Monday, June 27, 2022

ಸಾಲುಮರದ ತಿಮ್ಮಕ್ಕಳಿಗೆ ಬಿಡಿಎ ನಿವೇಶನ ಮಂಜೂರು ಮಾಡಿದ ಸಿಎಂ ಬೊಮ್ಮಾಯಿ

ಬೆಂಗಳೂರು: ಸಾಲುಮರದ ತಿಮ್ಮಕ್ಕಗೆ ಬಿಡಿಎ ನಿವೇಶನ ಮಂಜೂರು ಮಾಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಮ್ಮಕ್ಕಗೆ ನಿವೇಶನ ಕ್ರಯಪತ್ರವನ್ನು ಹಂಚಿಕೆ ಮಾಡಿದರು. ಕೆಲ ದಿನಗಳ ಹಿಂದಷ್ಟೇ...
More

    Latest Posts

    ಮಾವಿನ ಹಣ್ಣಿನ ಸಿಪ್ಪೆಯಲ್ಲೂ ಇದೆ ಸಾಕಷ್ಟು ಔಷಧೀಯ ಗುಣ

    ಬೇಸಿಗೆ ಬಂತಂದ್ರೆ ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ಅಬ್ಬರ ಜೋರಾಗಿರುತ್ತದೆ. ಸೀಸನ್‌ನಲ್ಲಿ ಮಾವು ತಿನ್ನೋದು ಅಂದ್ರೆ ಹಬ್ಬವಿದ್ದಂತೆ. ಕೇವಲ ಮಾವಿನ ಹಣ್ಣು ಮಾತ್ರವಲ್ಲ, ಅದರ ಸಿಪ್ಪೆ ಕೂಡ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಕಾರಿ....

    ಮಂಗಳೂರು: ಗುದನಾಳದಲ್ಲಿ ಅಡಗಿಸಿ ಚಿನ್ನ ಕಳ್ಳ ಸಾಗಾಣಿಕೆ – 60. 24 ಲಕ್ಷ ರೂ. ಮೌಲ್ಯದ ಚಿನ್ನ ವಶ

    ಮಂಗಳೂರು: ಚಿನ್ನವನ್ನು ಗುದನಾಳದಲ್ಲಿ ಅಡಗಿಸಿ ಕಳ್ಳಸಾಗಾಣಿಕೆ ಮಾಡಲು ಯತ್ನಿಸಿ ವ್ಯಕ್ತಿಯನ್ನು ಭಾನುವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಜೂ. 26 ರ ಭಾನುವಾರ ದುಬೈನಿಂದ...

    ಮಂಗಳೂರು: ಡಿಸಿಪಿ ಹರಿರಾಂ ಶಂಕರ್‌ ವರ್ಗಾವಣೆ

    ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ  ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಹರಿರಾಂ ಶಂಕರ್‌ ಅವರನ್ನು ಹಾಸನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ...

    ಉಡುಪಿ: ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಪೋಕ್ಸೋ ಕಾಯ್ದೆ ಕುರಿತು ಮಾಹಿತಿ ಕಾರ್ಯಾಗಾರ

    ಉಡುಪಿ: ಪೋಕ್ಸೋ ಕಾಯ್ದೆ ಕುರಿತು ಉಡುಪಿ ಜಿಲ್ಲಾ ಪೋಲೀಸ್ ಅಧಿಕಾರಿಗಳಿಗೆ ತರಬೇತಿ ಮತ್ತು ಮಾಹಿತಿ ಕಾರ್ಯಾಗಾರ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿತು.

    ಮನೆ ಕಟ್ಟುವವರಿಗೆ ಗುಡ್‌ನ್ಯೂಸ್ : ಕಬ್ಬಿಣ, ಉಕ್ಕು, ಸಿಮೆಂಟ್‌ ಮತ್ತಷ್ಟುಅಗ್ಗ : ಕೇಂದ್ರ ಘೋಷಣೆ

    ನವದೆಹಲಿ : ಬೆಲೆ ಏರಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಬ್ಬಿಣ, ಉಕ್ಕು ಮತ್ತು ಪ್ಲಾಸ್ಟಿಕ್‌ ಮೇಲಿನ ಆಮದು ಸುಂಕವನ್ನು ಕಡಿತ ಮಾಡಲು ಕೇಂದ್ರ ಮಹತ್ವದ ನಿರ್ಧಾರ ಕೈಗೊಂಡಿದೆ. ಇದರೊಂದಿಗೆ ಸಿಮೆಂಟ್‌ ಬೆಲೆಯಲ್ಲೂ ಇಳಕೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಘೋಷಿಸಿದೆ.

    ಇದರಿಂದಾಗಿ ಕಟ್ಟಡ ನಿರ್ಮಾಣ ಸಾಮಗ್ರಿ ಇನ್ನು ಅಗ್ಗವಾಗಲಿದ್ದು, ಮನೆ ಕಟ್ಟಿಸುವ ಜನರ ಹೊರೆ ತಗ್ಗಲಿದೆ.

    ‘ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುವ ಕಬ್ಬಿಣ ಮತ್ತು ಉಕ್ಕು ಮೇಲಿನ ಸೀಮಾ ಸುಂಕವನ್ನು ಕಡಿಮೆ ಮಾಡಲಾಗುತ್ತದೆ. ಇದರಿಂದಾಗಿ ಅವುಗಳ ಬೆಲೆ ಕಡಿಮೆಯಾಗಲಿದೆ. ಅಲ್ಲದೇ ಆಮದು ಮಾಡಿಕೊಳ್ಳಲಾಗುವ ಕೆಲವು ಉಕ್ಕಿನ ಕಚ್ಚಾ ವಸ್ತುಗಳ ಮೇಲಿನ ಸುಂಕವನ್ನು ಸಹ ಕಡಿಮೆ ಮಾಡಲಾಗುತ್ತದೆ. ರಫ್ತು ಮಾಡುವ ಕೆಲವು ಉಕ್ಕು ಉತ್ಪನ್ನಗಳ ಸುಂಕ ಹೆಚ್ಚಿಸಲಾಗಿದೆ’ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

    ‘ಭಾರತ ಹೆಚ್ಚಾಗಿ ಅವಲಂಬಿಸಿರುವ ಪ್ಲಾಸ್ಟಿಕ್‌ ಕಚ್ಚಾ ವಸ್ತುಗಳ ಮೇಲಿನ ಸುಂಕದಲ್ಲೂ ಇಳಿಕೆ ಮಾಡಲಾಗುತ್ತದೆ. ಇದರಿಂದಾಗಿ ಅವುಗಳ ಅಂತಿಮ ಪದಾರ್ಥಗಳ ಬೆಲೆ ಕಡಿಮೆಯಾಗಲಿದೆ’ ಎಂದು ವಿತ್ತ ಸಚಿವೆ ಹೇಳಿದ್ದಾರೆ.

    ಸಿಮೆಂಟ್‌ ಬೆಲೆ ಇಳಿಕೆ:

    ‘ಸಿಮೆಂಟ್‌ ಲಭ್ಯತೆ ಸುಧಾರಿಸಲು ಮತ್ತು ಸಿಮೆಂಟ್‌ ಬೆಲೆಯನ್ನು ಕಡಿಮೆ ಮಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ’ ಎಂದು ನಿರ್ಮಲಾ ಟ್ವೀಟ್‌ ಮಾಡಿದ್ದಾರೆ. ಸಿಮೆಂಟ್‌ ಬೆಲೆ ಇಳಿಕೆಯಿಂದಾಗಿ ಕಟ್ಟಡ ನಿರ್ಮಾಣ ವೆಚ್ಚ ಕಡಿಮೆಯಾಗಲಿದೆ. ಈ ಎಲ್ಲಾ ಅಂಶಗಳು ಮುಂದಿನ ಕ್ಷಣದಿಂದಲೇ ಜಾರಿಯಾಗುತ್ತವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

    ಎಲ್‌ಪಿಜಿ ಸಬ್ಸಿಡಿ ಘೋಷಣೆ:

    ಈ ನಡುವೆ, ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯಡಿ ಎಲ್‌ಪಿಜಿ ಸಂಪರ್ಕ ಪಡೆದವರಿಗೆ ವರ್ಷಕ್ಕೆ 12 ಸಿಲಿಂಡರ್‌ಗಳಿಗೆ ತಲಾ 200 ರು. ಸಬ್ಸಿಡಿ ಘೋಷಿಸಲಾಗಿದೆ. ಪ್ರಸ್ತುತ ರಾಷ್ಟ್ರ ರಾಜಧಾನಿಯಲ್ಲಿ 1003 ರು. ಇರುವ ಎಲ್‌ಪಿಜಿ ಸಿಲಿಂಡರ್‌, ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ 803 ರು.ಗೆ ದೊರೆಯಲಿದೆ. ಈ ಸಬ್ಸಿಡಿ ಘೋಷಣೆಯಿಂದ ವಾರ್ಷಿಕ 6100 ಕೋಟಿ ರು. ಹೊರೆ ಸರ್ಕಾರದ ಮೇಲೆ ಬೀಳಲಿದೆ.

    ಆದರೆ ಸಬ್ಸಿಡಿಯು ಉಜ್ವಲಾ ಯೋಜನೆ ಹೊರತುಪಡಿಸಿದರೆ ಉಳಿದ ಎಲ್‌ಪಿಜಿ ಗ್ರಾಹಕರಿಗೆ ಅನ್ವಯಿಸುವುದಿಲ್ಲ. 1003 ರು. ಪೂರ್ಣ ದರ ನೀಡಿಯೇ ಸಿಲಿಂಡರ್‌ ಖರೀದಿಸಬೇಕು.

    ಕಳೆದ ವರ್ಷ ನವೆಂಬರ್‌ 4ರಂದು ಸಹ ಕೇಂದ್ರ ಸರ್ಕಾರ ಪೆಟ್ರೋಲ್‌ ಮೇಲೆ 5 ರು. ಮತ್ತು ಡೀಸೆಲ್‌ ಮೇಲೆ 10 ರು. ಅಬಕಾರಿ ಸುಂಕ ಕಡಿತ ಮಾಡಿತ್ತು. ಆ ಬಳಿಕ ಹಲವು ತಿಂಗಳು ದರ ಏರಿರಲಿಲ್ಲ. ಆದರೆ ಫೆಬ್ರವರಿ ಅಂತ್ಯದಲ್ಲಿ ಉಕ್ರೇನ್‌ ಯುದ್ಧ ಆರಂಭವಾದ ನಂತರ ದರವು ಸತತ ಏರಿಕೆಯಾಗಿತ್ತು.

    Latest Posts

    ಮಾವಿನ ಹಣ್ಣಿನ ಸಿಪ್ಪೆಯಲ್ಲೂ ಇದೆ ಸಾಕಷ್ಟು ಔಷಧೀಯ ಗುಣ

    ಬೇಸಿಗೆ ಬಂತಂದ್ರೆ ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ಅಬ್ಬರ ಜೋರಾಗಿರುತ್ತದೆ. ಸೀಸನ್‌ನಲ್ಲಿ ಮಾವು ತಿನ್ನೋದು ಅಂದ್ರೆ ಹಬ್ಬವಿದ್ದಂತೆ. ಕೇವಲ ಮಾವಿನ ಹಣ್ಣು ಮಾತ್ರವಲ್ಲ, ಅದರ ಸಿಪ್ಪೆ ಕೂಡ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಕಾರಿ....

    ಮಂಗಳೂರು: ಗುದನಾಳದಲ್ಲಿ ಅಡಗಿಸಿ ಚಿನ್ನ ಕಳ್ಳ ಸಾಗಾಣಿಕೆ – 60. 24 ಲಕ್ಷ ರೂ. ಮೌಲ್ಯದ ಚಿನ್ನ ವಶ

    ಮಂಗಳೂರು: ಚಿನ್ನವನ್ನು ಗುದನಾಳದಲ್ಲಿ ಅಡಗಿಸಿ ಕಳ್ಳಸಾಗಾಣಿಕೆ ಮಾಡಲು ಯತ್ನಿಸಿ ವ್ಯಕ್ತಿಯನ್ನು ಭಾನುವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಜೂ. 26 ರ ಭಾನುವಾರ ದುಬೈನಿಂದ...

    ಮಂಗಳೂರು: ಡಿಸಿಪಿ ಹರಿರಾಂ ಶಂಕರ್‌ ವರ್ಗಾವಣೆ

    ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ  ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಹರಿರಾಂ ಶಂಕರ್‌ ಅವರನ್ನು ಹಾಸನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ...

    ಉಡುಪಿ: ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಪೋಕ್ಸೋ ಕಾಯ್ದೆ ಕುರಿತು ಮಾಹಿತಿ ಕಾರ್ಯಾಗಾರ

    ಉಡುಪಿ: ಪೋಕ್ಸೋ ಕಾಯ್ದೆ ಕುರಿತು ಉಡುಪಿ ಜಿಲ್ಲಾ ಪೋಲೀಸ್ ಅಧಿಕಾರಿಗಳಿಗೆ ತರಬೇತಿ ಮತ್ತು ಮಾಹಿತಿ ಕಾರ್ಯಾಗಾರ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿತು.

    Don't Miss

    ಸಾರ್ವಜನಿಕ ಸ್ಥಳಗಳಲ್ಲಿ ನಿಂದನೆ ಮಾಡಿದರೆ ಮಾತ್ರ SCST ದೌರ್ಜನ್ಯ ತಡೆ ಕಾಯ್ದೆ ಅನ್ವಯ: ಕರ್ನಾಟಕ ಹೈಕೋರ್ಟ್

    ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನಿಂದನೆ ಮಾಡಿದರೆ ಮಾತ್ರ ಎಸ್ ಸಿ, ಎಸ್ ಟಿ ದೌರ್ಜನ್ಯ ತಡೆ ಕಾಯ್ದೆ ಅನ್ವಯವಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಕಟ್ಟಡದ...

    ಮಂಗಳೂರು: ನಿರ್ಮಾಣ ಹಂತದ ಕಟ್ಟಡದಲ್ಲಿ ಹಾವಿನ ಮೊಟ್ಟೆ ಪತ್ತೆ-ಕಾವು ಕೊಟ್ಟು ಕಾಡಿಗೆ ಬಿಟ್ಟ ಉರಗ ತಜ್ಞ

    ಮಂಗಳೂರು: ನಿರ್ಮಾಣ ಹಂತದ ಕಟ್ಟಡದಲ್ಲಿ ಹಾವಿನ ಮೊಟ್ಟೆ ಪತ್ತೆಯಾಗಿದ್ದು, ಇದನ್ನು ಕಂಡ ಕಟ್ಟಡದ ಮಾಲಕರು ಮೊಟ್ಟೆಗಳನ್ನು ಉರಗ ತಜ್ಞರಿಗೆ ಹಸ್ತಾಂತರಿಸಿ ಅವುಗಳಿಗೆ ಕೃತಕ ಕಾವು ಕೊಟ್ಟು ಮರಿಗಳನ್ನು ಬಂಟ್ವಾಳದ ಕಾಡಿಗೆ...

    ಕಾಪು : ಲಾರಿ ಢಿಕ್ಕಿ-ಡಿವೈಡರ್‌ ಮೇಲೆ ಪಲ್ಟಿಯಾದ ಓಮ್ನಿ ಕಾರು – ಪ್ರಯಾಣಿಕರು ಪಾರು

    ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಮಂಗಳೂರಿನಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಮಾರುತಿ ಓಮ್ನಿ ಕಾರಿಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ನಡುವಿನ ಡಿವೈಡರ್‌ ಮೇಲೆ...

    ಮಂಗಳೂರು: ಗಾಂಜಾ ಪ್ರಕರಣ – 5 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

    ಮಂಗಳೂರು: ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬಂಟ್ವಾಳ ಸಜೀಪ ಮುನ್ನೂರು ಗ್ರಾಮದ ನಿವಾಸಿ ಜಾಕೀರ್ ಹುಸೈನ್ (29) ಎಂದು ಗುರುತಿಸಲಾಗಿದೆ.

    ರಾಜ್ಯದಲ್ಲಿ ಇಂದಿನಿಂದ ನಾಲ್ಕು ದಿನ ಭಾರೀ ಮಳೆ : ಹವಾಮಾನ ಇಲಾಖೆ

    ಬೆಂಗಳೂರು : ರಾಜ್ಯಾದ್ಯಂತ ಮುಂದಿನ 4 ದಿನಗಳ ಕಾಲ ಅಂದ್ರೆ ಜೂನ್ 26ರವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮನ್ಸೂಚನೆ ಕೊಟ್ಟಿದೆ. ಈ ಹಿನ್ನೆಲೆ...