ಉಡುಪಿ: ಉಡುಪಿಯ ಇಂದ್ರಾಳಿ ರೈಲು ನಿಲ್ದಾಣದ ಹಳಿಯ ಬಳಿ ಮಧ್ಯ ವಯಸ್ಕ ಗಂಡಸಿನ ಮೃತ ದೇಹ ಸೋಮವಾರ ಪತ್ತೆಯಾಗಿದೆ. ಚಲಿಸುತ್ತಿರುವ ರೈಲು ಡಿಕ್ಕಿ ಹೊಡೆದು ಇವರು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
ಮೃತ ವ್ಯಕ್ತಿಯನ್ನು ಬಾರ್ಕೂರು ಬೆಣ್ಣೆಕುದ್ರುವಿನ ಸುರೇಶ್ (43 ) ಎಂದು ಗುರುತಿಸಲಾಗಿದೆ. ಇವರು ಫಿಶಿಂಗ್ ಬೋಟ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ಶವವನ್ನು ವೈದ್ಯಕೀಯ ಪರೀಕ್ಷೆಗೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು, ಇಲಾಖೆಗೆ ಸಹಕಾರ ನೀಡಿದರು. ಮಣಿಪಾಲ ಠಾಣಾಧಿಕಾರಿ ರಾಜಶೇಖರ ಹೊಂದಾಳಿ ಘಟನಾ ಸ್ಥಳದಲ್ಲಿದ್ದು ಕಾನೂನು ಪ್ರಕ್ರಿಯೆ ನಡೆಸಿದರು.