ಮಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕಲಾ ಮತ್ತು ಸಾಂಸ್ಕೃತಿಕ ಸಂಘ (ರಿ) ಬೆಂಗಳೂರು,ಜಿಲ್ಲಾ ಶಾಖೆ ದ.ಕ ಜಿಲ್ಲಾ ಮಂಗಳೂರು ಶಾಖೆ ಉದ್ಘಾಟನಾ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನ.6 ರಂದು ಬೆಳಗ್ಗೆ 9.30ಕ್ಕೆ ಶ್ರೀ ಕ್ಷೇತ್ರ ಮಂಗಳಾದೇವಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ.
ಪೊಲೀಸ್ ಆಯುಕ್ತರಾದ ಎನ್ ಶಶಿಕುಮಾರ್ ಕಾರ್ಯಕ್ರಮವನ್ನು ಉದ್ಗಾಟಿಸಲಿದ್ದಾರೆ.
ಕಾರ್ಯಕ್ರದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕಲಾ ಮತ್ತು ಸಾಂಸ್ಕೃತಿಕ ಸಂಘ ಮಂಗಳೂರು ಇದರ ಜಿಲ್ಲಾಧ್ಯಕ್ಷರಾದ (ಯು ಆರ್.ಶೆಟ್ಟಿ) ವಹಿಸಲಿದ್ದಾರೆ.

ಯು.ಆರ್ ಶೆಟ್ಟಿಯವರ ಕಿರು ಪರಿಚಯ
ಕಾಸರಗೋಡು ಜಿಲ್ಲೆಯ ಬದಿಯಡ್ಕ ಗ್ರಾಮದ ಮೇಗಿನ ಕಡಾರ್ ದಿವಂಗತ ಗೋಪಾಲಕೃಷ್ಣ ಶೆಟ್ಟಿ
(ಪೋಲೀಸ್ ಸಬ್ ಇನ್ಸ್‌ಪೆಕ್ಟರ್ ಮತ್ತು ದಿವಂಗತ ಲಲಿತಾ ಶೆಟ್ಟಿ ದಂಪತಿಯ ಪ್ರಥಮ ಪುತ್ರರಾದ ಶ್ರೀಯುತ
ಯು.ಆರ್ ಶೆಟ್ಟಿ ದ್ವಿತೀಯ ದರ್ಜೆ ಸಹಾಯಕರು, ಸರ್ಕಾರಿ ಪ್ರೌಢಶಾಲೆ-ಹೊಯಿಗೆ
ಬಜಾರ್, ಮಂಗಳೂರು ಇವರು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ 23 ವರ್ಷದಿಂದ ಸೇವೆ
ಸಲ್ಲಿಸುತ್ತಿದ್ದು, ಶಾಲಾ ಕಛೇರಿ, ಪಠ್ಯಪುಸ್ತಕ ವಿಭಾಗ ಸರ್ವ ಶಿಕ್ಷಣ ಅಭಿಯಾನ ಬಿಇಒ ಕಛೇರಿ, ರಾಷ್ಟ್ರೀಯ
ಮಾಧ್ಯಮಿಕ ಶಿಕ್ಷಣ ಅಭಿಯಾನ ಬಿ.ಆರ್.ಸಿ. ಪ್ರಸ್ತುತ ದ.ಕ ಜಿಲ್ಲಾ ಪಂಚಾಯತ್ ಈ ಸ್ಥಳಗಳಲ್ಲಿ ಸೇವೆ
ಸಲ್ಲಿಸಿರುತ್ತಾರೆ.

ಶಿಕ್ಷಣ ಇಲಾಖೆಯ ಸರ್ವಶಿಕ್ಷಣ ಅಭಿಯಾನದ ಹಲವಾರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿರುತ್ತಾರೆ. ಹಾಗೂ ಇವರ ಶಾಲೆಯ ಕಛೇರಿಯಲ್ಲಿ ಉತ್ತಮವಾಗಿ ಸಮಯಕ್ಕನುಗುಣವಾಗಿ ಕೆಲಸವನ್ನು ಮಾಡುತ್ತಿರುತ್ತಾರೆ. ಇವರು ಶಾಲೆಯಿಂದ ಹೊರಗುಳಿದ ಶಾಲೆಯನ್ನು ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವ , ಶೈಕ್ಷಣಿಕ ಜಾಗ್ರತಿ ಇತ್ಯಾದಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುತ್ತಾರೆ. ಇಲಾಖೆಯಿಂದ ಏರ್ಪಡಿಸಲ್ಪಟ್ಟ ಕಲಾ ಜಾಥಾ ಮತ್ತು ಕ್ರೀಡಾಕೂಟ ಹಾಗೂ ವಿಶೇಷ ಮಕ್ಕಳ ವೈದ್ಯಕೀಯ ತಪಾಸಣೆ ಮುಂತಾದ ಇಲಾಖೆ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ. ಹಾಗೂ
ಬೀದಿ ನಾಟಕಗಳ ಮೂಲಕ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರಿಗೆ ಅರಿವು
ಮೂಡಿಸಲೂ ಸಹ ಶ್ರಮಿಸಿರುತ್ತಾರೆ. ಸ್ವಚ್ಛತಾ ಅಭಿಯಾನದ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿರುತ್ತಾರೆ.
ಪ್ರಸ್ತುತ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕಲಾ ಮತ್ತು ಸಾಂಸ್ಕೃತಿಕ ಸಂಘ(ರಿ) ಬೆಂಗಳೂರು, ಜಿಲ್ಲಾ
ಅಧ್ಯಕ್ಷರು ದ.ಕ. ಮಂಗಳೂರು.

