ಮಂಗಳೂರು. ಉಚ್ಛಾಟಿತ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಳನ್ನು ಬೆಂಬಲಿಸಿ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಹಾಕಿದ ರಾಜಸ್ಥಾನದ ಉದಯಪುರದ ಕನ್ನಯ್ಯ ಲಾಲ್ ಎಂಬ ವ್ಯಕ್ತಿಯ ಕೊಲೆ ಅಕ್ಷಮ್ಯ ಅಪರಾಧವಾಗಿದ್ದು ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹೆಚ್.ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಒತ್ತಾಯಿಸಿದ್ದಾರೆ.
ಪ್ರವಾದಿ ನಿಂದನೆ ಪ್ರವಾದಿ ಯವರ ಕಾಲದಲ್ಲೂ ನಡೆದಿದ್ದು ಅದರ ಮುಂದುವರಿದ ಭಾಗವಾಗಿ ಪ್ರವಾದಿ ನಿಂದಕರ ಸಂತತಿಗಳು ಈಗಲೂ ತಮ್ಮ ಚಾಳಿಯನ್ನು ಮುಂದುವರಿಸಿದ್ದಾರೆ.
ಇಂತಹ ಸಮಾಜದ್ರೋಹಿಗಳನ್ನು ಬೆಂಬಲಿಸುವವರನ್ನು ಕೊಲ್ಲುವುದನ್ನು ಇಸ್ಲಾಂ ಧರ್ಮ ಯಾವತ್ತೂ ಒಪ್ಪುವುದಿಲ್ಲ.
ಕನ್ನಯ್ಯ ಲಾಲ್ ಎಂಬ ವ್ಯಕ್ತಿ ಯನ್ನು ಅವರ ಅಂಗಡಿಗೆ ನುಗ್ಗಿ ವ್ಯವಸ್ಥಿತವಾಗಿ ಕೊಲೆ ನಡೆಸಿರುವ ಹಿಂದೆ ಯಾವ ವೆಕ್ತಿ ಆದರೂ ಅವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
