Friday, April 19, 2024
spot_img
More

    Latest Posts

    ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಕರೆಂಟ್ ಶಾಕ್! ಪ್ರತಿ ಯೂನಿಟ್ ಗೆ 1 ರೂ.ಹೆಚ್ಚಳಕ್ಕೆ ಜೆಸ್ಕಾಂ ಪ್ರಸ್ತಾವನೆ!

    ಕಲಬುರಗಿ : ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಕರೆಂಟ್ ಶಾಕ್ ಎದುರಾಗಿದ್ದು, ಕಲಬುರಗಿ ಜೆಸ್ಕಾಂ ಸಂಸ್ಥೆಕಂಪನಿಯ ನಷ್ಟವನ್ನು ಭರಿಸಲು 2022-23ನೇ ಆರ್ಥಿಕ ವರ್ಷಕ್ಕೆ ವಿದ್ಯುತ್ ದರ ಪರಿಷ್ಕರಿಸಲು ಮುಂದಾಗಿದೆ.

    ಈ ಕುರಿತು ಮಾಹಿತಿ ನೀಡಿರುವ ಜೆಸ್ಕಾಂ ಎಂ.ಡಿ. ರಾಹುಲ ಪಾಂಡ್ವೆ, ವಿದ್ಯುತ್ ಖರೀದಿ ದುಬಾರಿ ಮತ್ತು ಕಾರ್ಯ ಮತ್ತು ನಿರ್ವಹಣೆ ವೆಚ್ಚ ಹೆಚ್ಚಾಗಿರುವುದರಿಂದ ಈ ನಷ್ಟವನ್ನು ಸರಿದೂಗಿಸಲು ಪ್ರತಿ ಯೂನಿಟ್​ಗೆ ಅಂದಾಜು 1 ರೂ.ವಿದ್ಯುತ್ ದರವನ್ನು ಹೆಚ್ಚಳ ಮಾಡುವಂತೆ ಆಯೋಗಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    2020-21ನೇ ಸಾಲಿನಲ್ಲಿ ವಿದ್ಯುತ್ ಖರೀದಿ ಮತ್ತು ಪೂರೈಕೆಗೆ ಒಟ್ಟಾರೆ 5,957 ಕೋಟಿ ರೂ. ವೆಚ್ಚ ಮಾಡಿ ಗ್ರಾಹಕರಿಗೆ ವಿದ್ಯುತ್ ಪೂರೈಸಲಾಗಿದೆ. ಇದಕ್ಕೆ ಪ್ರತಿಯಾಗಿ ಗ್ರಾಹಕರಿಂದ ಪ್ರತಿ ಯೂನಿಟ್ ಗೆ ತಲಾ 7.54 ರೂ. ಗಳಂತೆ ಒಟ್ಟಾರೆ 5282 ಕೋಟಿ ರೂ. ಆದಾಯ ಪಡೆಯಲಾಗಿದೆ. ಇಲ್ಲಿ ಪ್ರತಿ ಯೂನಿಟ್​ಗೆ ದಾಯಕ್ಕಿಂತ ವೆಚ್ಚವೆ ಹೆಚ್ಚಾಗಿದೆ. ವಿದ್ಯುತ್ ಖರೀದಿ ದುಬಾರಿ ಮತ್ತು ಕಾರ್ಯ ಮತ್ತು ನಿರ್ವಹಣೆ ವೆಚ್ಚ ಹೆಚ್ಚಾಗಿರುವುದರಿಂದ ಈ ನಷ್ಟವನ್ನು ಸರಿದೂಗಿಸಲು ಪ್ರತಿ ಯೂನಿಟ್​ಗೆ ಅಂದಾಜು 1 ರೂ. ವಿದ್ಯುತ್ ದರವನ್ನು ಹೆಚ್ಚಳ ಮಾಡುವಂತೆ ಆಯೋಗಕ್ಕೆ ಮನವಿ ಮಾಡಿಕೊಂಡರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss