Friday, April 19, 2024
spot_img
More

    Latest Posts

    ಗೂಗಲ್ ಟ್ರಾನ್ಸ್​ಲೇಶನ್ ಗೆ ‘ಕೊಂಕಣಿ’ ಸೇರ್ಪಡೆ

    ಬೆಂಗಳೂರು: ಅಂತರ್ಜಾಲ ಆಧಾರಿತ ಭಾಷಾಂತರ ಅಪ್ಲಿಕೇಶನ್ ಆದ ಗೂಗಲ್ ಟ್ರಾನ್ಸ್ ಲೇಶ ನ್ ಗೆ ಹೊಸದಾಗಿ ಕೊಂಕಣಿಯನ್ನು ಸೇರಿಸಿಕೊಳ್ಳಲಾಗಿದೆ ಎಂದು ಗೂಗಲ್ ಸಂಸ್ಥೆ ಪ್ರಕಟನೆ ನೀಡಿದೆ.

    ಈಗಾಗಲೇ 100ಕ್ಕೂ ಅಧಿಕ ಭಾಷೆಗಳು ಗೂಗಲ್ ಟ್ರಾನ್ಸ್​ಲೇಟ್​ನಲ್ಲಿದ್ದು, ಭಾರತೀಯ ಭಾಷೆಗಳಿಗೂ ಗೂಗಲ್ ಮಾನ್ಯತೆ ನೀಡಿದೆ.ಇದೀಗ ಗೂಗಲ್ ಟ್ರಾನ್ಸ್​ಲೇಟ್​​ನಲ್ಲಿ ಹೊಸದಾಗಿ ಭಾರತೀಯ ಭಾಷೆಗಳಾದ ಅಸ್ಸಾಮಿ, ಭೋಜ್​ಪುರಿ, ಡೋಗ್ರ, ಕೊಂಕಣಿ, ಮೈಥಿಲಿ, ಮಣಿಪುರಿ ಮತ್ತು ಮಿಜೋ ಭಾಷೆಗಳು ಸೇರ್ಪಡೆಗೊಂಡಿದೆ. ಗೂಗಲ್ ಟ್ರಾನ್ಸ್​ಲೇಟ್​​ನಲ್ಲಿ ಕೊಂಕಣಿ ಸೇರ್ಪಡೆ ಮಾಡಿರುವ ಕುರಿತು ಕೊಂಕಣಿ ಭಾಷಾ ಪ್ರೇಮಿಗಳು ಗೂಗಲ್‌ನ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಕೊಂಕಣಿಯನ್ನು ಗೋವಾ, ಕರ್ನಾಟಕ ಕರಾವಳಿಯಲ್ಲಿ ಮತ್ತು ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ವ್ಯಾಪಕವಾಗಿ ಮಾತನಾಡುತ್ತಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss