ಶ್ರೀ ಉಮಾಮಹೇಶ್ವರೀ ಕಬಡ್ಡಿ ಅಕಾಡೆಮಿ (ರಿ.) ಕಾಪಿಕಾಡ್ ಉಳ್ಳಾಲ ಇದರ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಬಾಲಕ ಬಾಲಕಿಯರ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಪುರುಷರ ಕಬಡ್ಡಿ ಪಂದ್ಯಾಟ ಕ್ರೀಡಾ ಪೋಷಕರು, ಸಾಮಾಜಿಕ, ಧಾರ್ಮಿಕ ಕ್ಷೇತ್ರದ ಕೊಡುಗೈ ದಾನಿಯಾಗಿದ್ದ ಕೀರ್ತಿಶೇಷ ಎ. ಜಯಣ್ಣ ಸ್ಮರಣಾರ್ಥವಾಗಿ ನಡೆಯಿತು.

ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆಯುವ ಕಬಡ್ಡಿ ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಸತೀಶ್ ಕುಂಪಲ ರವರು ಭಾಗವಹಿಸಿ ಕಾರ್ಯಕ್ರಮದ ಆಯೋಜಕರಾದ
ಎ. ಜೆ. ಶೇಖರ್ ರವರು ಕ್ರೀಡಾಪಟುಗಳಿಗೆ ನಿರಂತರ ಪ್ರೋತ್ಸಾಹವನ್ನು ನೀಡುತ್ತಾ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿರುವ ಅವರು ತನ್ನ ಪಿತೃ ರೂಪರಾದ ದಿವಂಗತ ಎ. ಜಯಣ್ಣ ರವರ ಸ್ಮರಣಾರ್ಥವಾಗಿ ಕಬಡ್ಡಿ ಪಂದ್ಯಾಟವನ್ನು ನಿರಂತರ ಮಾಡಿಕೊಂಡು ಬಂದಿರುವ ಅವರು ಸಮಾಜಕ್ಕೆ ಮಾದರಿ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಧಾರ್ಮಿಕ ಹಾಗೂ ರಾಜಕೀಯ ಮುಖಂಡರು ಉಪಸ್ಥಿತರಿದ್ದರು.
