ಮಂಗಳೂರು: ನಗರದ ಜಿಎಚ್‌ಎಸ್ ರಸ್ತೆಯ ಕ್ಲಿನಿಕ್ ಒಂದರ ಆವರಣದಲ್ಲಿ ಸತೀಶ್ ರಾವ್ ಅವರ ಕೈಯಲ್ಲಿದ್ದ ಚಿನ್ನದ ಬ್ರಾಸ್‌ಲೆಟ್ ಅನ್ನು ಪರಿಚಿತರೇ ಕಸಿದುಕೊಂಡು ಕುರಿತಂತೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ 12ರಂದು ಸತೀಶ್ ರಾವ್ ಅವರು ಮಗನನ್ನು ಚಿಕಿತ್ಸೆಗಾಗಿ ಕ್ಲಿನಿಕ್‌ಗೆ ಕರೆದುಕೊಂಡು ಹೋಗಿದ್ದು, ಸಂಜೆ 7.30ರ ವೇಳೆಗೆ ವಾಪಸು ಬರುತ್ತಿರುವಾಗ ಪರಿಚಿತರಾದ ಗೋವಿಂದರಾಜ್ ನಾಯಕ್ ಮತ್ತು ಅವರ ಮಗ ಗಿರೀಶ್ ನಾಯಕ್ ಅವರು ಸತೀಶ್ ರಾವ್ ಅವರ ಕೈಯಲ್ಲಿದ್ದ 22.50 ಗ್ರಾಂ ತೂಕದ ಚಿನ್ನದ ಬ್ರಾಸ್‌ಲೆಟ್ ಅನ್ನು ಬಲವಂತವಾಗಿ ಕಿತ್ತುಕೊಂಡು ಹೋಗಿದ್ದಾರೆ.
ಬ್ರಾಸ್‌ಲೆಟ್‌ನ ಬೆಲೆ ಸುಮಾರು 1.35 ಲಕ್ಷ ರೂಪಾಯಿ ಆಗಿದೆ. ಈ ಘಟನೆ ಕ್ಲಿನಿಕ್‌ನ ಸಿಸಿ ಕೆಮರಾದಲ್ಲಿ ದಾಖಲಾಗಿದೆ. ಘಟನೆಯಿಂದ ಸತೀಶ್ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.