ಉಡುಪಿ : ಸೇತುವೆ ಬಳಿ ಬೈಕ್ ಬಿಟ್ಟು ಯುವಕನೊಬ್ಬ ನಾಪತ್ತೆಯಾಗಿರುವ ಘಟನೆ ಪಡುಕೆರೆಯ ಪಾಪನಾಸಿನಿ ನದಿ ಸಮೀಪ ನಡೆದಿದೆ. ದಾವಣಗೆರೆ ಮೂಲದ ಶಿವ ನಾಪತ್ತೆಯಾದ ಯುವಕ. ಉಡುಪಿಯಲ್ಲಿ ಕೆಲಸ ಮಾಡಿಕೊಂಡಿದ್ದ ದಾವಣಗೆರೆಯ ಶಿವ,ಉಡುಪಿ ಜಿಲ್ಲೆಯ ಪಡುಕರೆ ಸಮೀಪದ ಪಾಪನಾಸಿನಿ ನದಿಯ ಸೇತುವೆಯಲ್ಲಿ ಬೈಕ್ ನಿಲ್ಲಿಸಿ ನದಿಗೆ ಹಾರಿದ್ದಾರೆ ಎನ್ನಲಾಗಿದೆ. ಇದೀಗ ನಾಪತ್ತೆಯಾದ ಯುವಕನಿಗಾಗಿ ಸ್ಥಳೀಯ ಮುಳುಗು ತಜ್ಞರು ತೀವ್ರ ಶೋಧದಲ್ಲಿ ತೊಡಗಿದ್ದಾರೆ. ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
