Friday, March 29, 2024
spot_img
More

    Latest Posts

    ಮೂಡಬಿದಿರೆ ಜೈನ ಮಠದಲ್ಲಿ ಏಳದೆ ಮಂದಾರ ರಾಮಾಯಣ-2022

    ಮೂಡಬಿದಿರೆ:ತುಳುವರ್ಲ್ಡ್(ರಿ) ಮಂಗಳೂರು, ಧವಲತ್ರಯ ಜೈನ ಕಾಶಿ ಟ್ರಸ್ಟ್ ಮೂಡಬಿದಿರೆ, ತುಳುಕೂಟ ಬೆದ್ರ ಮತ್ತು ಮಂದಾರ ಪ್ರತಿಷ್ಠಾನ ಆಯೋಜಿಸುತ್ತಿರುವ ಪರಮ ಪೂಜ್ಯ ಸ್ವಸ್ತಿ ಶ್ರೀ ಭಾರತ ಭೂಷಣ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯ ಆರ್ಶಿವಾದದಿಂದ ತುಳು ರಾಮಾಯಣ – ಪಾರಾಯಣ ಸಪ್ತಾಹ ಕಾರ್ಯಕ್ರಮ ಏಳದೆ ಮಂದಾರ ರಾಮಾಯಣೊ -2022, ತುಳು ವಾಲ್ಮೀಕಿ ಮಂದಾರ ಕೇಶವ ಭಟ್ಟರ ತುಳು ಮಹಾಕಾವ್ಯ ‘ಸುಗಿಪು-ದುನಿಪು’ ಕಾರ್ಯಕ್ರಮ ಜು.31 ರಿಂದ ಆಗಸ್ಟ್ 6(ಆಟಿ 15-21)ರವರೆಗೆ ಪ್ರತೀ ದಿನ ಸಂಜೆ ಗಂಟೆ 4 ರಿಂದ 7 ಗಂಟೆವರೆಗೆ ಸ್ವಸ್ತಿ ಶ್ರೀ ಭಟ್ಟಾರಕ ಸಭಾಭವನ, ಜೈನ ಮಠ ಮೂಡಬಿದಿರೆಯಲ್ಲಿ ನಡೆಯಲಿದೆ. ನ್ಯೂಸ್ ಕನ್ನಡದ ಜೊತೆ ಮಾತನಾಡಿದ ಸುಗಿಪು-ದುನಿಪು ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿರುವ ಭಾಸ್ಕರ್ ರೈ ಕುಕ್ಕುವಳ್ಳಿ, ಈ ಕಾರ್ಯಕ್ರಮ ಸುಮಾರು 5 ವರ್ಷದಿಂದ ಒಳ್ಳೆ ರೀತಿಯಲ್ಲಿ ನಡೆದುಕೊಂಡು ಬರುತ್ತಾ ಇದೆ. ಮಂದಾರ ರಾಮಾಯಣ ವಾಚನ ಪ್ರವಚನ ಕಾರ್ಯಕ್ರಮ ಸುಮಾರು ಹತ್ತಿಪ್ಪತ್ತು ವರ್ಷದಿಂದ ಮಾಡಿಕೊಂಡು ಬಂದಿದ್ದೇವೆ ಎಂದರು. ನ್ಯೂಸ್ ಕನ್ನಡದ ಜೊತೆ ಮಾತನಾಡಿದ ಮಂದಾರ ರಾಜೇಶ್ ಭಟ್ ತುಳು ಕೂಟ ಬೆದ್ರ ಹಾಗೂ ಮಂದಾರ ಪ್ರತಿಷ್ಠಾನ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದು , ಬೇರೆ ಸಂಘಟನೆಗಳ ಜೊತೆಗೆ ತುಳು ಮನಸುಗಳು ಸೇರಿ ಕೆಲಸ ಮಾಡುತ್ತಿವೆ. ತುಳುವ ಸಂಸ್ಕೃತಿಯ ಎಲ್ಲಾ ತಿರುಳನ್ನು ಒಳಗೊಂಡಿರುವ ತುಳುಭಾಷೆಯ ಆಕರ ಗ್ರಂಥವಾಗಿರುವ ತುಳುವ ವಾಲ್ಮೀಕಿ ಮಂದಾರ ಕೇಶವ ಭಟ್ಟರು ಬರೆದ ರಾಮಾಯಣದ ಪಾರಾಯಣದಿಂದ ಆಗುವ ಮಹತ್ವವನ್ನು ಪ್ರಚಾರಪಡಿಸುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ ಎಂದರು. ಜು. 31ರಂದು ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಜೈನ ಮಠದ ಪರಮ ಪೂಜ್ಯ ಸ್ವಸ್ತಿ ಶ್ರೀ ಭಾರತ ಭೂಷಣ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಸರ್ಕಾರದ ಇಂಧನ ಇಲಾಖೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ ಸುನಿಲ್ ಕುಮಾರ್ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮೂಡಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮುಖ್ಯಸ್ಥ ದಯಾನಂದ ಕತ್ತಲ್ ಸರ್, ಪುರಸಭೆ ಮೂಡಬಿದ್ರೆಯ ಗುತ್ತಿಗಾರ್ ಪ್ರಸಾದ್ ಕುಮಾರ್ ಕೊಲ್ಲಾಪುರ ಶ್ರೀ ಮಹಾಲಕ್ಷ್ಮಿ ಕ್ಷೇತ್ರದ ಅನುವಂಶಿಕ ಪುರೋಹಿತ ಬಾಲಚಂದ್ರ ಹರಿಲಾತ್ಕರ್, ಪಟ್ಲ ಶೆಟ್ಟಿ ಸುದೇಶ್ ಕುಮಾರ್, ಕಲ್ಲಬೆಟ್ಟು ಎಕ್ಸಲೆಂಟ್ ಕಾಲೇಜಿನ ಅಧ್ಯಕ್ಷರು ಯುವರಾಜ್ ಜೈನ್ ಭಾಗಿಯಾಗಲಿದ್ದಾರೆ. ಯುಗಪುರುಷ ಕಿನ್ನಿಗೋಳಿ ಭುವನಾಭಿರಾಮ ಉಡುಪ ,ಸಾಹಿತಿ ಕಾಂತಾವರ ಡಾ. ನಾ ಮೊಗಸಾಲೆ ಅವರಿಗೆ ಮಂದಾರ ಸನ್ಮಾನ ನಡೆಯಲಿದೆ. ‘ಸುಗಿಪು-ದುನಿಪು’ ಮೊದಲ ಅಧ್ಯಾಯದ ಬಾಲಕಾಂಡ ಸುಗಿಪು: ಸತೀಶ್ ಶೆಟ್ಟಿ ಪಟ್ಲ, ಅಮೃತ ಅಡಿಗ ದುನಿಪು: ಭಾಸ್ಕರ ರೈ ಕುಕ್ಕುವಳ್ಳಿ, ಆಗಸ್ಟ್ 1 ರಂದು ನಡೆಯುವ ಕಾರ್ಯಕ್ರಮದಲ್ಲಿ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ ಮುಖ್ಯಸ್ಥ ಡಾಕ್ಟರ್ ಶ್ರೀನಾಥ್ ಎಂ ಪಿ ಮಾಡಲಿದ್ದಾರೆ. ಅತಿಥಿಯಾಗಿ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಕೆ ಸುಚರಿತ ಶೆಟ್ಟಿ ಇತಿಹಾಸ ಸಂಶೋಧಕ ಡಾ. ಪುಂಡಿಕೈ ಗಣಪಯ್ಯ ಭಟ್, ಅಧಿಕಾರಿ ಕೆಪಿ ಜಗದೀಶ್, ಮೂಡಬಿದ್ರೆಯ ಹೆರಾಲ್ಡ್ ತೌವ್ರೋ, ಪತ್ರಿಕಾ ಸಂಪಾದಕ ಕೆ ವಿಠ್ಠಲ ಬಂಡಾರಿ ಹರೇಕಳ ಅವರಿಗೆ ಮಂದಾರ ಸನ್ಮಾನ ನಡೆಯಲಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss