ಮಂಗಳೂರು: ಚಿಲಿಂಬಿ ರಿಲಯನ್ಸ್ ಸೂಪರ್ ಮಾರ್ಟ್ ಹತ್ತಿರ ಇರುವ ಪಾದಚಾರಿ ರಸ್ತೆ ಕುಸಿದು ಹಲವು ವರ್ಷಗಳೇ ಆಗಿರುತ್ತವೆ. ಇಲ್ಲಿ ಪ್ರತಿ ದಿನ ಶಾಲೆಗೆ ಹೋಗುವ ಮಕ್ಕಳು ಮತ್ತು ತಮ್ಮ ದಿನ ನಿತ್ಯದ ಕೆಲಸಕ್ಕೆ ಹೋಗುವ ಜನರು ಓಡಾಡುವ ಪಾದಚಾರಿ ರಸ್ತೆ ಆಗಿರುತ್ತದೆ. ಆದರೆ ನಮ್ಮ ಸರಕಾರಿ ಅಧಿಕಾರಿಗಳಿಗೆ ಇದು ಕಂಡು ಬರುವುದಿಲ್ಲ. ಇಲ್ಲಿ ಅಪಾಯ ಎದುರು ಆಗುವ ಮುಂಚೆ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡು ಇದನ್ನು ಸರಿ ಮಾಡಿ ಜನರಿಗೆ ಸುಗಮವಾಗಿ ಓಡಾಡುವಂತೆ ಅನುಕೂಲ ಮಾಡಿ ಕೊಡಬೇಕಾಗಿದೆ.



