ಕಾರ್ಕಳ : ಮುಂಬಯಿಯ ಪ್ರತಿಷ್ಠಿತ ಉದ್ಯಮಿ, ಚೆಂಬೂರು ಸೌಮ್ಯ ಟವರ್ ನಿವಾಸಿ ಜೆ.ಪಿ.ಶೆಟ್ಟಿ (ಜಯರಾಮ್ ಶೆಟ್ಟಿ) ನ.21 ರಂದು ಸ್ವಗೃಹದಲ್ಲಿ ನಿಧನರಾದರು.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕುಂಟಾಡಿ ರಡ್ಸಾಲು ಮನೆಯವರಾಗಿದ್ದ ಜೆ.ಪಿ. ಶೆಟ್ಟಿ ಯವರು ಪೆಸ್ಟ್ ಮಾರ್ಟಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕರು ಹಾಗೂ ಆಡಳಿತ ನಿರ್ದೇಶಕರಾಗಿದ್ದರು. ಹಲವಾರು ಶಾಖೆಗಳನ್ನು ಹೊಂದಿರುವ ಪೆಸ್ಟ್ ಮಾರ್ಟಮ್ ಇಂಡಿಯಾ ಇದರ ಮೂಲಕ ಜೆ.ಪಿ. ಶೆಟ್ಟಿ ಯವರು ನೂರಾರು ಮಂದಿಗೆ ಉದ್ಯೋಗದಾತರಾಗಿದ್ದರು.
ಸಾಮಾಜಿಕ ,ಧಾರ್ಮಿಕ ಸೇವಾಶಕ್ತರಾಗಿದ್ದ ಜೆ.ಪಿ. ಶೆಟ್ಟಿಯವರು ಸೇವಾ ಕಾರ್ಯದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು.ಮೃತರು ಪತ್ನಿ ವಿನೋದಾ ಜೆ .ಶೆಟ್ಟಿ, ಓರ್ವ ಪುತ್ರ, ಇಬ್ಬರು ಪುತ್ರಿಯರು,ಅಳಿಯಂದಿರು,ಸೊಸೆ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.
