Thursday, April 25, 2024
spot_img
More

    Latest Posts

    ಪ್ರೊ. ಡಾ. ಝೀಟಾ ಲೋಬೊರವರಿಗೆ “ಕಲ್ಲಚ್ಚು” ಪ್ರಶಸ್ತಿ

    ಮಂಗಳೂರು : ಸಾಹಿತ್ಯವಲಯದಲ್ಲಿ ಕಳೆದ 22 ವರ್ಷಗಳಿಂದ ಸಕ್ರಿಯವಾಗಿರುವ ಕಲ್ಲಚ್ಚು ಪ್ರಕಾಶನ ವಾರ್ಷಿಕವಾಗಿ ಕೊಡಮಾಡುವ, 13 ನೇ ಆವೃತ್ತಿಯ 2022ರ “ಕಲ್ಲಚ್ಚು ಪ್ರಶಸ್ತಿಗೆ” ಲೇಖಕಿ, ಕಲಾವಿದೆ ಮತ್ತು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಶಿಕ್ಷಣತಜ್ಞೆ ಪೊ. ಡಾ. ಝೀಟಾ ಲೋಬೊರವರು ಆಯ್ಕೆಯಾಗಿರುತ್ತಾರೆ. ಕನ್ನಡ ಇಂಗ್ಲಿಷ್ ಮತ್ತು ಕೊಂಕಣಿ ಭಾಷೆಯ ಸಾಹಿತ್ಯ ಕೃತಿಗಳನ್ನು ರಚಿಸಿರುವ ಇವರು ಅತ್ಯುತ್ತಮ ಚಿತ್ರ ಕಲಾವಿದೆಯಾಗಿದ್ದು ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಭೋದನೆ ಮಾಡಿರುವ ಅಪಾರ ಆನುಭವ ಹೊಂದಿದ್ದು ಸಾಮಾಜಿಕ ಕಳಕಳಿಯ ಪರಿಸರ ಸ್ನೇಹಿ ಕೈಂಕರ್ಯಗಳಲ್ಲಿ ತೊಡಗಿಸಿಕೊಂಡಿರುವ ಒಬ್ಬ ಪ್ರತಿಭಾವಂತ ಮಹಿಳೆಯಾಗಿರುತ್ತಾರೆ.ನವಂಬರ್ 27 ಆದಿತ್ಯವಾರದಂದು ಮಂಗಳೂರಿನಲ್ಲಿ ಜರಗಲಿರುವ ವೈಶಿಷ್ಟ್ಯಪೂರ್ಣ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಆತಿಥಿಗಣ್ಯರ ಸಮಕ್ಷಮದಲ್ಲಿ ನಡೆಯಲಿದೆಯೆಂದು ಪ್ರಕಾಶನದ ಮುಖ್ಯಸ್ಥ ಸಾಹಿತಿ ಮಹೇಶ ಆರ್. ನಾಯಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss