Tuesday, March 19, 2024
spot_img
More

    Latest Posts

    IPL 15 ನೇ ಆವೃತ್ತಿ ವೇಳಾಪಟ್ಟಿ ಪ್ರಕಟ

    ಕ್ರಿಕೆಟ್ ಲೋಕದ ಚುಟುಕು ಕದನ ಐಪಿಎಲ್ 15 ನೇ ಆವೃತ್ತಿ ಎದುರು ನೋಡುತ್ತಿದ್ದ ಕ್ರಿಡಾಭಿಮಾನಿಗಳಿಗೆ ಈಗ ಸಿಹಿ ಸುದ್ದಿ.ಮಾರ್ಚ್ 26 ರಿಂದ ಐಪಿಎಲ್ 15 ನೇ ಆವೃತ್ತಿ ಆರಂಭಗೊಳ್ಳಲಿದೆ. ಎಂದು ಬಿಸಿಸಿಐ ಅಧಿಕೃತ ಹೇಳಿಕೆ ನೀಡಿತ್ತು. ಜೊತೆಗೆ ಎಲ್ಲಿ ಎಷ್ಟು ಪಂದ್ಯಗಳು ನಡೆಯುತ್ತವೆ ಎಂಬುದರ ವೇಳಾಪಟ್ಟಿಯನ್ನು ಪ್ರಕಟಿಸಿದೆ.

    ಮಾರ್ಚ್ 26 ರಂದು ಉದ್ಘಾಟನಾ ಪಂದ್ಯ ನಡೆದರೆ ಮೇ 29ರಂದು ಫೈನಲ್ ಪಂದ್ಯ ನಡೆಯಲಿದೆ. ಒಟ್ಟು 10 ತಂಡಗಳು 70 ಲೀಗ್ ಪಂದ್ಯಗಳಲ್ಲಿ ಮುಖಾಮುಖಿಯಾಗಲಿವೆ.

    ಮುಂಬೈ ಮತ್ತು ಪುಣೆಯಲ್ಲಿ ಲೀಗ್ ಪಂದ್ಯಗಳು

    ಲೀಗ್ ಸುತ್ತಿನ ಎಲ್ಲಾ 70 ಪಂದ್ಯಗಳು ಮುಂಬೈ ಮತ್ತು ಪುಣೆ ಮೈದಾನದಲ್ಲಿ ನಡೆಯಲಿವೆ. ಮುಂಬೈನ ಮೂರು ಸ್ಥಳಗಳಾದ ವಾಂಖೆಡೆ ಸ್ಟೇಡಿಯಂ, ಡಿವೈ ಪಾಟೀಲ್ ಮತ್ತು ಬ್ರಬೋರ್ನ್ ನಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಇದಲ್ಲದೇ ಪುಣೆಯಲ್ಲಿ 15 ಪಂದ್ಯಗಳು ನಡೆಯಲಿವೆ.

    ರಾಯಲ್ ಚಾಲೆಂಜರ್ಸ್ ಬೆಂಗಳೂರು: ಬೆಂಗಳೂರು ತಂಡ ಮುಂಬೈ, ಕೋಲ್ಕತ್ತಾ, ದೆಹಲಿ, ಲಕ್ನೋ ಜೊತೆಗೆ ತಲಾ 1 ಪಂದ್ಯ, ರಾಜಸ್ಥಾನ, ಚೆನ್ನೈ, ಹೈದರಾಬಾದ್, ಪಂಜಾಬ್ ಮತ್ತು ಗುಜರಾತ್ ಜೊತೆಗೆ 2 ಪಂದ್ಯ ಆಡಲಿದೆ.

    ಕೋಲ್ಕತ್ತಾ ನೈಟ್ ರೈಡರ್ಸ್: ಮುಂಬೈ ಇಂಡಿಯನ್ಸ್, ರಾಜಸ್ಥಾನ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ಜೈಂಟ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ತಲಾ 2 ಪಂದ್ಯ ಆಡಿದರೆ ಚೆನ್ನೈ ಸೂಪರ್ ಕಿಂಗ್ಸ್ ನೊಂದಿಗೆ ಒಂದೇ ಒಂದು ಪಂದ್ಯ ಆಡಲಿದೆ.

    ರಾಜಸ್ಥಾನ್ ರಾಯಲ್ಸ್: ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ತಲಾ 2. 1 ಪಂದ್ಯದಲ್ಲಿ ಚೆನ್ನೈ, ಹೈದರಾಬಾದ್, ಪಂಜಾಬ್ ಮತ್ತು ಗುಜರಾತ್ ತಂಡಗಳನ್ನು ಎದುರಿಸಲಿದೆ.

    ಮುಂಬೈ ಇಂಡಿಯನ್ಸ್: ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತಲಾ 2 ಪಂದ್ಯಗಳನ್ನು ಆಡಲಿದೆ. ಸನ್ರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನೊಂದಿಗೆ ತಲಾ 1 ಲೀಗ್ ಪಂದ್ಯ ಆಡತ್ತದೆ.

    ಪಂಜಾಬ್ ಕಿಂಗ್ಸ್: ದೆಹಲಿ, ಚೆನ್ನೈ ಸೂಪರ್ ಕಿಂಗ್ಸ್, ಹೈದರಾಬಾದ್, ಆರ್ಸಿಬಿ ಮತ್ತು ಗುಜರಾತ್ ವಿರುದ್ಧ ತಲಾ 2, ಮುಂಬೈ, ಕೋಲ್ಕತ್ತಾ, ರಾಜಸ್ಥಾನ ಮತ್ತು ಲಕ್ನೋ ವಿರುದ್ಧ ತಲಾ 1 ಪಂದ್ಯ ಹೊಂದಿರುತ್ತದೆ.

    ಗುಜರಾತ್ ಟೈಟಾನ್ಸ್: ಮುಂಬೈ, ಕೆಕೆಆರ್, ರಾಜಸ್ಥಾನ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತಲಾ 1 ಪಂದ್ಯ. ಲಕ್ನೋ, ಚೆನ್ನೈ, ಹೈದರಾಬಾದ್, ಪಂಜಾಬ್ ವಿರುದ್ಧ ತಲಾ 1 ಪಂದ್ಯ.

    ಡೆಲ್ಲಿ ಕ್ಯಾಪಿಟಲ್ಸ್: ಲೀಗ್ ಹಂತದಲ್ಲಿ ಮುಂಬೈ ಇಂಡಿಯನ್ಸ್, ಕೋಲ್ಕತ್ತಾ, ರಾಜಸ್ಥಾನ ರಾಯಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ ತಲಾ 2, ಚೆನ್ನೈ, ಹೈದರಾಬಾದ್, ಬೆಂಗಳೂರು ಮತ್ತು ಗುಜರಾತ್ ವಿರುದ್ಧ ತಲಾ 1 ಪಂದ್ಯ ಆಡಲಿದೆ.

    ಲಕ್ನೋ ಸೂಪರ್ ಜೈಂಟ್ಸ್: ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ, ದೆಹಲಿ ಮತ್ತು ಗುಜರಾತ್ ವಿರುದ್ಧ ತಲಾ 2 ಪಂದ್ಯ. ಚೆನ್ನೈ, ಹೈದರಾಬಾದ್, ಬೆಂಗಳೂರು ಮತ್ತು ಗುಜರಾತ್ ವಿರುದ್ಧ ತಲಾ 1 ಪಂದ್ಯ ಆಡಲಿದೆ.

    ಚೆನ್ನೈ ಸೂಪರ್ ಕಿಂಗ್ಸ್: ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್, ಸನ್ ರೈಸರ್ಸ್ ಹೈದರಾಬಾದ್, ಆರ್ ಸಿಬಿ, ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ವಿರುದ್ಧ ತಲಾ 2 ಪಂದ್ಯಗಳನ್ನು ಆಡಲಿದೆ. ಆದರೆ ಕೋಲ್ಕತ್ತಾ, ರಾಜಸ್ಥಾನ, ದೆಹಲಿ ಮತ್ತು ಲಕ್ನೋ ಜೊತೆ ತಲಾ 1 ಪಂದ್ಯವನ್ನು ಆಡಲಿದ್ದಾರೆ.

    ಸನ್ ರೈಸರ್ಸ್ ಹೈದರಾಬಾದ್: ಮುಂಬೈ, ರಾಜಸ್ಥಾನ, ದೆಹಲಿ, ಲಕ್ನೋ ಜೊತೆ ತಲಾ 1 ಪಂದ್ಯವನ್ನು ಆಡಲಿದೆ. ಅದೇ ಸಮಯದಲ್ಲಿ, ಇದು ಕೋಲ್ಕತ್ತಾ, ಚೆನ್ನೈ, ಆರ್ಸಿಬಿ, ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ನೊಂದಿಗೆ ತಲಾ 2 ಲೀಗ್ ಪಂದ್ಯ ಆಡಲಿದೆ.

    ಈ ಬಾರಿ ಪ್ರೇಕ್ಷಕರಿಗೆ ಅವಕಾಶ

    ಕೊರೊನಾ ಕಾರಣದಿಂದ ಪ್ರೇಕ್ಷಕರಿಲ್ಲದೆ ಐಪಿಎಲ್ ಕ್ರಿಕೆಟ್ ಪಂದ್ಯಗಳು ನಡೆದಿದ್ದವು ಆದರೆ ಈ ಬಾರಿ ಶೇಕಡಾ ನಲವತ್ತರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡುವ ತೀರ್ಮಾನವನ್ನು ಬಿಸಿಸಿಐ ಕೈಗೊಂಡಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss