Saturday, April 20, 2024
spot_img
More

    Latest Posts

    ಭಾರತದಲ್ಲಿ ಜಾನ್ಸನ್ ಕೋವಿಡ್ ಲಸಿಕೆ ಮುಂದಿನ ತಿಂಗಳು ಬಿಡುಗಡೆ ಸಾಧ್ಯತೆ!

    ನವದೆಹಲಿ: ಭಾರತದಲ್ಲಿ ತುರ್ತು ಬಳಕೆಗೆ ಅನುಮೋದನೆ ಪಡೆದಿರುವ ಜಾನ್ಸನ್ ಅಂಡ್ ಜಾನ್ಸನ್ (Johnson & Johnson) ಸಂಸ್ಥೆ ತಯಾರಿಕೆಯ ಕೋವಿಡ್ ಲಸಿಕೆ ಮುಂದಿನ ತಿಂಗಳು ಅಕ್ಟೋಬರ್​ನಷ್ಟರಲ್ಲಿ ಭಾರತದಲ್ಲಿ ವಿತರಣೆಗೆ ಲಭ್ಯವಿರಲಿದೆ. ಹೈದರಾಬಾದ್​ನ ಬಯೋಲಾಜಿಕಲ್ ಇ (Biological E) ಎಂಬ ಕಂಪನಿಯು J&J ಲಸಿಕೆಯನ್ನ ಉತ್ಪಾದಿಸುತ್ತಿದೆ.

    ಲಸಿಕೆಯ ಸ್ಯಾಂಪಲ್​ಗಳನ್ನ ಹಿಮಾಚಲ ಪ್ರದೇಶದ ಕಸೋಲಿಯಲ್ಲಿರುವ ಸೆಂಟ್ರಲ್ ಡ್ರಗ್ಸ್ ಲ್ಯಾಬರೇಟರಿ (CDL) ಹಾಗೂ ಪುಣೆಯಲ್ಲಿರುವ ನ್ಯಾಷನಲ್ ಸೆಂಟರ್ ಫಾರ್ ಸೆಲ್ ಸೈನ್ಸ್ (NCCS) ಲ್ಯಾಬ್​ಗಳಿಗೆ ಮುಂದಿನ ತಿಂಗಳಷ್ಟರಲ್ಲಿ ಕಳುಹಿಸಿಕೊಡಲಾಗತ್ತದೆ. ಸರ್ಕಾರದ ಮೂಲಗಳು ತಿಳಿಸಿರುವ ಪ್ರಕಾರ, ಮುಂದಿನ ವಾರ ಕಳುಹಿಸಲಾಗುವ ಪ್ರಯೋಗದ ದಾಖಲೆಗಳು ಹಾಗೂ ಲಸಿಕೆಯನ್ನ ಪರಿಸೀಲಿಸಲಾಗುವುದು. ನಂತರ ಲಸಿಕೆಯ ಸುರಕ್ಷತೆ ಹಾಗೂ ಗುಣಮಟ್ಟದ ಪರೀಕ್ಷೆ ಮಾಡಲಾಗುವುದು ಎಂದೆನ್ನಲಾಗುತ್ತಿದೆ.

    ಭಾರತದ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ) ಭಾರತದಲ್ಲಿ ತುರ್ತು ಬಳಕೆಗೆ ಇದೇ ಆಗಸ್ಟ್ 7ರಂದು ಜೆ ಅಂಡ್ ಜೆ ವ್ಯಾಕ್ಸಿನ್​ಗೆ ಅನುಮೋದನೆ ಕೊಟ್ಟಿದ್ದರು. ಇದೂ ಸೇರಿ ಭಾರತದಲ್ಲಿ ಒಟ್ಟು ಆರು ಲಸಿಕೆಗಳಿಗೆ ಅನುಮೋದನೆ ಸಿಕ್ಕಿದೆ. ಕೋವಿಶೀಲ್ಡ್, ಕೋವ್ಯಾಕ್ಸಿನ್, ಸ್ಪುಟ್ನಿಕ್ ವಿ, ಮಾಡರ್ನಾ, ಝೈಕೋವಿಡಿ ಮತ್ತು ಜೆ ಅಂಡ್ ಜೆ ಲಸಿಕೆಗಳು ಭಾರತೀಯರಿಗೆ ಲಭ್ಯ ಇವೆ. ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಈಗಾಗಲೇ ವ್ಯಾಪಕವಾಗಿ ಬಳಕೆಯಾಗುತ್ತಿವೆ. ಸ್ಪುಟ್ನಿಕ್ ವಿ ಲಸಿಕೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಲಭ್ಯ ಇಲ್ಲ.

    ಅಮೆರಿಕದ ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆ ತಯಾರಿಸಿರುವ ಲಸಿಕೆ ಸಿಂಗಲ್ ಡೋಸ್ ಮಾತ್ರವಾಗಿದೆ. ಕೋವಿಶೀಲ್ಡ್ ಅಥವಾ ಕೋವಾಕ್ಸಿನ್​ನಂತೆ ಎರಡು ಡೋಸ್ ಕೊಡಬೇಕಾದ ಅಗತ್ಯವಿಲ್ಲ. ಒಂದೇ ಡೋಸ್ ಆದರೆ ಸಾಕು. ಭಾರತದ ಪ್ರಾಧಿಕಾರಗಳು ಜಾನ್ಸನ್ ಲಸಿಕೆಗೆ ಅಂತಿಮ ಅಸ್ತು ಎಂದಲ್ಲಿ ಮುಂದಿನ ತಿಂಗಳಷ್ಟರಲ್ಲಿ ಈ ಲಸಿಕೆಯು ಮಾರುಕಟ್ಟೆಗೆ ಬಿಡುಗಡೆಯಾಗಲಿದೆಯಂತೆ. ಆದರೆ, ಎಷ್ಟು ಡೋಸ್​ಗಳ ಲಸಿಕೆ ಮೊದಲು ಮಾರುಕಟ್ಟೆಗೆ ಬರುತ್ತವೆ ಎಂಬುದು ಖಚಿತವಾಗಿಲ್ಲ. ಸಿಂಗಲ್ ಡೋಸ್ ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆಗಳು ಸಿಗುವುದು ಅನುಮಾನ. ಅಲ್ಲದೇ, ಲಸಿಕೆ ತಯಾರಿಸಿದ ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆ ಈ ಲಸಿಕೆ ತಯಾರಿಕೆಗೆ ಬೇಕಾದ ಕಚ್ಛಾ ಪದಾರ್ಥಗಳನ್ನ ಹೈದರಾಬಾದ್​ನ ಬಯೋಲಾಜಿಕಲ್ ಇ ಕಂಪನಿಗೆ ಕಳುಹಿಸಿಕೊಡಬೇಕು. ಆಗ ಲಸಿಕೆ ಉತ್ಪಾದನೆ ನಿರೀಕ್ಷಿತ ಗಡುವಿನ ಒಳಗೆ ಸಾಧ್ಯವಾಗುತ್ತದೆ ಎಂಬುದು ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳು ಅಭಿಪ್ರಾಯಪಟ್ಟಿದ್ಧಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss