ಕುವೈಟ್: ಉಡುಪಿ ಮೂಲದ ವ್ಯಕ್ತಿ ಕುವೈಟ್ ನಲ್ಲಿ ಹೃದಯಾಘಾತದಿಂದ ಮೃತಪಟ್ಟ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಪಾಂಡೇಶ್ವರ ಸಾಸ್ತಾನ ಮೂಲದ ಜಾಕ್ಸನ್ ಒಲಿವೇರಾ (50) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅಕ್ಟೋಬರ್ 10 ರಂದು ಅವರು ಎಂದಿನಂತೆ ಕೆಲಸದಿಂದ ಹಿಂದಿರುಗಿದ ನಂತರ ಕುವೈಟ್ ನಲ್ಲಿನ ತಮ್ಮ ಕೋಣೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.ಈ ವೇಳೆ ಇದ್ದಕ್ಕಿದ್ದಂತೆ ಕುಸಿದುಬಿದ್ದು ಮೃತಪಟ್ಟಿದ್ದಾರೆ.
ಜಾಕ್ಸನ್ ಅವರ ಮೃತದೇಹ ಇದೀಗ ಆಸ್ಪತ್ರೆಯಲ್ಲಿದೆ ಎಂದು ತಿಳಿದು ಬಂದಿದೆ.ಜಾಕ್ಸನ್ ಪತ್ನಿ ಡಯಾನಾ, ಮಕ್ಕಳಾದ ಜೋಶುವಾ ಮತ್ತು ದೀನ್ ಮತ್ತು ತಾಯಿಯನ್ನು ಅಗಲಿದ್ದಾರೆ.