Friday, April 19, 2024
spot_img
More

    Latest Posts

    ಉಡುಪಿ: ಒಂದು ಮರ ಕಡಿದರೆ 5 ಗಿಡ ನೆಡುವ ಶಪಥ ಮಾಡೋಣ; ಜಡ್ಜ್ ದಿನೇಶ್ ಹೆಗ್ಡೆ

    ಉಡುಪಿ: “ಹಸಿರೇ ನಮ್ಮ ಉಸಿರು” ಎಂಬುದು ಕಾನೂನು ಸೇವೆಗಳ ಪ್ರಾಧಿಕಾರದ ಘೋಷವಾಕ್ಯ. ಹಸಿರು ಇಲ್ಲದಿದ್ದರೆ ಬದುಕೇ ಇಲ್ಲ. ಒಳ್ಳೆಯ ಮಳೆ- ಬೆಳೆಯಾಗಲು ಗಿಡ ನೆಡಬೇಕು. ಮರ ಕಡಿಯುವುದನ್ನು‌ ನಾವು ನೋಡುತ್ತೇವೆ. ಆದರೆ, ಗಿಡವನ್ನು ಯಾಕೆ ನೆಡಬೇಕು ಎಂಬ ಭಾವನೆ ನಮ್ಮದು. ಒಂದು ಮರ ಕಡಿದರೆ 5 ಗಿಡ ನೆಡುವ ಶಪಥ ಮಾಡೋಣ ಎಂದು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ದಿನೇಶ್ ಹೆಗ್ಡೆ ಹೇಳಿದರು.

    ಅವರು ಉಡುಪಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಟ್ಟು ಬಳಿಕ ಮಾತನಾಡಿದರು.

    ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ (ರಿ) ಉಡುಪಿ ಮತ್ತು ಅರಣ್ಯ ಇಲಾಖೆ,ಉಡುಪಿ ವಲಯದ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

    ಶಕುಂತಳಾ ಎಸ್‌. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು, ಶರ್ಮಿಳಾ ಎಸ್‌. ಸದಸ್ಯ ಕಾರ್ಯದರ್ಶಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸೋಮನಾಥ 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು,ನಾಗರಾಜ ಬಿ. ಅಧ್ಯಕ್ಷರು ವಕೀಲರ ಸಂಘ, ರೊನಾಲ್ಡ್ ಪ್ರವೀಣ್‌ ಕುಮಾರ್ ಪ್ರಧಾನ ಕಾರ್ಯದರ್ಶಿ ವಕೀಲರ ಸಂಘ ಮತ್ತು ವಕೀಲರು ಹಾಗೂ ಕೋರ್ಟ್ ಸಿಬ್ಬಂದಿ ಉಪಸ್ಥಿತರಿದ್ದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss