ಬೆಂಗಳೂರು: ಈಗಾಗಲೇ ರಾಜ್ಯ ಸರ್ಕಾರವು ವಸತಿ ಯೋಜನೆಯಡಿ ಫಲಾನುಭವಿಗಳ ಆಯ್ಕೆಗಾಗಿ ನಿಗದಿಪಡಿಸಿರುವಂತ ಆದಾಯದ ಮಿತಿ ಹೆಚ್ಚಳದ ಬಗ್ಗೆ ಮಾಹಿತಿ ನೀಡಿತ್ತು. ಇದೀಗ ಸಿಎಂ ಬಸವರಾಜ ಬೊಮ್ಮಾಯಿಯವರೇ ವಸತಿ ಯೋಜನೆಯಡಿ ಮನೆ ಹಂಚಿಕೆಗಾಗಿ ಫಲಾನುಭವಿಗಳ ಆಯ್ಕೆಯವೇಳೆ ಪರಿಗಣಿಸುತ್ತಿದ್ದಂತ ಆದಾಯದ ಮಿತಿಯನ್ನು ಹೆಚ್ಚಳ ಮಾಡಿದ್ದಾಗಿ ಘೋಷಣೆ ಮಾಡಿದ್ದಾರೆ.
ಈ ಮೂಲಕ ವಸತಿಯೋಜನೆಯಡಿ ಮನೆ ನಿರೀಕ್ಷೆಯಲ್ಲಿದ್ದಂತವರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದಂತ ಅವರು, ವಸತಿ ಯೋಜನೆಯಡಿ ಫಲಾನುಭವಿಗಳ ಆಯ್ಕೆಗಾಗಿ ನಿಗದಿಗೊಳಿಸಿದ್ದಂತ ಆದಾಯದ ಮಿತಿಯನ್ನು ಹೆಚ್ಚಳ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ವಸತಿಯೋಜನೆಗಾಗಿ ನಿಗದಿ ಪಡಿಸಿದ್ದಂತ ಆದಾಯದ ಮಿತಿಯನ್ನು 32 ಸಾವಿರದಿಂದ 1 ಲಕ್ಷದ 20 ಸಾವಿರಕ್ಕೆ ಏರಿಕೆ ಮಾಡಲಾಗುತ್ತಿದೆ. ನಗರ ಪ್ರದೇಶದಲ್ಲಿ ನಿಗದಿ ಪಡಿಸಿದ್ದಂತ 87 ಸಾವಿರದ ಮಿತಿಯನ್ನು 2 ಲಕ್ಷಕ್ಕೆ ಹೆಚ್ಚಳ ಮಾಡುತ್ತಿರೋದಾಗಿ ಘೋಷಿಸಿದ್ದಾರೆ.