ಉಳ್ಳಾಲ: ಕಲ್ಲಾಪು ಮತ್ತು ಕೋಟೆಪುರದಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿದ್ದ 12 ಲೋಡ್ ಮರಳು ಮತ್ತು ಒಂದು ಪಿಕಪ್ ವಾಹನವನ್ನು ಉಳ್ಳಾಲ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಅಕ್ರಮವಾಗಿ ಮರಳು ದಾಸ್ತಾನು ಮತ್ತು ಸಾಗಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ಇಂದು ಬೆಳಗ್ಗೆ 4 ಗಂಟೆ ವೇಳೆಗೆ ದಾಳಿ ಕಾರ್ಯಾಚರಣೆ ನಡೆಸಿದರು.
ಕಲ್ಲಾಪುವಿನಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಪಿಕಪ್ ವಾಹನವನ್ನು ಹಾಗೂ ಕೋಟೆಪುರ ನೇತ್ರಾವತಿ ನದಿ ದಡದಲ್ಲಿ ದಾಸ್ತಾನು ಮಾಡಿದ್ದ 12 ಲೋಡ್ ಮರಳನ್ನು ವಶ ಪಡಿಸಿದ್ದಾರೆ.
ಪತ್ತೆಯಾದ ಮರಳು ಮತ್ತು ವಾಹನದ ಬಗ್ಗೆ ಪೊಲೀಸರು ಮುಂದಿನ ಕ್ರಮಕ್ಕಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ವರದಿ ಸಲ್ಲಿಸಿದ್ದಾರೆ.