Monday, November 29, 2021

ಉಡುಪಿ: ನಕಲಿ ಮದ್ಯ ಸರಬರಾಜು ಆರೋಪ; ಗ್ರಾಹಕರು- ಬಾರ್ ಸಿಬ್ಬಂದಿ ಮಧ್ಯೆ ಗಲಾಟೆ!

ಉಡುಪಿ: ಉಡುಪಿ ನಗರದ ಪ್ರಮುಖ ಬಾರ್ ಆ್ಯಂಡ್ ರೆಸ್ಟೋರೆಂಟ್ ಒಂದರಲ್ಲಿ ಎರಡು ದಿನಗಳ ಹಿಂದೆ ನಡೆದ ನಕಲಿ ಮದ್ಯ ಸರಬರಾಜು ವಿಚಾರವಾಗಿ ಗ್ರಾಹಕರು ಮತ್ತು ಬಾರ್ ಸಿಬ್ಬಂದಿ ನಡುವೆ ನಡೆದ...
More

  Latest Posts

  ಮುಲ್ಕಿ: ಠಾಣೆಯಿಂದ ಮತ್ತೊಬ್ಬ ವಿಚಾರಣಾಧೀನ ಕೈದಿ ಪರಾರಿ!

  ಮುಲ್ಕಿ: ಮುಲ್ಕಿ ಪೊಲೀಸ್ ಠಾಣೆಯಿಂದ ಮತ್ತೊಬ್ಬ ವಿಚಾರಣಾಧೀನ ಕೈದಿ ನಿನ್ನೆ ಸಂಜೆ ಪರಾರಿಯಾಗಿದ್ದಾನೆ. ದಾವಣಗೆರೆ ನಿವಾಸಿಯಾದ ವಿಚಾರಣಾಧೀನ ಕೈದಿಯನ್ನು ಕಳ್ಳತನದ ಆರೋಪದ ಮೇಲೆ ಮುಲ್ಕಿ ಪೊಲೀಸರು...

  ಸಾರ್ವಜನಿಕ ಬಸ್ಸು ತಂಗುದಾಣವನ್ನು ಅಡುಗೆ ಮನೆ ಮಾಡಿದ ಕೂಲಿ ಕಾರ್ಮಿಕರು……! ಕಣ್ಣು ಮುಚ್ಚಿ ಕುಳಿತ ಆಡಳಿತ ಅಧಿಕಾರಿಗಳು

  ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಂಗಲ್ಪಾಡಿ ದೇವಸ್ಥಾನದ ಎದುರುಗಡೆ ಇರುವ ಬಸ್ ತಂಗುದಾಣದಲ್ಲಿ ಕೆಲ ದಿನಗಳಿಂದ ಯಾವುದೊ ಕೂಲಿ ಕಾರ್ಮಿಕರು ಮನೆಯಂತೆ ಸಾರ್ವಜನಿಕ ಬಸ್ಸು ತಂಗುದಾಣದಲ್ಲಿ ಅಡುಗೆ ಮಾಡಿ ವಾಸಿಸುತ್ತಿದ್ದಾರೆ.

  ಬೆಂಗಳೂರಿನ ಕೆ.ಆರ್‌. ಮಾರ್ಕೆಟ್‌ನಲ್ಲಿ ಅಗ್ನಿ ಅವಗಢ; ಅಗ್ನಿಶಾಮಕ ದಳ ಆಗಮನ

  ಬೆಂಗಳೂರು: ನಗರದ ಕೆ.ಆರ್.‌ ಮಾರುಕಟ್ಟೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಮಾರುಕಟ್ಟೆಯ ಕೊರಿಯರ್‌ ಗೋಡೌನ್‌ನಿಂದ ದಟ್ಟ ಹೊಗೆ ಹರಡಿದೆ. ಕೆ.ಆರ್‌. ಮಾರುಕಟ್ಟೆಯ ಗೋಡೌನ್‌ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ....

  ಮಂಗಳೂರು: ನಿಯಂತ್ರಣ ತಪ್ಪಿ ಸ್ಕೂಟರ್‌ ಪಲ್ಟಿ – ಸವಾರ ಗಂಭೀರ ಗಾಯ

  ಮಂಗಳೂರು: ಅತಿ ವೇಗವಾಗಿ ಸ್ಕೂಟರ್‌ ಚಲಾಯಿಸಿಕೊಂಡು ಹೋಗುತ್ತಿದ್ದ ಸಂದರ್ಭ ಸ್ಕೂಟರ್‌‌ ಅನ್ನು ನಿಯಂತ್ರಿಸಲಾಗದೇ ಫುಟ್‌ಪಾತ್‌ ಅಂಚಿಗೆ ಢಿಕ್ಕಿ ಹೊಡೆದು ಬಿದ್ದ ಪರಿಣಾಮ ಸವಾರ ಗಂಭೀರ ಗಾಯಗೊಂಡ ಘಟನೆ ಬೆಂದೂರ್‌ವೆಲ್‌ನಲ್ಲಿ ನಡೆದಿದೆ.

  ಹಾವೇರಿ: ಸಾವಿನಲ್ಲೂ ಸಾರ್ಥಕತೆ ಮೆರೆದ ಯುವತಿ!

  ರಟ್ಟಿಹಳ್ಳಿ(ಸೆ.15):  20 ವರ್ಷದ ಯುವತಿಯೊಬ್ಬಳು ಹಲವರ ಬದುಕಿಗೆ ಬೆಳಕಾಗುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಘಟನೆ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕವನಾ ಮಳ್ಳಯ್ಯ ಹಿರೇಮಠ (20) ಇತರರಿಗೆ ಮಾದರಿಯಾದ ಯುವತಿ.

  ಹಳ್ಳೂರ ಗ್ರಾಮದ ಕವನ ಹಿರೇಮಠ ಶಿಕಾರಿಪುರದ ಗಾಮೆಂಟ್ಸ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಸೆ. 9ರಂದು ಹೊನ್ನಾಳಿ ತಾಲೂಕು ಸೊರಟೂರ ಗ್ರಾಮದ ಬಳಿ ಓಮಿನಿ-ಚಕ್ಕಡಿಗಾಡಿ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಕವನಾ ಗಂಭೀರವಾಗಿ ಗಾಯಗೊಂಡಿದ್ದರು.

  ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಕವನರನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಕೋಮಾಗೆ ತಲುಪಿದ್ದರು. ಅವರ ಮೆದುಳು ನಿಷ್ಕ್ರೀಯಗೊಂಡಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮಗಳಂತೂ ಇನ್ನು ಬದುಕುವುದಿಲ್ಲ, ಅವಳ ಅಂಗಾಂಗವಾದರೂ ಇತರರಿಗೆ ಬದುಕು ನೀಡಲಿ ಎಂದು ನಿರ್ಧರಿಸಿದ ಆಕೆಯ ಕುಟುಂಬಸ್ಥರು ವೈದ್ಯರೊಂದಿಗೆ ಚರ್ಚಿಸಿದರು. 

  ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಮೃತಳ ಕುಟುಂಬಸ್ಥರು ಕಿಡ್ನಿ, ಹೃದಯ, ಲಿವರ್‌, ಕಣ್ಣು, ಚರ್ಮ ದಾನ ಮಾಡಿದರು. ತಕ್ಷಣವೇ ಅಂಗಾಂಗಗಳನ್ನು ಬೇರೆ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಇದರಿಂದ ನಾಲ್ವರ ಬಾಳಿಗೆ ಬೆಳಕು ನೀಡಿದಂತಾಗಿದೆ. ಬಾಳಿ ಬೆಳಗಬೇಕಿದ್ದ ಮಗಳನ್ನು ಕಳೆದುಕೊಂಡಿರುವ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

  Latest Posts

  ಮುಲ್ಕಿ: ಠಾಣೆಯಿಂದ ಮತ್ತೊಬ್ಬ ವಿಚಾರಣಾಧೀನ ಕೈದಿ ಪರಾರಿ!

