Tuesday, April 16, 2024
spot_img
More

    Latest Posts

    ಉದ್ಯಾವರ ಸಾವಿರ ಜಮಾತ್ ಅಲ್-ಸಖಾಫಾ ಶಾಲೆಯಲ್ಲಿ ನೂತನ ಕಟ್ಟಡದ ಶಂಕುಸ್ಥಾಪನೆ

    ಮಂಜೇಶ್ವರ: ಉದ್ಯಾವರ ಸಾವಿರ ಜಮಾಅತ್ ಸಮಿತಿಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್-ಸಖಾಫಾ ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡ ಕಾಮಗಾರಿಗೆ ಜಮಾಅತ್ ಖಾಝಿ ಹಾಗೂ ಸಮಸ್ಥ ಅಧ್ಯಕ್ಷ ಸೈಯ್ಯದುಲ್ ಉಲಮಾ ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಗಳವರು ಶಂಕು ಸ್ಥಾಪನೆ ನಿರ್ವಹಿಸಿದರು ಪ್ರಸ್ತುತ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ತರಗತಿ ಕೊಠಡಿಗಳ ಕೊರತೆ ಎದುರಾಗಲಿದ್ದು, 18 ತರಗತಿ ಕೊಠಡಿಗಳ ಹೊಸ ಬ್ಲಾಕ್ ನಿರ್ಮಿಸಲು ನಿರ್ಧರಿಸಿದ್ದಾರೆ. ಜಮಾಅತ್ ನವರೆಲ್ಲ ಸೇರಿ ಶೈಕ್ಷಣಿಕ ಸೌಲಭ್ಯ ಕಲ್ಪಿಸುವ ಕಾರ್ಯ ಮಾಡುತ್ತಿರುವುದು ಪುಣ್ಯ ಕಾರ್ಯ ಎಂದರು ಜೆಪ್ರಿ ತಂಗಳ್. ಸೈಯದ್ ಅತ್ತುಲ್ಲಾ ತಂಗಳ್, ಜಮಾತ್ ಅಧ್ಯಕ್ಷ ಯು.ಕೆ. ಸೈಫುಲ್ಲಾ ತಂಗಳ್, ಪ್ರ:ಕಾರ್ಯದರ್ಶಿ ಇಬ್ರಾಹಿಂ ಬಟರ್ ಫ್ಲೈ, ಉಪಾಧ್ಯಕ್ಷರಾದ ಸೈಯದ್ ಮುಹಮ್ಮದ್ ಅತ್ತಾವುಲ್ಲಾ ತಂಗಳ್, ಅಬೂಬಕರ್ ಮಾಹಿನ್ ಹಾಜಿ, ಕೋಶಾಧಿಕಾರಿ ಅಹ್ಮದ್ ಬಾವ ಹಾಜಿ, ಕಾರ್ಯದರ್ಶಿಗಳಾದ ಎಸ್.ಎಂ. ಬಶೀರ್, ಫಾರೂಕ್ ಮೌಲವಿ, ಮುಹಮ್ಮದ್ ಫೈಝಿ, ಸಲೀಂ ರಫಾ, ಮುಖ್ತಾರ್.ಎ. ಮುಂತಾದವರು ಉಪಸ್ಥಿತರಿದ್ದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss