ಇರಾನ್ ತನ್ನ ವಿರೋಧಿಗಳ ಹೆಡೆಮುರಿ ಕಟ್ಟಲು ಸಜ್ಜಾಗಿ ನಿಂತಿದೆ. ಅದ್ರಲ್ಲೂ ಮಧ್ಯಪ್ರಾಚ್ಯದಲ್ಲಿ ತನ್ನ ವಿರೋಧ ಕಟ್ಟಿಕೊಂಡವರಿಗೆ ಬಿಸಿ ಮುಟ್ಟಿಸಲು ಈ ಕ್ರಮ ಕೈಗೊಂಡಿದೆ ಎಂಬುದು ತಜ್ಞರ ವಾದ. ಇರಾನ್ನ ಸಂಸ್ಕರಣಾ ಸಾಮರ್ಥ್ಯ ಹೆಚ್ಚುವುದರಿಂದ ಅಣ್ವಸ್ತ್ರ ಉತ್ಪಾದನೆ ಕೂಡ ಹೆಚ್ಚಲಿದೆ, ಇದನ್ನು ವಿರೋಧಿಗಳ ಮೇಲೆ ಇರಾನ್ ಬಳಸು ಅಪಾವಿದೆ ಎಂಬುದು ಕೆಲ ರಾಷ್ಟ್ರಗಳ ಆರೋಪ. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಇರಾನ್ ತನ್ನ ಅಣುಸ್ಥಾವರಗಳ ಅಭಿವೃದ್ಧಿಯತ್ತ ಮತ್ತಷ್ಟು ಗಮನ ಹರಿಸುತ್ತಿದೆ. ಈ ಮೂಲಕ ಇರಾನ್ ಸೇಡಿಗೆ ಸೇಡು, ರಕ್ತಕ್ಕೆ ರಕ್ತದ ನಿಯಮ ಅನುಸರಿಸುತ್ತಿದೆ.
ಇರಾನ್ ರೊಚ್ಚಿಗೆದ್ದಿದೆ, ಕೆಲ ದಿನಗಳ ಹಿಂದೆ ತನ್ನ ಅಣುಸ್ಥಾವರದ ಮೇಲೆ ನಡೆದ ದಾಳಿಗೆ ಪ್ರತಿಕಾರದ ಹೆಜ್ಜೆ ಇಟ್ಟಿದೆ. ಎಲ್ಲಾ ನಿಯಮ ಗಾಳಿಗೆ ತೂರಿ ಯುರೇನಿಯಂ (ಅಣುಬಾಂಬ್ನ ಕಚ್ಚಾ ಪದಾರ್ಥ) ಉತ್ಪಾದನೆ ಹೆಚ್ಚಿಸಲು ಮುಂದಾಗಿದೆ. ಸದ್ಯ ಪ್ರತಿ ಗಂಟೆಗೆ ಸುಮಾರು 9 ಗ್ರಾಂ ಯುರೇನಿಯಂ ಸಂಸ್ಕರಿಸುವ ಸಾಮರ್ಥ್ಯ ಇರಾನ್ಗಿದೆ. ಈ ಸಂಸ್ಕರಣಾ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಮುಂದಾಗಿದೆ.
ಈ ಮೂಲಕ ಅಣ್ವಸ್ತ್ರ ಯುದ್ಧಕ್ಕೆ ಇರಾನ್ ಸಿದ್ಧವಾಗಿದೆಯಾ ಎಂಬ ಅನುಮಾನ ಅಮೆರಿಕ ಹಾಗೂ ಇಸ್ರೇಲ್ ಮಿತ್ರರಿಗೆ ಕಾಡುತ್ತಿದೆ. ಕೆಲ ದಿನಗಳ ಹಿಂದೆ ಇರಾನ್ನ ನತಾಂಜ್ ನಗರದ ಅಂಡರ್ಗ್ರೌಂಡ್ ಯುರೇನಿಯಂ ಅಣು ಸಂಸ್ಕರಣಾ ಘಟಕದಲ್ಲಿ ದಿಢೀರ್ ವಿದ್ಯುತ್ ಕಡಿತವಾಗಿತ್ತು. ತಕ್ಷಣ ಎಚ್ಚೆತ್ತುಕೊಂಡ ಇರಾನ್ ಸ್ಥಾವರ ಬಂದ್ ಮಾಡಿ ಹೈಅಲರ್ಟ್ ಘೋಷಿಸಿತ್ತು. ಸಹಜವಾಗಿ ಈ ದಾಳಿಗೆ ಇರಾನ್, ಇಸ್ರೇಲ್ ಸರ್ಕಾರವನ್ನೇ ದೂಷಿಸಿತ್ತು. ದಾಳಿ ನಡೆದು ಕೆಲವು ದಿನಗಳು ಕಳೆಯುವುದರ ಒಳಗೆ ಯುರೇನಿಯಂ ಸಂಸ್ಕರಣಾ ಸಾಮರ್ಥ ಹೆಚ್ಚಿಸಲು ಇರಾನ್ ಮುಂದಾಗಿದೆ. ಇದು ಸಹಜವಾಗಿ ಮಧ್ಯಪ್ರಾಚ್ಯದಲ್ಲಿ ಕೆಂಡದಂತಹ ಪರಿಸ್ಥಿತಿ ಸೃಷ್ಟಿಸಿದೆ.
ನ್ಯೂಕ್ಲಿಯರ್ ಕಂಪ್ಯೂಟರ್ಸ್ ಹೈಜಾಕ್ ಕೆಲ ತಿಂಗಳ ಹಿಂದೆ ಇರಾನ್ ಮೂಲದ ಹ್ಯಾಕರ್ಸ್ ಗ್ಯಾಂಗ್ ಇಸ್ರೇಲ್ನ ಅಣುಸ್ಥಾವರದ ಮೇಲೆ ಸೈಬರ್ ಅಟ್ಯಾಕ್ ಮಾಡಿತ್ತು. ಆದರೆ ದಾಳಿಯಲ್ಲಿ ವಿಫಲವಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ರೊಚ್ಚಿಗೆದ್ದ ಇಸ್ರೇಲ್ ಕೌಂಟರ್ ಕೊಟ್ಟಿತ್ತು. ಆದರೆ ಇಸ್ರೇಲ್ ಹ್ಯಾಕರ್ಸ್ ನಡೆಸಿದ ದಾಳಿ ಫಲ ನೀಡಿ, ಇರಾನ್ನ ಪರಮಾಣು ಸ್ಥಾವರಗಳಲ್ಲಿ ಘೋರ ದುರಂತ ನಡೆದಿತ್ತು. ಇದ್ದಕ್ಕಿದ್ದಂತೆ ಪರಮಾಣು ಸ್ಥಾವರದಲ್ಲಿ ಬೆಂಕಿ ಕಾಣಿಸಿಕೊಂಡು ಇರಾನ್ ಬೆಚ್ಚಿಬಿದ್ದಿತ್ತು. ಈ ದಾಳಿಯನ್ನು ನಡೆಸಿದ್ದು ಇಸ್ರೇಲ್ ಎಂಬ ಆರೋಪವನ್ನ ಅಂದಿನಿಂದಲೂ ಇರಾನ್ ಮಾಡುತ್ತಾ ಬಂದಿದೆ. ಆದರೆ ಈವರೆಗೂ ಅದಕ್ಕೆ ಸಾಕ್ಷಿಗಳು ಸಿಕ್ಕಿಲ್ಲ.
ಕೆಲ ತಿಂಗಳ ಹಿಂದೆ ಇರಾನ್ ಮೂಲದ ಹ್ಯಾಕರ್ಸ್ ಗ್ಯಾಂಗ್ ಇಸ್ರೇಲ್ನ ಅಣುಸ್ಥಾವರದ ಮೇಲೆ ಸೈಬರ್ ಅಟ್ಯಾಕ್ ಮಾಡಿತ್ತು. ಆದರೆ ದಾಳಿಯಲ್ಲಿ ವಿಫಲವಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ರೊಚ್ಚಿಗೆದ್ದ ಇಸ್ರೇಲ್ ಕೌಂಟರ್ ಕೊಟ್ಟಿತ್ತು. ಆದರೆ ಇಸ್ರೇಲ್ ಹ್ಯಾಕರ್ಸ್ ನಡೆಸಿದ ದಾಳಿ ಫಲ ನೀಡಿ, ಇರಾನ್ನ ಪರಮಾಣು ಸ್ಥಾವರಗಳಲ್ಲಿ ಘೋರ ದುರಂತ ನಡೆದಿತ್ತು. ಇದ್ದಕ್ಕಿದ್ದಂತೆ ಪರಮಾಣು ಸ್ಥಾವರದಲ್ಲಿ ಬೆಂಕಿ ಕಾಣಿಸಿಕೊಂಡು ಇರಾನ್ ಬೆಚ್ಚಿಬಿದ್ದಿತ್ತು. ಈ ದಾಳಿಯನ್ನು ನಡೆಸಿದ್ದು ಇಸ್ರೇಲ್ ಎಂಬ ಆರೋಪವನ್ನ ಅಂದಿನಿಂದಲೂ ಇರಾನ್ ಮಾಡುತ್ತಾ ಬಂದಿದೆ. ಆದರೆ ಈವರೆಗೂ ಅದಕ್ಕೆ ಸಾಕ್ಷಿಗಳು ಸಿಕ್ಕಿಲ್ಲ.
ಇನ್ನೂ ಮೊನ್ನೆ ಮೊನ್ನೆ ಕೆಂಪು ಸಮುದ್ರದಲ್ಲಿ ಅಂದರೆ ಸೂಯೆಜ್ ಕಾಲುವೆ ಕೂಡುವ ಸಮುದ್ರದಲ್ಲಿ ಇರಾನ್ ಹಡಗಿನ ಮೇಲೆ ಭೀಕರ ದಾಳಿ ನಡೆದಿತ್ತು. ತನ್ನ ಸರಕು ಸಾಗಾಣಿಕೆ ಹಡಗಿನ ಮೇಲೆ ದಾಳಿ ನಡೆದಿರುವುದನ್ನು ಕಂಡು ಇರಾನ್ ಕೆಂಡವಾಗಿತ್ತು. ಇಸ್ರೇಲ್ನ ಹಡಗುಗಳ ಮೇಲೆ ಹಿಂದಿನ ದಾಳಿಗೆ ಇದು ಪ್ರತೀಕಾರವಾಗಿದೆ ಎಂಬ ಅನುಮಾನವನ್ನೂ ಇರಾನ್ ವ್ಯಕ್ತಪಡಿಸಿತ್ತು. ಇದೀಗ ಮತ್ತೊಮ್ಮೆ ಇರಾನ್ನ ಅಣುಕೇಂದ್ರಗಳ ಮೇಲೆ ದಾಳಿ ನಡೆದಿರುವುದು ಎರಡೂ ರಾಷ್ಟ್ರಗಳ ನಡುವೆ ಕಿಚ್ಚು ಹೊತ್ತುವಂತೆ ಮಾಡಿದೆ. ಪಾಶ್ಚಿಮಾತ್ಯ ರಾಷ್ಟ್ರಗಳು ಈ ಎಲ್ಲಾ ಬೆಳವಣಿಗೆಗಳನ್ನ ಸೂಕ್ಷ್ಮವಾಗಿ ಗಮನಿಸುತ್ತಿವೆ.