ್ಯಾಟ್’ ಉಪಗ್ರಹ ಇಸ್ರೋದಿಂದ ಉಡಾವಣೆ

  ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಮೊದಲ ಸಣ್ಣ ಉಪಗ್ರಹ ಉಡಾವಣಾ ವಾಹಕ ಮಿಷನ್ (ಎಸ್‌ಎಸ್‌ಎಲ್‌ವಿ) ಅನ್ನು ಪ್ರಾರಂಭಿಸಿದೆ. ಶ್ರೀಹರಿಕೋಟಾದ ಸತೀಶ್ ಧವನ್...

  ಮಂಗಳೂರು: ಸಮುದ್ರ ಪ್ರಕ್ಷುಬ್ಧ-ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ

  ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಈ ಹಿನ್ನೆಲೆ ಆಗಸ್ಟ್ 8ರವರೆಗೆ ಅರಬ್ಬಿ ಸಮುದ್ರವು ಪ್ರಕ್ಷುಬ್ಧವಾಗುವ ಸಾಧ್ಯತೆ ಇದೆ. ಆದ್ದರಿಂದ ಮೀನುಗಾರಿಕೆ...

  ಕುಂದಾಪುರ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯ ನಗ-ನಗದು ಕಳವು

  ಕುಂದಾಪುರ: ಮನೆಮಂದಿ ಕುಟುಂಬ ಸಮೇತ ತೀರ್ಥಯಾತ್ರೆಗೆ ಹೋಗಿದ್ದ ಸಂದರ್ಭದಲ್ಲಿ ಮನೆಗೆ ಕನ್ನ ಹಾಕಿದ ಕಳ್ಳರು ಲಕ್ಷಾಂತರ ರೂ. ನಗ ಮತ್ತು ನಗದು ಕಳವುಗೈದ ಘಟನೆ ಕುಂಭಾಶಿ ಗ್ರಾಮದ ವಿನಾಯಕ ನಗರದಲ್ಲಿ...

  ಕಟ್ಟಡ ಕಾರ್ಮಿಕರಿಗೆ ಗುಡ್ ನ್ಯೂಸ್ : ವಿದೇಶದ ಕಟ್ಟಡ ನಿರ್ಮಾಣ ಸಂಸ್ಥೆಯಲ್ಲಿ ನೇಮಕಾತಿಗೆ ಇಂದು ಸಂದರ್ಶನ

  ಧಾರವಾಡ : ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮವು ಉದಯೋನ್ಮುಖ ಯೋಜನೆಯಾದ ಅಂತರರಾಷ್ಟ್ರೀಯ ವಲಸೆ ಕೇಂದ್ರದ ಮುಖಾಂತರ ದುಬೈನಲ್ಲಿರುವ ಬೃಹತ್ ಕಟ್ಟಡ ನಿರ್ಮಾಣ ಸಂಸ್ಥೆಯೊಂದಲ್ಲಿ ಉದ್ಯೋಗ ಅವಕಾಶಗಳನ್ನು ಕಲ್ಪಿಸಲು ಕರ್ನಾಟಕ ಕೌಶಲ್ಯಾಭಿವೂದ್ಧಿ ನಿಗಮವು...

  ಉಡುಪಿ: ಚಾಕಲೇಟ್ ನುಂಗಿ ಬಾಲಕಿ ಸಾವನ್ನಪ್ಪಿದ ಪ್ರಕರಣ; ಬಾಲಕಿ ಸಾವಿಗೆ ವೈದ್ಯಕೀಯ ವರದಿಯಿಂದ ಸ್ಪಷ್ಟನೆ

  ಉಡುಪಿ: ಬೈಂದೂರಿನಲ್ಲಿ ಚಾಕಲೇಟ್ ನುಂಗಿ ಬಾಲಕಿ ಸಾವನ್ನಪ್ಪಿದ್ದಾಳೆನ್ನಲಾದ ಪ್ರಕರಣದ ವೈದ್ಯಕೀಯ ವರದಿ ಇದೀಗ ಬಂದಿದ್ದು, ಇದರಲ್ಲಿ ಆಕೆಯ ಸಾವಿಗೆ ಚಾಕಲೇಟ್‌ ನುಂಗಿರುವುದು ಕಾರಣವಲ್ಲ, ಬದಲಾಗಿ ಆಕೆ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದು...