ಪುಂಜಾಲಕಟ್ಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಟ್ರಸ್ಟ್ ರಿ. ಗುರುವಾಯನಕೆರೆ ಯೋಜನಾ ಕಚೇರಿಯ ಮಡಂತ್ಯಾರು ವಲಯದ ಬಸವನಗುಡಿಯ ಸಾಲ್ಯಾನ್ ಕಂಪೌಂಡಿನಲ್ಲಿ ಹೊಸದಾಗಿ C S C ಕೇಂದ್ರ ಮತ್ತು ಗ್ರಾಮೀಣ ಸೇವಾ ಕೇಂದ್ರದ ಉದ್ಘಾಟನೆಯನ್ನು ತುಳುನಾಡ ರಕ್ಷಣಾ ವೇದಿಕೆ ಬಂಟ್ವಾಳ ಇದರ ಅಧ್ಯಕ್ಷರಾದ ರಮೇಶ್ ಶೆಟ್ಟಿ ಮಜಲೋಡಿ ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ ಗುರುವಾಯನಕೆರೆ ಯೋಜನೆ ಕಚೇರಿಯ ತಾಲೂಕು ಯೋಜನಾಧಿಕಾರಿ ಯಶವಂತ ಎಸ್ ಒಕ್ಕೂಟದ ಅಧ್ಯಕ್ಷರು ಹಾಗೂ ತಾಲೂಕಿನ ಜನಜಾಗೃತಿ ವೇದಿಕೆಯ ಸದಸ್ಯ ಪದ್ಮನಾಭ ಸಾಲ್ಯಾನ್ ಗ್ರಾಮ ಸಮಿತಿ ಅಧ್ಯಕ್ಷರಾದ ಗಣೇಶ್ ಆಚಾರ್ಯ ವಲಯ ಮೇಲ್ವಿಚಾರಕ ವಸಂತ್ ಕುಮಾರ್ G ಬಸವನಗುಡಿಯ ಸೇವಾ ಪ್ರತಿನಿಧಿಗಳಾದ ಶ್ರೀಮತಿ ರೋಹಿಣಿ ಶ್ರೀಮತಿ ಸವಿತಾ ಹಾಗೂ ಒಕ್ಕೂಟ ಪದಾಧಿಕಾರಿಗಳು ಸಂಘದ ಸದಸ್ಯರು ಉಪಸ್ಥಿತರಿದ್ದರು.
