Thursday, March 28, 2024
spot_img
More

    Latest Posts

    ಅಸಾನಿ ಚಂಡಮಾರುತದ ಅಬ್ಬರ : ವಿವಿದೆಡೆ ಹೈಅಲರ್ಟ್

    ಬಂಗಾಳ ಕೊಲ್ಲಿಯಲ್ಲಿ ಅಸಾನಿ ಚಂಡಮಾರುತ ಹಿನ್ನೆಲೆ ಹಲವೆಡೆ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಅಂಡಮಾನ್ ದ್ವೀಪಗಳ ಉದ್ದಕ್ಕೂ ಮತ್ತು ಮ್ಯಾನ್ಮಾರ್ ಮತ್ತು ದಕ್ಷಿಣ ಬಾಂಗ್ಲಾದೇಶ ಕರಾವಳಿಯ ಕಡೆಗೆ ಚಂಡಮಾರುತ ಚಲಿಸುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ. ಚಂಡಮಾರುತವು ಅಂಡಮಾನ್ ದ್ವೀಪಗಳಿಗೆ ಅಪ್ಪಳಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇಂದು (ಸೋಮವಾರ) ಗಾಳಿಯ ಅಬ್ಬರ ಹೆಚ್ಚಾಗಲಿದೆ. ಹಾಗಾಗಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಆಡಳಿತವು, ತಗ್ಗು ಪ್ರದೇಶಗಳಿಂದ ನಿವಾಸಿಗಳನ್ನು ಸ್ಥಳಾಂತರಿಸಲು ಯೋಜನೆಯನ್ನು ರೂಪಿಸಿದೆ. ಅಸಾನಿ ಚಂಡಮಾರುತದಿಂದಾಗಿ ದ್ವೀಪಸಮೂಹದಲ್ಲಿ ಭಾರೀ ಮಳೆಯಾಗಲಿದೆ ಮತ್ತು ಬಲವಾದ ಗಾಳಿ ಬೀಸಲಿದೆ. ಸೇನೆಯು ತನ್ನ ಹಡಗುಗಳು ಮತ್ತು ಪರಿಹಾರ ತಂಡಗಳನ್ನು ದ್ವೀಪ ಪ್ರದೇಶದ ತೀರಗಳಲ್ಲಿ ಇರಿಸಿದೆ. ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss