ಮಹಾನಗರ:ದುಬೈ ಕರ್ನಾಟಕ ಪ್ರೆಸ್‌ಕ್ಲಬ್ ಕೌನ್ಸಿಲ್ ಹಾಗೂ ದುಬೈ ಕನ್ನಡಿಗರ ಸಹಕಾರದಲ್ಲಿ
ದುಬೈ ಶೇಖ್ ರಶೀದ್ ಸಭಾಂಗಣದಲ್ಲಿ ನ. 19ರಂದು ಜರಗಿದ ವಿಶ್ವಕನ್ನಡ ಹಬ್ಬದಲ್ಲಿ ಮೈಸೂರಿನ
ಮಹಾರಾಜ ಯದುವೀರ ಶ್ರೀಕೃಷ್ಣದತ್ತ ಚಾಮರಾಜ ಒಡೆಯರು ಅವರು ಜೋಸೆಫ್ ಮಥಾಯಿಸ್
ಗೆ ಅವರಿಗೆ “ವಿಶ್ವಮಾನ್ಯ ಪ್ರಶಸ್ತಿ” ನೀಡಿ ಗೌರವಿಸಿದರು.
ಮಹರ್ಷಿ ಆನಂದ ಗುರೂಜಿ, ನಾಯಕನಟ ವಿಜಯರಾಘವೇಂದ್ರ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಮಥಾಯಿಸ್ ಅವರು ಅಶೋಕನಗರ ಯುವಕ ಸಂಘದ ಮಹಾಪೋಷಕರಾಗಿದ್ದು, ಪ್ರತೀ ವರ್ಷ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ಸೀರೆ, ಧೋತಿ, ನಗದು, ಅಂಗವಿಕಲರಿಗೆ ಗಾಲಿ ಕುರ್ಚಿ, ಹೊಲಿಗೆ
ಯಂತ್ರ, ಸೆಕಲ್ ಮತ್ತು ವಿದ್ಯಾರ್ಥಿಗಳಿಗೆ ಸಮವಸ್ತ್ರಹಾಗೂ ಸಹಾಯಧನ ನೀಡುತ್ತಾ ಬಂದಿರುತ್ತಾರೆ.