Friday, March 29, 2024
spot_img
More

    Latest Posts

    5000 ವರ್ಷ ಹಳೆಯ ಆಭರಣ ತಯಾರಿಕಾ ಕಾರ್ಖಾನೆ ಪತ್ತೆ..!

    ಚಂಢೀಘರ್- ಹರಿಯಾಣದ ಹಿಸಾರ್ ಜಿಲ್ಲೆಯ ಸಿಂಧೂ ಕಣಿವೆ ನಾಗರಿಕತೆಗೆ ಸೇರಿದ ಅತ್ಯಂತ ಹಳೆಯ ಪುರಾತತ್ವ ಸ್ಥಳಗಳಲ್ಲಿ ಒಂದಾದ ರಾಖಿಗರ್ಕಿ ಗ್ರಾಮದಲ್ಲಿ ಉತ್ಖನನದ ವೇಳೆ 5000 ವರ್ಷಗಳಷ್ಟು ಹಳೆಯದಾದ ಆಭರಣ ತಯಾರಿಕಾ ಕಾರ್ಖಾನೆ ಪತ್ತೆಯಾಗಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ತಿಳಿಸಿದೆ.

    ಈ ಪ್ರದೇಶದಲ್ಲಿ ಸಾವಿರಾರು ವರ್ಷಗಳಿಂದ ಬಚ್ಚಿಟ್ಟಿದ್ದ ತಾಮ್ರ, ಬಂಗಾರದ ಆಭರಣಗಳೂ ಪತ್ತೆಯಾಗಿವೆ. ಇಲ್ಲಿನ ಕೆಲವು ಮನೆಗಳ ರಚನೆ, ಅಡುಗೆ ಸಂಕೀರ್ಣವನ್ನು ನೋಡಿದರೆ ಇದು ಅತಿಮುಖ್ಯ ವ್ಯಾಪಾರ ಕೇಂದ್ರವಾಗಿರಬಹುದು ಎಂದು ಇಲಾಖೆ ತಿಳಿಸಿದೆ.

    ಕಳೆದ 32 ವರ್ಷಗಳಿಂದ ಹರಿಯಾಣದ ರಾಖಿ ಗರ್ಹಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು, ಕಳೆದ ಎರಡು ತಿಂಗಳುಗಳಲ್ಲಿ ಇಲ್ಲಿ ಸಾಕಷ್ಟು ಆವಿಷ್ಕಾರಗಳನ್ನು ಮಾಡಿದೆ. ಉತ್ಖನದ ವೇಳೆ ಸಾವಿರಾರು ಮಣ್ಣಿನ ಮಡಕೆಗಳು, ರಾಜ ಮುದ್ರೆಗಳು ಮತ್ತು ಮಕ್ಕಳ ಆಟಿಕೆಗಳನ್ನು ಸಹ ದೊರೆತಿವೆ.

    ಕಳೆದ 20 ವರ್ಷಗಳಲ್ಲಿ ನಾವು ಸಿನೌಲಿ, ಹಸ್ತಿನಾಪುರ ಮತ್ತು ರಾಖಿಗರ್ಹಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದೇವೆ. ರಾಖಿಗರ್ಹಿಯ ಜನರು ಹಸ್ತಿನಾಪುರದ ಪೂರ್ವಜರು. ಹೀಗಾಗಿ ಇಲ್ಲಿ ಸಂಸ್ಕೃತಿ ಹಾಗೂ ಅಭಿವೃದ್ಧಿ ವೇಗ ಪಡೆದುಕೊಂಡಿದೆ ಎಂದು ಎಎಸ್‍ಐ ಹೆಚ್ಚುವರಿ ಮಹಾನಿರ್ದೇಶಕ (ಎಡಿಜಿ) ಡಾ.ಸಂಜಯ್ ಮಂಜುಳ್ ಹೇಳಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss