Friday, March 29, 2024
spot_img
More

    Latest Posts

    ಕರ್ನಾಟಕದ 6 ಪೊಲೀಸ್ ಅಧಿಕಾರಿಗಳು ಸೇರಿ 151 ಮಂದಿಗೆ ಕೇಂದ್ರ ಗೃಹ ಸಚಿವರ ಪದಕ

    ನವದೆಹಲಿ- ಕರ್ನಾಟಕದ ಆರು ಮಂದಿ ಪೊಲೀಸ್ ಅಧಿಕಾರಿಗಳೂ ಸೇರಿದಂತೆ ದೇಶದ ಒಟ್ಟು 151 ಮಂದಿಗೆ ಕೇಂದ್ರ ಗೃಹ ಸಚಿವರ ಪ್ರಶಸ್ತಿ ಲಭ್ಯವಾಗಿದೆ. ಅಪರಾಧ ಪ್ರಕರಣಗಳ ಉತ್ತಮ ತನಿಖೆಗಾಗಿ ಕರ್ನಾಟಕದ ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿ ಲಕ್ಷ್ಮೀ ಗಣೇಶ್ ಕೆ, ಡಿವೈಎಸ್‍ಪಿಗಳಾದ ವೆಂಕಟಪ್ಪ ನಾಯಕ, ಮೈಸೂರು ರಾಜೇಂದ್ರ ಗೌತಮ್, ಶಂಕರ್ ಕಾಳಪ್ಪ ಮಾರಿಹಾಳ್, ಶಂಕರಗೌಡ ವೀರಣ್ಣಗೌಡ ಪಾಟೀಲ್, ಸರ್ಕಲ್ ಇನ್ಸ್‍ಪೆಕ್ಟರ್ ಗುರುಬಸವರಾಜ ಎಚ್. ಹಿರೇಗೌಡರ್ ಅವರುಗಳಿಗೆ ಕೇಂದ್ರ ಗೃಹ ಸಚಿವರ ಶ್ರೇಷ್ಠ ತನಿಖಾ ಪದಕ ಘೋಷಿಸಲಾಗಿದೆ.

    ಇದಲ್ಲದೆ ಸಿಬಿಐನ 15, ಮಹಾರಾಷ್ಟ್ರದ 11, ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶದ ತಲಾ 10, ಕೇರಳ, ರಾಜಸ್ಥಾನ, ಪಶ್ಚಿಮಬಂಗಾಳದ ತಲಾ 8 ಮಂದಿಗೆ ಪ್ರಶಸ್ತಿ ಘೋಷಿಸಲಾಗಿದೆ. ಇದರಲ್ಲಿ 28 ಮಂದಿ ಮಹಿಳಾ ಅಧಿಕಾರಿಗಳೂ ಸೇರಿದ್ದಾರೆ.

    ಆಂಧ್ರಪ್ರದೇಶ, ಅಸ್ಸೊಂ, ಬಿಹಾರ, ಛತ್ತೀಸ್‍ಗಢ, ಗುಜರಾತ್, ಹರಿಯಾಣ, ಮಿಜೋರಾಂ, ಒಡಿಸ್ಸಾ, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ದೆಹಲಿಯ ಪೊಲೀಸ್ ಅಧಿಕಾರಿಗಳಿಗೆ ಪ್ರಶಸ್ತಿ ಘೋಷಿಸಲಾಗಿದೆ. ಎನ್‍ಐಎ ಮತ್ತು ಎನ್‍ಸಿಬಿಯ ತಲಾ 5 ಮಂದಿ ಅಧಿಕಾರಿಗಳಿಗೆ ಪ್ರಶಸ್ತಿ ಲಭ್ಯವಾಗಿದೆ.

    ಕೇಂದ್ರ ಗಹ ಸಚಿವಾಲಯ ಆಯಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಸ್ಥರು ಮತ್ತು ವಿವಿಧ ಘಟಕಗಳ ಮಹಾನಿರ್ದೇಶಕರಿಂದ ವರದಿ ಪಡೆದು ಪರಿಶೀಲನೆ ನಡೆಸಿದ ಬಳಿಕ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಪ್ರಶಸ್ತಿ ಆಯ್ಕೆಯಾಗಿ ಉತ್ಕøಷ್ಟ ಮಾನದಂಡಗಳ ಜತೆಗೆ ನಿರಂತರ ಪ್ರಕ್ರಿಯೆಗಳನ್ನು ಅನುಸರಿಸಲಾಗಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss