ಮಂಗಳೂರು: ನಗರದ ಕದ್ರಿ ದೇಗುಲಕ್ಕೆ ಅನ್ಯಮತೀಯ ಮೂವರು ಯುವಕರು ನುಗ್ಗಿದ ಘಟನೆ ನಿನ್ನೆ ರಾತ್ರಿ ನಡೆದಿದ್ದು, ತಕ್ಷಣ ಸ್ಥಳೀಯರು ಆರೋಪಿಗಳನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ವಿಚಾರಣೆ ನಡೆಯುತ್ತಿದೆ.
ನಿನ್ನೆ ರಾತ್ರಿ 10:30 ರ ವೇಳೆಗೆ ಕೆಎ 19 ಎಚ್‌ಎಲ್ 9170 ನೋಂದಣಿಯ ಬೈಕ್‌ನಲ್ಲಿ ಬಂದ ಮೂವರು ಕದ್ರಿ ದೇವಸ್ಥಾನದ ಬಳಿ ಬಂದು ನೇರವಾಗಿ ಅಂಗಣದ ಸುತ್ತು ಹೊಡೆದಿದ್ದಾರೆ. ನಂತರ ಅಲ್ಲೇ ಬೈಕ್ ನಿಲ್ಲಿಸಿ ನೇರವಾಗಿ ದೇವಸ್ಥಾನದ ಒಳಗೆ ಹೋಗಲು ಯತ್ನಿಸಿದ್ದಾರೆ.
ಈ ವೇಳೆ ಅಲ್ಲೇ ಇದ್ದ ವಾಚ್‌ಮೆನ್ ನಡೆಯಲು ಯತ್ನಿಸಿದ್ದಾರೆ. ಆದನ್ನು ಲೆಕ್ಕಿಸದ ಯುವಕರು ನೇರವಾಗಿ ನುಗ್ಗಲು ಯತ್ನಿಸಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ತಕ್ಷಣ ಈ ಆರೋಪಿಗಳನ್ನು ಹಿಡಿದು ಕದ್ರಿ ಪೊಲೀಸರಿಗೊಪ್ಪಿಸಿದ್ದಾರೆ. ವಿಚಾರಣೆ ನಡೆಯುತ್ತಿದೆ. ಸಾಮಾನ್ಯವಾಗಿ ದೇವಸ್ಥಾನಕ್ಕೆ ಬರುವ ಭಕ್ತಾಧಿಗಳು ದೇವಸ್ಥಾನದ ಪಾರ್ಕಿಂಗ್ ಬಳಿ ವಾಹನ ನಿಲ್ಲಿಸಿ ದೇವರ ದರ್ಶನಕ್ಕೆ ತೆರಳುತ್ತಾರೆ. ಅಗತ್ಯ ಸಂದರ್ಭಗಳಲ್ಲಿ ಮಾತ್ರ ವಾಹನ ದೇವಸ್ಥಾನದ ಅಂಗಣದ ಬಳಿ ಪ್ರವೇಶಿಸಲು ಅವಕಾಶವಿದೆ. ಆದರೆ ನಿನ್ನೆ ರಾತ್ರಿ ಈ ಯುವಕರು ನೇರವಾಗಿ ಬೈಕ್‌ನಲ್ಲಿ ಅಂಗಣಕ್ಕೆ ಹೇಗೆ ಬಂದಿದ್ದಾರೆ. ಇದು ಭದ್ರತಾ ವೈಫಲ್ಯ ಎಂದು ಸ್ಥಳೀಯರು ದೂರಿದ್ದಾರೆ. ಈ ದೇವಸ್ಥಾನ ಉಗ್ರರ ಕರಿ ನೆರಳು ಇದ್ದು, ಕೆಲ ತಿಂಗಳ ಹಿಂದೆ ಶಾರೀಕ್ ಎಂಬ ಆರೋಪಿ ಕದ್ರಿ ದೇವಸ್ಥಾನದಲ್ಲಿ ಬಾಂಬ್ ಸ್ಫೋಟಿಸುವ ಸಲುವಾಗಿ ರಿಕ್ಷಾದಲ್ಲಿ ಬರುತ್ತಿರುವಾಗ ನಾಗುರಿ ಬಳಿ ರಿಕ್ಷಾದಲ್ಲಿ ಸ್ಪೋಟಗೊಂಡಿತ್ತು. ಈ ಬಗ್ಗೆ ಸ್ವತಃ ಆರೋಪಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.