ಉಪ್ಪಿನಂಗಡಿ: ಯುಎಇ ಶಾರ್ಜಾದ ಆಸ್ಪತ್ರೆಗೆ ದಾಖಲಾಗಿದ್ದ ಬೆಳ್ತಂಗಡಿ ತಾಲೂಕಿನ ಬಂದಾರಿನ ಯುವಕ ಇಕ್ಬಾಲ್ ಚಿಕಿತ್ಸೆ ಫಲಕಾರಿಯಾದೆ ಮೃತಪಟ್ಟಿದ್ದು, ಇವರ ಮೃತದೇಹ ಜೂ.7ರಂದು ಹುಟ್ಟೂರು ತಲುಪಲಿದೆ
ಸುಮಾರು ಮೂರು ವರ್ಷಗಳ ಹಿಂದೆ ಉದ್ಯೋಗಕ್ಕೆಂದು ವಿದೇಶಕ್ಕೆ ತೆರಳಿದ್ದ ಇವರು ಒಂದು ತಿಂಗಳ ಹಿಂದೆ ಅನಾರೋಗ್ಯಕ್ಕೆ ಈಡಾಗಿ ಶಸ್ತ್ರ ಚಿಕಿತ್ಸೆಗೊಳಗಾಗಿದ್ದರು. ಬಳಿಕ ಕೆಲ ದಿನ ಕೋಮ ಸ್ಥಿತಿಯಲ್ಲಿದ್ದರು. ಶನಿವಾರ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
