Sunday, December 5, 2021

ಮೂಡಬಿದ್ರೆ: ಆಳ್ವಾಸ್ ನುಡಿಸಿರಿ ಮುಂದೂಡಿಕೆ

ಮೂಡಬಿದ್ರೆ: ಈ ಡಿಸೆಂಬರ್ 31, ಜನವರಿ 1 ಮತ್ತು 2ರಂದು ನಡೆಯಬೇಕಿದ್ದ 'ಆಳ್ವಾಸ್ ನುಡಿಸಿರಿ' ನಾಡು-ನುಡಿ-ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನವನ್ನು ಮುಂದೂಡಲಾಗಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಸಭೆ ಸಮಾರಂಭಗಳನ್ನು ನಡೆಸಲು ಸರಕಾರ ನಿರ್ಬಂಧ...
More

    Latest Posts

    ಮಂಗಳೂರು: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ: ನ್ಯಾಯವಾದಿಗೆ ಹೈಕೋರ್ಟ್ ಜಾಮೀನು ನಿರಾಕರಣೆ !

    ಮಂಗಳೂರು: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯವಾದಿ ಕೆ.ಎಸ್.ಎನ್​ ರಾಜೇಶ್​ನಿಗೆ ಹೈಕೋರ್ಟ್ ನಿಂದಲೂ ಜಾಮೀನು ನಿರಾಕರಣೆಯಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ತಿಳಿಸಿದರು.ಜಿಲ್ಲಾ...

    ಬಂಟ್ವಾಳ: ಪುಂಜಾಲಕಟ್ಟೆಯಲ್ಲಿ ಕೋಟ ಶ್ರೀನಿವಾಸ್ ಪೂಜಾರಿ ಪ್ರಚಾರ

    ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲ ನಾವೂರು ಮಹಾಶಕ್ತಿ ಕೇಂ ದ್ರದ ಆಶ್ರಯದಲ್ಲಿ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯು ಪುಂಜಾಲಕಟ್ಟೆಯ ಸುವಿಧ ಸಭಾಭವನದಲ್ಲಿ ಜರುಗಿತು.ಕಾರ್ಯಕ್ರಮವನ್ನು ದೀಪ ಬೆಳಗಿಸಿ...

    ಉಡುಪಿ: ಐದು ದಿನಗಳಲ್ಲಿ 91 ಮಂದಿ ಅಂತಾರಾಷ್ಟ್ರೀಯ ಪ್ರಯಾಣಿಕರ ತಪಾಸಣೆ

    ಉಡುಪಿ: ಒಮಿಕ್ರಾನ್ ಭೀತಿಯ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಜಿಲ್ಲಾಡಳಿತಕ್ಕೆ ಪರಿಷ್ಕೃತ ಮಾರ್ಗಸೂಚಿಗಳನ್ನು ಕಳುಹಿಸಿದೆ. ಉಡುಪಿ ಜಿಲ್ಲೆಯಲ್ಲಿ ಸದ್ಯ 88 ಸಕ್ರಿಯ ಕೋವಿಡ್ ಪ್ರಕರಣಗಳಿದ್ದು, ಕಳೆದ ಒಂದು ವಾರದ ಪಾಸಿಟಿವಿಟಿ ದರ...

    ಲಸಿಕೆ ಪಡೆಯದವರ ಮನೆಗಳ ಸರ್ವೆ ಕಾರ್ಯ : ಉಡುಪಿ ಡಿ.ಸಿ

    ಉಡುಪಿ: ಸಮುದಾಯದ ಮುಖಂಡರು ಮತ್ತು ಸಂಘ- ಸಂಸ್ಥೆಗಳ ಸಹಕಾರದೊಂದಿಗೆ ಜಿಲ್ಲೆಯಲ್ಲಿ ಶೇಕಡ ನೂರರಷ್ಟು ಲಸಿಕೆ ನಮ್ಮ ಗುರಿ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಹೇಳಿದ್ದಾರೆ. ಇವತ್ತು...

    ನ.29ರಿಂದ ಭಾರತ – ಸಿಂಗಾಪುರ ವಿಮಾನಯಾನ ಪುನರಾರಂಭ

    ಮುಂಬೈ: ಕೋವಿಡ್‌ ಕಾರಣ ನಿಂತು ಹೋಗಿದ್ದ ಸಿಂಗಾಪುರ-ಭಾರತ ವಿಮಾನಯಾನ  ನ.29ರಿಂದ ಪುನಾರಂಭವಾಗಲಿದೆ. ನಿಗದಿತ ಪ್ರಯಾಣಿಕ ವಿಮಾನಗಳನ್ನು ಪುನರಾರಂಭಿಸುವ ಕುರಿತು ಸಿವಿಲ್‌ ಏವಿಯೇಷನ್‌ ಅಥಾರಿಟಿ ಆಫ್‌ ಸಿಂಗಾಪುರನೊಂದಿಗೆ ಭಾರತದ ನಾಗರಿಕ ವಿಮಾನ ಯಾನ ಸಚಿವಾಲಯ ಒಪ್ಪಂದ ಮಾಡಿಕೊಂಡಿವೆ. ನ.29ರಿಂದ ಚೆನ್ನೈ, ದೆಹಲಿ ಹಾಗೂ ಮುಂಬೈನಿಂದ ಪ್ರತಿದಿನ ಆರು ವಿಮಾನಗಳನ್ನು ಭಾರತ- ಸಿಂಗಾಪುರ ಪ್ರವಾಸಕ್ಕಾಗಿ ನಿಗದಿಪಡಿಸಲಾಗಿದೆ.

    ಒಪ್ಪಂದದ ಪ್ರಕಾರ ವ್ಯಾಕ್ಸಿನೇಟೆಡ್‌ ಸಂಚಾರಿ ಲೇನ್‌ ಬಳಸಿ ಕ್ವಾರಂಟೈನ್‌ ರಹಿತ ವಿದೇಶ ಪ್ರಯಾಣ ಮಾಡಬಹುದಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯಿಂದ (WHO) ಮಾನ್ಯತೆ ಪಡೆದ ಕೋವ್ಯಾಕ್ಸಿನ್‌ ಅಥವಾ ಕೋವಿಶೀಲ್ಡ್‌ ಲಸಿಕೆಯ ಎರಡೂ ಡೋಸುಗಳನ್ನು ಪಡೆದವರು ಸಿಂಗಾಪುರ ಪ್ರವೇಶಿಸಬಹುದಾಗಿದೆ.

    ಉತ್ತರ ಕರ್ನಾಟಕದ ಮೊದಲ ಕಾರ್ಗೊ ಸೇವೆ ಆರಂಭ : ಕೃಷಿ ಉಡಾನ್‌ 2.0(Krishi UDAN 2.0) ಯೋಜನೆಯಡಿ ಸೇರ್ಪಡೆಯಾಗಿದ್ದ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಗ್ರಾಹಕರ ಸರಕು ಸಾಗಣೆ ಸೇವೆಯ ಯೋಜನೆ (Cargo) ಬುಧವಾರ ವಿದ್ಯುಕ್ತವಾಗಿ ಆರಂಭಿಸಲಾಗಿದೆ.

    ಉತ್ತರ ಕರ್ನಾಟಕದ ವೈಮಾನಿಕ ಕಾರ್ಗೋ ಸೇವೆ(Air Cargo Service) ಇದೇ ಮೊದಲನೆಯದಾಗಿದೆ. ಈ ಭಾಗದ ಕೃಷಿ ಉತ್ಪನ್ನಗಳ ಸಾಗಾಟ, ವ್ಯಾಪಾರಕ್ಕೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ. ಹಳೆಯ ಟರ್ಮಿನಲ್‌ ಕಟ್ಟಡವನ್ನೇ ಸರಕು ಸಾಗಣೆ ಕೇಂದ್ರವನ್ನಾಗಿ ಪರಿವರ್ತಿಸಲಾಗಿದೆ. ಉತ್ತರ ಕರ್ನಾಟಕದಲ್ಲಿ ವ್ಯಾಪಾರ ಅಭಿವೃದ್ಧಿ ಮತ್ತು ಸಾಗಣೆ ವ್ಯವಸ್ಥೆಯಲ್ಲಿ ಸಾಕಷ್ಟು ಪ್ರಗತಿಗೆ ಇದು ಪೂರಕವಾಗಲಿದೆ ಎಂಬ ಆಶಯವನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟ್ವೀಟರ್‌ನಲ್ಲಿ ವ್ಯಕ್ತಪಡಿಸಿದ್ದಾರೆ. ಒಂದು ಸಾವಿರ ಚದುರ ಮೀಟರ್‌ ವಿಸ್ತಾರದಲ್ಲಿ ಕಾರ್ಗೋ ಸೇವೆ ಮುಂದುವರಿಯಲಿದ್ದು, ಒಂದು ಬಾರಿ 100 ಮೆಟ್ರಿಕ್‌ ಟನ್‌ ಸಾಮರ್ಥ್ಯದ ಸರಕು ಸಾಗಿಸಬಹುದಾಗಿದೆ. ವಾರ್ಷಿಕವಾಗಿ 1500 ಮೆಟ್ರಿಕ್‌ ಟನ್‌ ನಷ್ಟು ಗೂಡ್ಸ್‌ ಗುರಿ ಹೊಂದಲಾಗಿದೆ.

    ಹುಬ್ಬಳ್ಳಿ ವಿಮಾನ ನಿಲ್ದಾಣದ ಹಳೆ ಕಟ್ಟಡವನ್ನು 46.27 ಲಕ್ಷ ವೆಚ್ಚದಲ್ಲಿ ಎಎಐ (Airports Authority of India) ಕಾರ್ಗೋ ಲಾಜಿಸ್ಟಿಕ್ಸ್‌ ಆ್ಯಂಡ್‌ ಅಲೈಡ್‌ ಸರ್ವೀಸಸ್‌ ಕಂಪನಿ ಲಿ. ಸಹಯೋಗದಲ್ಲಿ ಕಾರ್ಗೋ ಸೇವೆ ಆರಂಭವಾಗಿದೆ.

    ಕೇಂದ್ರ ವಿಮಾನಯಾನ ಸಚಿವಾಲಯ ಈಚೆಗೆ ಕೃಷಿ ಉಡಾನ್‌ 2.0 ಯೋಜನೆಯಡಿ 53 ವಿಮಾನ ನಿಲ್ದಾಣಗಳನ್ನು ಆಯ್ಕೆ ಮಾಡಿತ್ತು. ಅದರಲ್ಲಿ ಹುಬ್ಬಳ್ಳಿಯನ್ನು ಕೂಡ ಸೇರ್ಪಡೆ ಮಾಡಲಾಗಿದೆ. ಕೈಗಾರಿಕಾ ಉತ್ಪನ್ನಗಳ ಸರಕು ಸಾಗಣೆಗೆ ಇದರಿಂದ ಉದ್ಯಮಿಗಳಿಗೆ ಸಾಕಷ್ಟು ನೆರವಾಗುವ ನಿರೀಕ್ಷೆ ಹೊಂದಲಾಗಿದೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕ ಪ್ರಮೋದ ಕುಮಾರ ಠಾಕರೆ ತಿಳಿಸಿದ್ದಾರೆ.

    Latest Posts

    ಮಂಗಳೂರು: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ: ನ್ಯಾಯವಾದಿಗೆ ಹೈಕೋರ್ಟ್ ಜಾಮೀನು ನಿರಾಕರಣೆ !

    ಮಂಗಳೂರು: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯವಾದಿ ಕೆ.ಎಸ್.ಎನ್​ ರಾಜೇಶ್​ನಿಗೆ ಹೈಕೋರ್ಟ್ ನಿಂದಲೂ ಜಾಮೀನು ನಿರಾಕರಣೆಯಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ತಿಳಿಸಿದರು.ಜಿಲ್ಲಾ...

    ಬಂಟ್ವಾಳ: ಪುಂಜಾಲಕಟ್ಟೆಯಲ್ಲಿ ಕೋಟ ಶ್ರೀನಿವಾಸ್ ಪೂಜಾರಿ ಪ್ರಚಾರ

    ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲ ನಾವೂರು ಮಹಾಶಕ್ತಿ ಕೇಂ ದ್ರದ ಆಶ್ರಯದಲ್ಲಿ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯು ಪುಂಜಾಲಕಟ್ಟೆಯ ಸುವಿಧ ಸಭಾಭವನದಲ್ಲಿ ಜರುಗಿತು.ಕಾರ್ಯಕ್ರಮವನ್ನು ದೀಪ ಬೆಳಗಿಸಿ...

    ಉಡುಪಿ: ಐದು ದಿನಗಳಲ್ಲಿ 91 ಮಂದಿ ಅಂತಾರಾಷ್ಟ್ರೀಯ ಪ್ರಯಾಣಿಕರ ತಪಾಸಣೆ

    ಉಡುಪಿ: ಒಮಿಕ್ರಾನ್ ಭೀತಿಯ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಜಿಲ್ಲಾಡಳಿತಕ್ಕೆ ಪರಿಷ್ಕೃತ ಮಾರ್ಗಸೂಚಿಗಳನ್ನು ಕಳುಹಿಸಿದೆ. ಉಡುಪಿ ಜಿಲ್ಲೆಯಲ್ಲಿ ಸದ್ಯ 88 ಸಕ್ರಿಯ ಕೋವಿಡ್ ಪ್ರಕರಣಗಳಿದ್ದು, ಕಳೆದ ಒಂದು ವಾರದ ಪಾಸಿಟಿವಿಟಿ ದರ...

    ಲಸಿಕೆ ಪಡೆಯದವರ ಮನೆಗಳ ಸರ್ವೆ ಕಾರ್ಯ : ಉಡುಪಿ ಡಿ.ಸಿ

    ಉಡುಪಿ: ಸಮುದಾಯದ ಮುಖಂಡರು ಮತ್ತು ಸಂಘ- ಸಂಸ್ಥೆಗಳ ಸಹಕಾರದೊಂದಿಗೆ ಜಿಲ್ಲೆಯಲ್ಲಿ ಶೇಕಡ ನೂರರಷ್ಟು ಲಸಿಕೆ ನಮ್ಮ ಗುರಿ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಹೇಳಿದ್ದಾರೆ. ಇವತ್ತು...

    Don't Miss

    ಮಂಗಳೂರು: ಮೃತನ ತಾಯಿಗೆ ಸಿಗಬೇಕಿದ್ದ 15 ಲಕ್ಷ ಇನ್ಸೂರೆನ್ಸ್ ಹಣ ವಂಚಿಸಿದ ವಕೀಲ

    ಮಂಗಳೂರು: ಅಪಘಾತದಲ್ಲಿ ಮಗನನ್ನು ಕಳೆದುಕೊಂಡ ಪೋಷಕರು ಇನ್ನೂ ಕಣ್ಣೀರು ಸುರಿಸುತ್ತಲೇ ಇದ್ದಾರೆ. ಆದರೆ, ಈ ಕುಟುಂಬಕ್ಕೆ ಸಂದಾಯವಾಗಬೇಕಾಗಿದ್ದ 15 ಲಕ್ಷ ರೂ. ಇನ್ಸೂರೆನ್ಸ್ ಹಣವನ್ನೇ ವಕೀಲನೊಬ್ಬ ಚಾಣಾಕ್ಷತನದಿಂದ ತನ್ನ ಜೇಬಿಗೆ...

    ಸುಳ್ಯ: ನಿಯಂತ್ರಣ ತಪ್ಪಿದ ಐರಾವತ ಬಸ್- ತಪ್ಪಿದ ಭಾರಿ ಅನಾಹುತ

    ಸುಳ್ಯ: ಅರಂತೋಡು ಕಾಮದೇನು ಹೋಟೆಲ್ ಬಳಿಯ ತಿರುವಿನಲ್ಲಿ ಮಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಐರಾವತ ಬಸ್ ಅರಂತೋಡಿನ ಉಳುವಾರು ತಿರುವಿನಲ್ಲಿ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಇಂದು ವರದಿಯಾಗಿದೆ.ಬಸ್...

    ಕೋವಿಡ್ ಲಸಿಕೆ ಪಡೆಯದವರಿಗೆ ಶಾಕ್ : ಕಠಿಣ ಕ್ರಮಕ್ಕೆ ಮುಂದಾದ ಸರ್ಕಾರ

    ದೆಹಲಿ: ಒಮಿಕ್ರಾನ್ ಕೋವಿಡ್ ರೂಪಾಂತರಿ ವೈರಸ್ ಆತಂಕ ಹೆಚ್ಚಾಗುತ್ತಿದ್ದಂತೆ ಬಿಗಿ ಕ್ರಮಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ವೈರಸ್ ಹರಡುವಿಕೆ ತಡೆಯಲು ಲಸಿಕೆ ಪಡೆಯುವುದು ಅಗತ್ಯ ಎಂದು ...

    ಕೊಣಾಜೆ: ಸೈಟ್‌‌‌‌ನಲ್ಲಿ ನಿಲ್ಲಿಸಲಾಗಿದ್ದ ವಾಹನಗಳ ಬ್ಯಾಟರಿ ಕಳವು – ಇಬ್ಬರು ವಶಕ್ಕೆ

    ಕೊಣಾಜೆ: ಕುರ್ನಾಡಿನ ಮಿತ್ತಕೋಡಿ ಎಂಬಲ್ಲಿನ ಸೈಟ್‌‌‌‌ನಲ್ಲಿ ನಿಲ್ಲಿಸಲಾಗಿದ್ದ ಲಾರಿ, ಹಿಟಾಚಿ, ಜೆಸಿಬಿಗಳ 7 ಬ್ಯಾಟರಿಗಳನ್ನು ಕಳವುಗೈದ ಆರೋಪಿಗಳನ್ನು ಕೊಣಾಜೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು...

    ಮಂಗಳೂರು: 6ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ – ಆರೋಪಿ ರೌಡಿಶೀಟರ್ ಸೆರೆ

    ಮಂಗಳೂರು: ಮಗಳ ಮೇಲೆಯೇ ವ್ಯಕ್ತಿಯೋರ್ವ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ನಗರ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕದ್ರಿ ನಿವಾಸಿಯಾಗಿದ್ದ ಈತ ಒಂದನೇ ತರಗತಿಯಲ್ಲಿ ಓದುತ್ತಿದ್ದ...