ರಾಯಚೂರು : ಮಹಿಳಾ ಪಿಎಸ್‌ಐ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಡೆತ್ ನೋಟ್ ಬರೆದಿಟ್ಟು ಯುವಕ ನಾಪತ್ತೆಯಾದ ಘಟನೆ ರಾಯಚೂರಿನಲ್ಲಿ ನಡೆದಿದೆ.
ರಾಯಚೂರಿನ ಸಿರಿವಾರ ಠಾಣೆ ಮಹಿಳಾ ಪಿಎಸ್‌ಐ ಗೀತಾಂಜಲಿ ಶಿಂಧೆ ನನ್ನನ್ನು ಅನಗತ್ಯವಾಗಿ ಮೂರು ತಿಂಗಳಿನಿಂದ ಠಾಣೆಗೆ ಕರೆಸಿಕೊಂಡು ವಿಚಾರಣೆ ನೆಪದಲ್ಲಿ ಕಿರುಕುಳ ನೀಡುತ್ತಿದ್ದಾರೆ, ಆದ್ದರಿಂದ ಪಿಎಸ್ ಐ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ತಾಯಣ್ಣ ಎಂಬಾತ ಡೆತ್ ನೋಟ್ ಬರೆದಿಟ್ಟು ಕಾಣೆಯಾಗಿದ್ದಾನೆ.
ಸಂಬಂಧಿಕರೊಬ್ಬರ ಜಮೀನಿನ ಭತ್ತ ಕಟಾವು ಮಾಡಿದ ಆರೋಪ ಈತನ ಮೇಲಿದೆ ಎನ್ನಲಾಗಿದ್ದು, ಈ ವಿಚಾರಕ್ಕೆ ಪದೇ ಪದೇ ಠಾಣೆಗೆ ಕರೆಸಿ ಪಿಎಸ್‌ಐ ಕಿರುಕುಳ ನಿಡಿದ್ದಾರೆ ಎಂದು ಆರೋಪಿಸಿದ್ದಾನೆ. ಘಟನೆ ಹಿನ್ನೆಲೆ ಪೋಷಕರು ಗಾಬರಿಗೊಂಡಿದ್ದು, ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.