  ಮುಲ್ಕಿ: ಮುಲ್ಕಿ ಪೊಲೀಸ್ ಠಾಣೆಯಿಂದ ಮತ್ತೊಬ್ಬ ವಿಚಾರಣಾಧೀನ ಕೈದಿ ನಿನ್ನೆ ಸಂಜೆ ಪರಾರಿಯಾಗಿದ್ದಾನೆ. ದಾವಣಗೆರೆ ನಿವಾಸಿಯಾದ ವಿಚಾರಣಾಧೀನ ಕೈದಿಯನ್ನು ಕಳ್ಳತನದ ಆರೋಪದ ಮೇಲೆ ಮುಲ್ಕಿ ಪೊಲೀಸರು...

  ಸಾರ್ವಜನಿಕ ಬಸ್ಸು ತಂಗುದಾಣವನ್ನು ಅಡುಗೆ ಮನೆ ಮಾಡಿದ ಕೂಲಿ ಕಾರ್ಮಿಕರು……! ಕಣ್ಣು ಮುಚ್ಚಿ ಕುಳಿತ ಆಡಳಿತ ಅಧಿಕಾರಿಗಳು

  ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಂಗಲ್ಪಾಡಿ ದೇವಸ್ಥಾನದ ಎದುರುಗಡೆ ಇರುವ ಬಸ್ ತಂಗುದಾಣದಲ್ಲಿ ಕೆಲ ದಿನಗಳಿಂದ ಯಾವುದೊ ಕೂಲಿ ಕಾರ್ಮಿಕರು ಮನೆಯಂತೆ ಸಾರ್ವಜನಿಕ ಬಸ್ಸು ತಂಗುದಾಣದಲ್ಲಿ ಅಡುಗೆ ಮಾಡಿ ವಾಸಿಸುತ್ತಿದ್ದಾರೆ.

  ಬೆಂಗಳೂರಿನ ಕೆ.ಆರ್‌. ಮಾರ್ಕೆಟ್‌ನಲ್ಲಿ ಅಗ್ನಿ ಅವಗಢ; ಅಗ್ನಿಶಾಮಕ ದಳ ಆಗಮನ

  ಬೆಂಗಳೂರು: ನಗರದ ಕೆ.ಆರ್.‌ ಮಾರುಕಟ್ಟೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಮಾರುಕಟ್ಟೆಯ ಕೊರಿಯರ್‌ ಗೋಡೌನ್‌ನಿಂದ ದಟ್ಟ ಹೊಗೆ ಹರಡಿದೆ. ಕೆ.ಆರ್‌. ಮಾರುಕಟ್ಟೆಯ ಗೋಡೌನ್‌ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ....

  ಮಂಗಳೂರು: ನಿಯಂತ್ರಣ ತಪ್ಪಿ ಸ್ಕೂಟರ್‌ ಪಲ್ಟಿ – ಸವಾರ ಗಂಭೀರ ಗಾಯ

  ಮಂಗಳೂರು: ಅತಿ ವೇಗವಾಗಿ ಸ್ಕೂಟರ್‌ ಚಲಾಯಿಸಿಕೊಂಡು ಹೋಗುತ್ತಿದ್ದ ಸಂದರ್ಭ ಸ್ಕೂಟರ್‌‌ ಅನ್ನು ನಿಯಂತ್ರಿಸಲಾಗದೇ ಫುಟ್‌ಪಾತ್‌ ಅಂಚಿಗೆ ಢಿಕ್ಕಿ ಹೊಡೆದು ಬಿದ್ದ ಪರಿಣಾಮ ಸವಾರ ಗಂಭೀರ ಗಾಯಗೊಂಡ ಘಟನೆ ಬೆಂದೂರ್‌ವೆಲ್‌ನಲ್ಲಿ ನಡೆದಿದೆ.

  Don't Miss

  SSLC ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್: ಶೇ. 20 ರಷ್ಟು ಪಠ್ಯ ಕಡಿತಕ್ಕೆ ಮುಂದಾದ ಶಿಕ್ಷಣ ಇಲಾಖೆ

  ಬೆಂಗಳೂರು (ನ. 26): ಎಸ್‌ಎಸ್‌ಎಲ್‌ಸಿ (SSLC Students ) ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್! ಶೇ. 20 ರಷ್ಟು ಪಠ್ಯ ಕಡಿತಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ.  ಕೊರೋನಾದಿಂದ ಪ್ರಸಕ್ತ...

  BIG BREAKING: ದಕ್ಷಿಣ ಕನ್ನಡ ಸರಕಾರಿ ವೈದ್ಯನ ರಾಸಲೀಲೆ; ಕಚೇರಿಯಲ್ಲಿ ಮಹಿಳಾ ಸಿಬ್ಬಂದಿಗಳ ಜೊತೆ ರಂಗಿನಾಟ!

  ಮಂಗಳೂರು: ಗುತ್ತಿಗೆ ಆಧಾರದಲ್ಲಿರುವ ಯುವತಿಯರ ಜೊತೆ ಸರಸ ಸಲ್ಲಾಪವಾಡುತ್ತಿದ್ದ ಮಂಗಳೂರಿನ ಪ್ರತಿಷ್ಠಿತ ವೆನ್ಲಾಕ್ ಆಸ್ಪತ್ರೆಯಲ್ಲಿ ಕುಷ್ಠರೋಗ ವಿಭಾಗದ ಆರೋಗ್ಯಾಧಿಕಾರಿ ಆಗಿರುವ ಡಾ.ರತ್ನಾಕರ್ ಅವರ ಕಾಮಪುರಾಣ ಬಯಲಾಗಿದೆ. ಈ ದೃಶ್ಯಗಳು ಸಾಮಾಜಿಕ...

  ಮಂಗಳೂರು: ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ; ಆರೋಪಿಗಳು 4 ದಿನ ಪೊಲೀಸ್ ಕಸ್ಟಡಿಗೆ

  ಮಂಗಳೂರು: ವಾಮಂಜೂರು ಉಳಾಯಿಬೆಟ್ಟು ಪರಾರಿಯ ಟೈಲ್ಸ್ ಫ್ಯಾಕ್ಟರಿಯಲ್ಲಿ 8 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ ಪ್ರಕರಣದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯ...

  ಮಂಗಳೂರು: ಇಂದಿನಿಂದ ‘ಬೃಹತ್ ಕೋವಿಡ್ ವಾಕ್ಸಿನ್ ಮೇಳ’ ಆರಂಭ

  ಮಂಗಳೂರು: ನಗರದಲ್ಲಿ ಕೊವೀಡ್ ರೋಗ ನಿರೋಧಕ ಲಸಿಕೆ ಪ್ರಗತಿ ಹೆಚ್ಚಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮತ್ತು ಮಹಾನಗರ ಪಾಲಿಕೆಯಲ್ಲಿ ಬೃಹತ್ ಕೋವಿಡ್ ಲಸಿಕಾ ಶಿಬಿರ ಆರಂಭವಾಗಲಿದೆ.

  ಇಂಗ್ಲಿಷ್ ಕಾಲುವೆಯಲ್ಲಿ ಅವಘಡ: ಬೋಟ್ ಮಗುಚಿ 31 ವಲಸಿಗರು ಸಾವು

  ಪ್ಯಾರಿಸ್: ಕಡಿದಾದ ತೀರಾ ಅಪಾಯಕಾರಿ ಇಂಗ್ಲಿಷ್‌ ಕಾಲುವೆಯಲ್ಲಿ ವಲಸಿಗರ ಬೋಟ್ ಮಗುಚಿ ಸುಮಾರು 31ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಬ್ರಿಟನ್‌ಗೆ ತೆರಳುತ್ತಿದ್ದ  ಬೋಟ್ ನಲ್ಲಿ 34 ಮಂದಿ...