ಗಂಜಿಮಠ: ಜೆಸಿಬಿಯಿಂದ ಅಗೆತದ ವೇಳೆ ದುರಂತ ಸಂಭವಿಸಿ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಳಲಿ ನಾಡಾಜೆಯಲ್ಲಿ ಸಂಭವಿಸಿದೆ.
ಜೆಸಿಬಿಯ ಚಾಲಕ ಝಾರ್ಖಂಡ್ ಕೊಸಾರ್ ಅನ್ಸಾರಿ (22) ಮೃತರು. ಇನ್ನು ಮಣ್ಣು ಅಗೆತದ ವೇಳೆ ನಿಂತಿದ್ದ ಟಿಪ್ಪರ್ ಹಿಂಬದಿಗೆ ಹಾಗೂ ಜೆಸಿಬಿಯ ಮೇಲೆ ಮಣ್ಣು ಕುಸಿದು ಬಿದ್ದು ಅದರಲ್ಲಿ ಜೆಸಿಬಿಯ ಚಾಲಕ ಸಿಲುಕಿಕೊಂಡ ಕಾರಣ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.