ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ರಸ್ತೆ ಪಕ್ಕದಲ್ಲಿ ಇಂದು ಮುಂಜಾವ ಐದು ಗ್ರೆನೇಡ್ ಪತ್ತೆಯಾಗಿದೆ!
ದಾರಿಯಲ್ಲಿಯೇ ಈ ‘ಗ್ರೆನೇಡ್ ‘ ಬಿದ್ದಿರುವುದನ್ನು ಗಮನಿಸಿದ ಇಳಂತಿಲ ಗ್ರಾಮದ ಜಯಕುಮಾರ್ ಎಂಬವರು ಈ ಗ್ರೆನೇಡ್ ಗಳನ್ನು ತನ್ನ ಮನೆಯ ಅಂಗಳದ ಬಳಿ ಇಟ್ಟು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಜಯಕುಮಾರ್ ಅವರು ಭೂ ಸೇನಾ ರೆಜಿಮೆಂಟ್ ನಲ್ಲಿ ಎಸ್.ಸಿ.ಒ. ಆಗಿ ನಿವೃತ್ತರಾಗಿದ್ದು, ಪತ್ತೆಯಾದ ವಸ್ತುಗಳು ಗ್ರೆನೇಡ್ ಎನ್ನುವುದನ್ನು ಸುಲಭವಾಗಿ ಗುರುತಿಸಿದ್ದಾರೆ. ಉಪ್ಪಿನಂಗಡಿ ಪೊಲೀಸರು ಗ್ರೆನೇಡ್ ಗಳನ್ನು ವಶಕ್ಕೆ ಪಡೆದಿದ್ದು,
ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.