ಬೆಳ್ಮಣ್: ಅಕ್ಟೋಬರ್ 6 ರಂದು ಜೆಸಿಐ ಬೆಳ್ಮಣ್ಣು ಆಶ್ರಯದಲ್ಲಿ ಮೂಹೂರ್ತ ಸಭಾಭವನದಲ್ಲಿ ನಡೆದ ಜೇಸಿಐ 15 ರ ವ್ಯವಹಾರ ವಿಭಾಗದ ಸಮ್ಮೇಳನ ಸಂಚಲನದಲ್ಲಿ ಜೆಸಿಐ ಜೋಡುಮಾರ್ಗ ನೇತ್ರಾವತಿ ಯ ಪೂರ್ವಾಧ್ಯಕ್ಷರಾದ ಜೇಸಿ ಶ್ರೀನಿಧಿ ಭಟ್ ರವರ ಉದ್ಯಮ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಪ್ರತಿಷ್ಠಿತ ಉದ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇವರು ಬಿ.ಸಿ.ರೋಡಿನಲ್ಲಿ ಸಪ್ತಶ್ರೀ ಕನ್ಸ್ಟ್ರಕ್ಷನ್ ಸಂಸ್ಥೆಯ ಮೂಲಕ ಕಟ್ಟಡ ನಿರ್ಮಾಣ ಕಾರ್ಯನಿರ್ವಹಿಸುತ್ತಿದ್ದು ಗುಣಮಟ್ಟದ ಕಾಮಗಾರಿಯ ಮೂಲಕ ಪ್ರಸಿದ್ಧರಾಗಿದ್ದಾರೆ. ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಸಾಮಾಜಿಕ ಸೇವೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಉತ್ತಮ ಗಾಯಕರು ಆಗಿದ್ದಾರೆ.
ಪ್ರಶಸ್ತಿ ಸ್ವೀಕರಿಸುವ ಸಂದರ್ಭ ದಲ್ಲಿ ವಲಯಾಧ್ಯಕ್ಷ ಜೇಸಿಐ ಸೆನೆಟರ್ ರಾಯನ್ ಉದಯ ಕ್ರಾಸ್ತಾ, ಜೇಸಿ ಪುರುಷೋತ್ತಮ ಶೆಟ್ಟಿ, ಜೇಸಿ ಸೌಮ್ಯ ರಾಕೇಶ್, ಜೆಸಿಐ ಜೋಡುಮಾರ್ಗ ನೇತ್ರಾವತಿಯ ಸದಸ್ಯರು ಉಪಸ್ಥಿತರಿದ್ದರು.
