Tuesday, September 17, 2024
spot_img
More

    Latest Posts

    ವಿದ್ಯಾಗಿರಿಯ ಜಾಂಬೂರಿ ಉತ್ಸವದಲ್ಲಿ ಕಂಗೊಳಿಸುತ್ತಿರುವ ವಿವಿಧ ಬಣ್ಣಗಳ ಹೂದೋಟ

    ಮೂಡುಬಿದಿರೆ :ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ಜೈನ ಕಾಶಿ ಬಸದಿಗಳ ನಾಡೆಂದೆ ಪ್ರಸಿದ್ಧಿಯನ್ನು ಪಡೆದಿರುವ ಮೂಡುಬಿದಿರೆಯ ಆಳ್ವಾಸ್ ಕ್ಯಾಂಪಸ್ ಸಜ್ಜಾಗಿದೆ. ಮೊಟ್ಟ ಮೊದಲ ಬಾರಿಗೆ ಸಾಂಸ್ಕೃತಿಕತೆಯನ್ನು ವೈಭವಿಕರೀಸುವ ಹಾಗೂ ಪರಿಚಯಿಸುವ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ತಯಾರಿಯು ತಯಾರಾಗಿದೆ.

    ಈ ಜಾಂಬೂರಿಯ ಸವಿಯನ್ನು ಸವಿಯಲು ವಿವಿಧ ರಾಷ್ಟ್ರಗಳಿಂದ ವಿದ್ಯಾರ್ಥಿಗಳು, ತರಬೇತುದಾರರು ಆಗಮಿಸಲಿದ್ದಾರೆ. ಪ್ರದರ್ಶನಗೊಳ್ಳುವ ಕಲಾ ವೈಭವಗಳಲ್ಲಿ ಅಂತರಾಷ್ಟ್ರೀಯ ಒತ್ತು ನೀಡಲಾಗಿದೆ. ಜೊತೆಗೆ ಇಲ್ಲಿರುವ ಸಸ್ಯೋದ್ಯಾನ ತಯಾರಿ ಅದ್ಭುತವಾಗಿದ್ದು, ನೋಡುಗರ ಕಣ್ಣನ್ನು ಕುಕ್ಕುವಂತೆ ಮಾಡುತ್ತಿದೆ.

    ದೇಶದ ವಿವಿಧ ರಾಜ್ಯಗಳ, ಅಪರೂಪದ ಸಸ್ಯ ಸಂಪತ್ತಿನೊಂದಿಗೆ, ಹೊರದೇಶಗಳ ಅದ್ಭುತ ಆಕರ್ಷಕ ಹೂವಿನ ಗಿಡಗಳು ಮೂಡುಬಿದಿರೆಯ ಮಣ್ಣಿನಲ್ಲಿ ತನ್ನ ಸೊಬಗನ್ನು ಸೆಳೆಯತೊಡಗಿದೆ. ಇಲ್ಲಿನ ಹವಾಮಾನ, ವಾತಾವರಣದಲ್ಲಿ ಅಸಾಧ್ಯ ಎಂಬಂತಿರುವ ಸಸ್ಯಗಳೂ ಇಂದು ಸಮೃದ್ಧವಾಗಿ ಬೆಳೆದು ಹೂವಿನ ರಾಶಿಯೊಂದಿಗೆ ಸುವಾಸನೆಯನ್ನು ಬೀರುತ್ತಾ ವಯ್ಯಾರದಿಂದ ಆಕರ್ಷಕವಾಗಿ ಮಿಂಚುತ್ತಿದೆ.

    ಎಲ್ಲವೂ ಭಿನ್ನ ವಿಭಿನ್ನವಾದ ಸುಂದರ ಕುಸುಮಗಳು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಪ್ರತಿಯೊಬ್ಬರೂ ಹೂಗಳ ಸೌಂದರ್ಯಕ್ಕೆ ಮಾರು ಹೋಗುತ್ತಾರೆ. ಇಡೀ ಆವರಣದಲ್ಲಿ ಎಲ್ಲಿ ನೋಡಿದರಲ್ಲಿ ವರ್ಣ ವೈವಿಧ್ಯದ ಹೂಗಳು ತನ್ನ ಸೌಂದರ್ಯ ಪ್ರದರ್ಶನದಿಂದ ಎಲ್ಲರನ್ನು ತನ್ನತ್ತ ಆಕರ್ಷಿಸುತ್ತಿವೆ. 25 ವಿವಿಧ ತಳಿಗಳ 7 ರಿಂದ 10ವರ್ಷದ 300 ಅತ್ಯಂತ ವಿರಳ ಗಿಡಗಳು ಈ ಪುಷ್ಪಮೇಳದಲ್ಲಿ ಪ್ರಧಾನ ಆಕರ್ಷಣೆಗೆ ಪಾತ್ರವಾಗುತ್ತಿದೆ. ಒಂದು ನಿರ್ದಿಷ್ಟ ಅವಧಿಯಲ್ಲಷ್ಟೇ ಪುಷ್ಪಗಳಿಂದ ಶೃಂಗಾರಗೊಳ್ಳುವ 35 ಜಾತಿಗಳ 5000 ಪುಟಾಣಿ ಸಸ್ಯಗಳು ಆಕರ್ಷಕವಾಗಿ ಕಂಗೊಳಿಸಿವೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss