Saturday, October 5, 2024
spot_img
More

    Latest Posts

    ಮಂಗಳೂರು ಉತ್ತರಕ್ಕೆ ಕೊಡುಗೈ ದಾನಿ ಇನಾಯತ್ ಅಲಿ ಫೈನಲ್

    ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಉದ್ಯಮಿ, ಕೊಡುಗೈ ದಾನಿ ಎಂದೇ ಖ್ಯಾತರಾಗಿರುವ ಇನಾಯತ್ ಅಲಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಇನಾಯತ್ ಅಲಿ ಅವರಿಗೆ ಹೈಕಮಾಂಡ್ ಟಿಕೇಟ್ ನೀಡಿದ್ದಲ್ಲದೆ ಅಧಿಕೃತವಾಗಿ ಚುನಾವಣಾ ನಾಮಪತ್ರ ಸಲ್ಲಿಸಲು ಕಾಂಗ್ರೆಸ್ ನ ಬಿ ಫಾರಂ ಕೂಡ ಬುಧವಾರ ನೀಡಿದೆ. ದೆಹಲಿಯಲ್ಲಿರುವ ಇನಾಯತ್ ಅಲಿ ಅವರು ಬಿ ಫಾರಂ ಹಿಡಿದುಕೊಂಡು ರಾತ್ರಿಯ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಲಿದ್ದು, ಅವರನ್ನು ಸ್ವಾಗತಿಸಲು ಕ್ಷೇತ್ರದ ಮತದಾರರು ಸಜ್ಜಾಗಿದ್ದಾರೆ. ನಾಳೆ ಇನಾಯತ್ ಅಲಿ ಅವರು ಸಹಸ್ರಾರು ಸಂಖ್ಯೆಯ ಅಭಿಮಾನಿಗಳು, ಮತದಾರರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಲು ವೇದಿಕೆ ಕೂಡ ಸಿದ್ಧಗೊಂಡಿದೆ. ಸರಳ ಸಜ್ಜನಿಕೆಯ ವ್ಯಕ್ತಿತ್ವ, ಜೊತೆಗೆ ಎಲ್ಲರೊಂದಿಗೂ ಬೆರೆಯುವ ಸ್ವಭಾವ, ಕಷ್ಟ ಎಂದು ಬಂದವರಿಗೆ ಪಾಟಿ-ಧರ್ಮ ನೋಡದೇ ಸಹಾಯದ ಹಸ್ತ ನೀಡುವ ಮನಸ್ಸು, ಸದಾ ಒಳ್ಳೆಯದ್ದನ್ನೇ ಬಯಸುವ ಸಮಾಜಮುಖಿ ಮನೋಭಾವ ಇವೆಲ್ಲವೂ ಇಂದು ಇನಾಯತ್ ಅಲಿಯವರನ್ನು ಶಾಸಕ ಸ್ಥಾನದತ್ತ ತಂದು ನಿಲ್ಲಿಸಿದೆ. ಪಕ್ಷದ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಇನಾಯತ್ ಅಲಿ, ಈಗಾಗಲೇ ನಿರಂತರವಾಗಿ ಕ್ಷೇತ್ರದುದ್ದಕ್ಕೂ ಸಂಚರಿಸಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸಿದ್ದು, ಭರ್ಜರಿ ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರೊಂದಿಗೆ ಕ್ಷೇತ್ರದ ಹಿರಿಯರು, ಕಿರಿಯರು ಸಾಥ್ ನೀಡುತ್ತಿದ್ದಾರೆ. ಬಹುದೊಡ್ಡ ಯುವಕರ ಪಡೆಯೇ ಇನಾಯತ್ ಅಲಿಯವರ ಬೆನ್ನ ಹಿಂದಿದ್ದು, ಈ ಬಾರಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರವನ್ನು ‘ಕೈ’ವಶ ಮಾಡಿಕೊಳ್ಳಲು ಇನಾಯತ್ ಅಲಿ ಟಿಕೆಟ್ ಘೋಷಣೆಗೂ ಮುನ್ನವೇ ಹಗಲು-ರಾತ್ರಿ ಎನ್ನದೆ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಪ್ರಬಲವಾಗಿರುವ ಹಾಲಿ ಶಾಸಕ ಡಾ. ಭರತ್ ಶೆಟ್ಟಿ ಎದುರು ಸೆಣಸಾಡಲು ಸಕ್ರೀಯ ಯುವ ನಾಯಕನ ಅವಶ್ಯಕತೆ ಮನಗಂಡಿರುವ ಕಾಂಗ್ರೆಸ್, ಇನಾಯತ್ ಅಲಿ ಸೂಕ್ತ ಅಭ್ಯರ್ಥಿ ಎಂದು ಪರಿಗಣಿಸಿ ಅವರಿಗೆ ಟಿಕೆಟ್ ನೀಡಿದೆ. ತಳಮಟ್ಟದಿಂದ ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿಕೊಂಡು ಬಂದಿರುವ ಇನಾಯತ್ ಅಲಿ ಅವರು, ಪ್ರಸ್ತುತ ರಾಜ್ಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೂಡ ಆಗಿರುವುದು ಈ ಬಾರಿ ಶಾಸಕನಾಗುವತ್ತ ತಂದು ನಿಲ್ಲಿಸಿದೆ. 25 ವರ್ಷಗಳ ರಾಜಕೀಯ ಜೀವನದಲ್ಲಿ ಕಾಂಗ್ರೆಸ್ ವಿದ್ಯಾರ್ಥಿ ಘಟಕವಾದ NSUI ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದು, ಜೊತೆಗೆ ಕಾರ್ಯಕರ್ತರ ಪ್ರೀತಿ ವಿಶ್ವಾಸಗಳನ್ನು ಗಳಿಸಿಕೊಂಡು ಹಂತಹಂತವಾಗಿ ರಾಜಕೀಯವಾಗಿ ಮೇಲೆ ಬಂದ ಖ್ಯಾತಿ ಇನಾಯತ್ ಅಲಿಯವರದ್ದು. 

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss