ಮಂಗಳೂರು; ಉಳ್ಳಾಲದಲ್ಲಿ ವರ ನಾಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ವರ ಪತ್ತೆಯಾಗದ ಹಿನ್ನೆಲೆ ಇಂದು ನಿಗದಿಯಾಗಿದ್ದ ವಿವಾಹ ಸಮಾರಂಭವನ್ನು ರದ್ದುಗೊಳಿಸಲಾಗಿದೆ. ತೌಡುಗೋಳಿ- ವರ್ಕಾಡಿ ದೇವಂದ ಪಡ್ಪುವಿನ ಉದ್ಯಮಿಯೊಬ್ಬರ ಪುತ್ರ ಕಿಶನ್ ಶೆಟ್ಟಿ (28) ವಿವಾಹ ಇಂದು ಉಪ್ಪಳ ಮೂಲದ ಯುವತಿಯೊಂದಿಗೆ ನಿಗದಿಯಾಗಿತ್ತು. ಮಂಗಳವಾರ ಸಂಜೆ ಮೆಹಂದಿ ಕಾರ್ಯಕ್ರಮವಿತ್ತು. ಮಧ್ಯಾಹ್ನ ಹಣ್ಣು ತರಲೆಂದು ಸ್ಕೂಟರ್ ನಲ್ಲಿ ಹೋದ ವರ ಕಿಶನ್ ನಾಪತ್ತೆಯಾಗಿದ್ದಾರೆ. ಕಿಶನ್ ಯುವತಿಯೊಬ್ಬಳನ್ನು ಕಾಲೇಜು ದಿನಗಳಿಂದಲೇ ಪ್ರೀತಿಸುತ್ತಿದ್ದು, ಇದೇ ಕಾರಣಕ್ಕೆ ನಾಪತ್ತೆಯಾಗಿರುವ ಸಾಧ್ಯತೆಯ ಬಗ್ಗೆ ಪೊಲೀಸ್ ಮೂಲಗಳು ತಿಳಿಸಿವೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ಕಿಶನ್‌ನ ಹುಡುಕಾಟ ಮುಂದುವರಿದಿದೆ.
©2021 Tulunada Surya | Developed by CuriousLabs