ರಾಯಪುರ: ಜೆಸಿಬಿ ಟೈರ್ ಸ್ಫೋಟಗೊಂಡು ಇಬ್ಬರು ಮೃತಪಟ್ಟಿರುವ ಭೀಕರ ಘಟನೆ ಛತ್ತೀಸ್ಘಡದ ರಾಯಪುರದಲ್ಲಿ ನಡೆದಿದೆ.
ಜೆಸಿಬಿ ಟೈರ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರ ಮೃತದೇಹ ಛಿದ್ರವಾಗಿರುವ ದೃಶ್ಯ ಎಂತಹವರನ್ನು ಎದೆ ನಡುಗಿಸುತ್ತದೆ.
ಜೆಸಿಬಿ ನಿಲ್ಲಿಸಿದ ಗೋಡೌನಲ್ಲಿ ಟೈರ್ ಮೇಲೆ ಓರ್ವ ಕಾರ್ಮಿಕ ಟೈರ್ಗೆ ಗಾಳಿ ತುಂಬುತ್ತಿದ್ದ, ಅಲ್ಲೇ ನಿಂತಿದ್ದ ಮತ್ತೊಬ್ಬ ಕಾರ್ಮಿಕ ಟೈರನ್ನು ಕೈನಿಂದ ಜೋರಾಗಿ ಒತ್ತಿದ್ದಾನೆ. ಈ ವೇಳೆ ಟೈರ್ ಸ್ಫೋಟಗೊಂಡಿದೆ.
ಇಬ್ಬರ ದೇಹ ಛಿದ್ರಗೊಂಡಿದ್ದು, ಟೈರ್ ಸ್ಫೋಟಗೊಳ್ಳಲು ನಿಖರ ಕಾರಣವೇನಿರಬಹುದೆಂದು ತಿಳಿದುಬಂದಿಲ್ಲ. ಇನ್ನು ಇಬ್ಬರು ಕಾರ್ಮಿಕರು ಮಧ್ಯಪ್ರದೇಶ ಮೂಲದವರೆಂದುತಿಳಿದುಬಂದಿದೆ. ಈ ಬಗ್ಗೆ ಇಬ್ಬರು ಪೊಲೀಸರಿಂದ ತನಿಖೆ ಕೈಗೊಳ್ಳಲಾಗಿದೆ.