ಅನೇಕ ರೋಗಿಗಳಿಗೆ ತುರ್ತು ಸಂದರ್ಭದಲ್ಲಿ ರಕ್ತದಾನವನ್ನು ಮಾಡಿದ್ದು, ಅಷ್ಟೇ ಅಲ್ಲದೇ
ಅನೇಕ ರಕ್ತದಾನ ಶಿಬಿರವನ್ನು ಏರ್ಪಡಿಸಿ ಜನ ಮನ್ನಣೆ ಗಳಿಸಿರುತ್ತಾರೆ. ಮಹಿಳಾ ಮತ್ತು ಮಕ್ಕಳ
ಸಬಲೀಕರಣದ ನಿಟ್ಟಿನಲ್ಲಿ ಜಾಥಾ ಮತ್ತು ಬೀದಿ ನಾಟಕ ಆಯೋಜಿಸಿರುತ್ತಾರೆ. ದಕ್ಷಿಣ ಕನ್ನಡ ಜಿಲ್ಲಾ
ಮಟ್ಟದ ರಾಜ್ಯ ಸರ್ಕಾರ ನೌಕರರ ನಾಟಕ ಸ್ಪರ್ಧೆಯಲ್ಲಿ ಸತತವಾಗಿ ಐದು ಬಾರಿ ಆಯ್ಕೆಯಾಗಿ
ಶಿಕ್ಷಣ ಇಲಾಖೆಗೆ ಹೆಮ್ಮೆ ತಂದಿರುತ್ತಾರೆ. ನಂತರದ ದಿನಗಳಲ್ಲಿ ಇಲಾಖೆಯ ಕಾರ್ಯಕ್ರಮಗಳಲ್ಲಿ ಇನ್ನೂ ಸಕ್ರಿಯವಾಗಿ ಭಾಗವಹಿಸಿದ್ದು 2019-20ನೇ ಸಾಲಿನ ಕೋವಿಡ್-19ರ ತುರ್ತು ಪರಿಸ್ಥಿತಿಯಲ್ಲಿ ಪ್ಲಾಸ್ಮಾ ದಾನ ಮಾಡಿರುತ್ತಾರೆ. ದಿನಾಂಕ 20/11/2020ರಂದು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಜರುಗಿದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಚಂದನ ಸಾಹಿತ್ಯ ವೇದಿಕೆ ಸುಳ್ಯ ಇವರು ಚಂದನ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿರುತ್ತಾರೆ.

ಕೋವಿಡ್-19 ಸಂದರ್ಭದಲ್ಲಿ ಸಾರ್ವಜನಿಕರಿಗೆ ತಿಳುವಳಿಕೆ ನೀಡುವ ಕಾರ್ಯಕ್ರಮವನ್ನು ಆಯೋಜಿಸಿರುತ್ತಾರೆ. ಈ ಸಾಮಾಜಿಕ ಕಾರ್ಯಕ್ರಮದಿಂದ ವಿವಿಧ ಸಂಘ ಸಂಸ್ಥೆಗಳಿಂದ
ಹಾಗೂ ದೇಶದ ಅತ್ಯುತ್ತಮ ಸ್ಥಾನದಲ್ಲಿರುವ Indian Army ವತಿಯಿಂದ ದಿನಾಂಕ 15/02/2021
ರಂದು ಬೆಂಗಳೂರಿನಲ್ಲಿ ಜರುಗಿದ Army Day Celebrations 2020-2021 ರಲ್ಲಿ ಇವರನ್ನು
ಸನ್ಮಾನ ಮಾಡಿ ಗೌರವಿಸಿರುತ್ತಾರೆ. ಇತ್ತೀಚೆಗೆ ಬೆಳಗಾಂ ನಲ್ಲಿ ವಿಶ್ವ ನಾಟಕ ದಿನಾಚರಣೆ ಅಂಗವಾಗಿ ನಾಡಿನ
ಸಾಮಾಜಿಕ ಪತ್ರಿಕೆ ವತಿಯಿಂದ ಕಲಾರತ್ನ ಬಿರುದು ನೀಡಿ ಸನ್ಮಾನಿಸಲಾಗಿದೆ.
ಇವರು ಪತ್ನಿ ತಾರಾ ಯು ಶೆಟ್ಟಿ, ಮಕ್ಕಳಾದ ಮಹಾಲಕ್ಷ್ಮಿ ಯು ಶೆಟ್ಟಿ, ನಿಖಿಲ್ ಯು ಶೆಟ್ಟಿ ಇವರೊಂದಿಗೆ ಕುಟುಂಬ ಸಮೇತರಾಗಿ ಪಡೀಲ್ ಮಂಗಳೂರಿನಲ್ಲಿ ವಾಸ್ತವ್ಯವನ್ನು ಹೊಂದಿರುತ್ತಾರೆ.
