ಬೆಂಗಳೂರು:ನಿನ್ನೆ ಬೆಂಗಳೂರಿನಲ್ಲಿ 11 ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿಯಾದ ಬೆನ್ನಲ್ಲೇ ಈಗ ಐಟಿ ರೈಡ್ ಆಗಿದೆ. ಬೆಳ್ಳಂಬೆಳಿಗ್ಗೆ ಉದ್ಯಮಿಗಳ ಮನೆ ಮೇಲೆ ಐಟಿ ದಾಳಿ ಆಗಿದೆ.
ತೆರಿಗೆ ವಂಚನೆ ಆರೋಪ ಬಂದ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ಅನೇಕ ಉದ್ಯಮಿಗಳು ಹಾಗೂ ಕಛೇರಿಗಳ ಮೇಲೆ ದಾಳಿ ಮಾಡಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರಿನ ಮಾಗಡಿ ರಸ್ತೆ, ಆಡುಗೋಡಿ ಸೇರಿದಂತೆ ಹಲವೆಡೆ ಉದ್ಯಮಿಗಳ ಮನೆ ಹಾಗೂ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಅಲ್ಲದೇ ಮೊನ್ನೇ ಬೆಂಗಳೂರಿನ ವಿವಿದೆಡೆ ಡ್ರೈಫ್ರೂಟ್ ವ್ಯಾಪಾರಿಗಳ ಮನೆ ಹಾಗೂ ಅಂಗಡಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಇಂದು ಬೆಳಿಗ್ಗೆ 7 ಗಂಟೆಗೆ ಎರಡು ಇನೋವಾ ಕಾರ್ ನಲ್ಲಿ ಬಂದಿರುವ ಆರು ಅಧಿಕಾರಿಗಳು ಮಾಗಡಿರಸ್ತೆಯಲ್ಲಿರುವ ಉದ್ಯಮಿ ಪುನೀತ್ ಬೊರಾ ಎನ್ನುವರ ಅಪಾರ್ಟ್ಮೆಂಟ್ ಮೇಲೆ ದಾಳಿ ಮಾಡಿದ್ದು, ದಾಖಲೆ ಪತ್ರಗಳನ್ನು ಪರಿಶೀಲಿಸುತ್ತಿದ್ದಾರೆ.