Thursday, April 25, 2024
spot_img
More

    Latest Posts

    ಸಾರ್ವಜನಿಕರೇ ಗಮನಿಸಿ: ರಾಜ್ಯಾಧ್ಯಂತ ಏ.1ರಿಂದ ಮೂರು ದಿನ ‘ಸರ್ಕಾರಿ ಆಸ್ಪತ್ರೆ’ಗಳಲ್ಲಿ ‘ಆರೋಗ್ಯ ಸೇವೆ’ಯಲ್ಲಿ ವ್ಯತ್ಯಯ

    ಬೆಂಗಳೂರು: ರಾಜ್ಯಾಧ್ಯಂತ 30 ಸಾವಿರಕ್ಕೂ ಹೆಚ್ಚು ನೌಕರರು ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ, ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರನ್ನು ಏಪ್ರಿಲ್ 1ರಂದು ಕರ್ತವ್ಯದಿಂದ ಬಿಡುಗಡೆ ಮಾಡಿ, ಮತ್ತೆ ಏಪ್ರಿಲ್ 2ರಿಂದ ಸೇವೆಗೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ.

    ಈ ಹಿನ್ನಲೆಯಲ್ಲಿ ಏಪ್ರಿಲ್ 1ರಂದು ಗುತ್ತಿಗೆ ಹೊರಗುತ್ತಿಗೆ ನೌಕರರ ಸೇವೆ ಸರ್ಕಾರಿ ಆಸ್ಪತ್ರೆಗಳಲ್ಲಿ ರಾಜ್ಯಾಧ್ಯಂತ ಲಭ್ಯವಾಗೋದಿಲ್ಲ. ಅಲ್ಲದೇ ಏಪ್ರಿಲ್ 2ರಂದು ಯುಗಾಧಿ, ಏಪ್ರಿಲ್ ಮೂರಂದು ಶನಿವಾರ ಒಂದು ದಿನ ಆರೋಗ್ಯ ಸೇವೆ ಲಭ್ಯವಾದ್ರೇ, ಏಪ್ರಿಲ್ 4ರಂದು ಭಾನುವಾರವಾದ ಕಾರಣ, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ( Karnataka Government Hospital ) ಆರೋಗ್ಯ ಸೇವೆಯಲ್ಲಿ ( Health Service ) 3 ದಿನ ವ್ಯತ್ಯಯ ಉಂಟಾಗಲಿದೆ.

    ರಾಜ್ಯದಲ್ಲಿ ಗುತ್ತಿಗೆ, ಹೊರ ಗುತ್ತಿಗೆ ಆಧಾರದ ನೌಕರರಿಗೆ ಸೇವಾ ಭದ್ರತೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸೋ ನಿಟ್ಟಿನಲ್ಲಿ ಶ್ರೀನಿವಾಸಾಚಾರಿಯವರ ಸಮಿತಿಯು, ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿತ್ತು. ಈ ವರದಿ ಸಲ್ಲಿಕೆಯಾಗಿ ವರ್ಷಗಳೇ ಕಳೆದು ಬಂದಿದ್ದರು, ವರದಿಯಲ್ಲಿನ ಶಿಫಾರಸ್ಸುಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಮತ್ತೆ ಪ್ರತಿಭಟನೆಗೂ ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರು ಕರೆ ನೀಡಿದ್ದರು.

    ಆದ್ರೇ.. ವಿಧಾನ ಪರಿಷತ್ ನಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್, ಈ ಸಂಬಂಧ ಮಾತನಾಡಿ ಶ್ರೀನಿವಾಸಾಚಾರಿ ವರದಿಯ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳೋದಾಗಿಯೂ ತಿಳಿಸಿದ್ದರು. ಹೀಗಾಗಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

    ಈ ನಡುವೆ ಪ್ರತಿವರ್ಷದಂತೆ ಏಪ್ರಿಲ್ 1ರಂದು ಗುತ್ತಿಗೆ, ಹೊರಗುತ್ತಿಗೆ ನೌಕರರನ್ನು ಆರೋಗ್ಯ ಇಲಾಖೆಯು ಸೇವೆಯಿಂದ ಬಿಡುಗಡೆ ಮಾಡಿ, ಮತ್ತೆ ಏಪ್ರಿಲ್ 2ರಂದು ಸೇವೆಗೆ ಮರು ಸೇರ್ಪಡೆಗೊಳಿಸುವ ಕ್ರಮ ನಡೆಯಲಿದೆ. ಹೀಗಾಗಿ ಏಪ್ರಿಲ್ 1ರಂದು ರಾಜ್ಯಾಧ್ಯಂತ 30 ಸಾವಿರಕ್ಕೂ ಹೆಚ್ಚು ಗುತ್ತಿಗೆ ನೌಕರರು ಸೇವೆಗೆ ಲಭ್ಯವಾಗೋದಿಲ್ಲ. ಜೊತೆಗೆ ಏಪ್ರಿಲ್ 2ರಂದು ಯುಗಾದಿ ಹಬ್ಬದ ರಜೆ ಇರೋ ಕಾರಣ, ಅಂದು ಸರ್ಕಾರಿ ರಜೆಯಿಂದಾಗಿ ಕೆಲಸಕ್ಕೆ ಹಾಜರಾಗೋದು ಡೌಟ್, ಈ ನಡುವೆ ಶನಿವಾರದಂದು ಒಂದು ದಿನ ಬಿಟ್ರೇ, ಮತ್ತೆ ಏಪ್ರಿಲ್ 4ರಂದು ಭಾನುವಾರ ಎಂದಿನಂತೆ ರಜೆ. ಹೀಗಾಗಿ ರಾಜ್ಯಾಧ್ಯಂತ ಏಪ್ರಿಲ್ 1ರಿಂದ ನಾಲ್ಕು ದಿನ ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಉಂಟಾಗೋ ಸಾಧ್ಯತೆ ಇದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss