ಕಾರ್ಕಳ : ಬೆಳ್ಮಣ್‌ನ ಮುಂಡ್ಕೂರು ಸಮೀಪದ ಸಂಕಲಕರಿಯ ಎಂಬಲ್ಲಿ ಜೀಪು ಪಲ್ಟಿಯಾದ ಪರಿಣಾಮ ಯುವತಿಯೊಬ್ಬರು ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ಸಂಜೆ ನಡೆದಿದೆ.
ಮೃತರನ್ನು ಪಾವನಿ (18) ಎಂದು ಗುರುತಿಸಲಾಗಿದೆ.ಕಿನ್ನಿಗೋಳಿಯಿಂದ ಮುಂಡ್ಕೂರು ಕಡೆಗೆ ಜೀಪಿನಲ್ಲಿ ಚಾಲಕ ಸೇರಿ ಆರು ಮಂದಿ ಪ್ರಯಾಣಿಸುತ್ತಿದ್ದರು.ಆತ್ರಾಡಿ-ಬಜ್ಪೆ ಭಾಗವಾಗಿರುವ ಬೆಳ್ಮಣ್-ಸಂಕಲಕರಿಯ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ರಸ್ತೆಯಲ್ಲಿ ದಿಢೀರ್ ತಿರುವು ಬಂದಿರುವುದು ಚಾಲಕನ ಗಮನಕ್ಕೆ ಬಾರದೆ ಈ ಅವಘಡ ಸಂಭವಿಸಿದೆ.ಅಪಘಾತ ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
